Advertisement

ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಪ್ರತಿಭಟನೆ

05:17 PM Jul 08, 2022 | Team Udayavani |

ದಾವಣಗೆರೆ: ರಾಜ್ಯ ಕಟ್ಟಡ ನಿರ್ಮಾಣಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರದಕುರಿತು ನ್ಯಾಯಾಂಗ ತನಿಖೆ ನಡೆಸಬೇಕುಎಂದು ಒತ್ತಾಯಿಸಿ ಗುರುವಾರ ಕರ್ನಾಟಕರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲುಒಡೆಯುವ ಕ್ವಾರಿ ಕಾರ್ಮಿಕರ ಸಂಘದನೇತೃತ್ವದಲ್ಲಿ ಕಾರ್ಮಿಕರು ನಗರದಉಪವಿಭಾಗಾಧಿಕಾರಿ ಕಚೇರಿ ಎದುರುಪ್ರತಿಭಟನೆ ನಡೆಸಿದರು.

Advertisement

ಕಟ್ಟಡ ಕಾರ್ಮಿಕರ ಕಲ್ಯಾಣಮಂಡಳಿಯಲ್ಲಿ ಆರೋಗ್ಯ ತಪಾಸಣೆ,ಕೊರೊನಾ ಪರಿಹಾರದ ನೆಪದಲ್ಲಿನೂರಾರು ಕೋಟಿ ರೂ. ಖರ್ಚು ಮಾಡಿಕಳಪೆ ಆಹಾರ ಸಾಮಾಗ್ರಿಗಳನ್ನು ಖರೀದಿಸಿಅಧಿಕಾರಿಗಳು ಮತ್ತು ಜನಪ್ರತಿನಿಧಿಗಳುಕಟ್ಟಡ ನಿರ್ಮಾಣ ಕಾರ್ಮಿಕರಿಗೆ ವಂಚನೆಮಾಡಿದ್ದಾರೆ.

ಸರ್ಕಾರ ಕೂಡಲೇ ಕಲ್ಯಾಣಮಂಡಳಿಯಲ್ಲಿನ ಅವ್ಯವಹಾರದ ಬಗ್ಗೆನ್ಯಾಯಾಂಗ ತನಿಖೆ ಮಾಡಿ ತಪ್ಪಿತಸ್ಥರವಿರುದ್ಧ ಕಾನೂನಿನ ರೀತಿ ಮೊಕದ್ದಮೆದಾಖಲು ಮಾಡಿ ಆಗಿರುವ ನಷ್ಟವನ್ನುಸಂಬಂಧಿತರಿಂದಲೇ ವಸೂಲಿ ಮಾಡಬೇಕುಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next