ದಾವಣಗೆರೆ: ಕನ್ನಡ ರಂಗಭೂಮಿ ಕ್ಷೇತ್ರದಲ್ಲಿಸಿ.ಜಿ. ಕೃಷ್ಣಸ್ವಾಮಿ ಅಪರೂಪದ ಸಾಧನೆ ಮಾಡಿದಮಹಾನ್ ಶಕ್ತಿ ಎಂದು ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ ಬಣ್ಣಿಸಿದರು.ಮಂಗಳವಾರ ನಗರದ ಕುವೆಂಪು ಕನ್ನಡಭವನದಲ್ಲಿ ಸ್ಫೂರ್ತಿ ಸೇವಾ ಸಂಘದಿಂದ ಆಯೋಜಿಸಿದ್ದ ಸಿಜಿಕೆ ಬೀದಿ ರಂಗ ದಿನಾಚರಣೆ, ರಂಗ ಕಾರ್ಯಾಗಾರ ಹಾಗೂ ಗ್ರಾಮೀಣಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸಿಜಿಕೆ ತಮ್ಮ ದೈಹಿಕ ಅಂಗವೈಕಲ್ಯವನ್ನೂ ಮೀರಿರಂಗಭೂಮಿಯಲ್ಲಿ ಸಾಧನೆ ಮಾಡಿದರು. ಮೂಲತಃವೃತ್ತಿಯಲ್ಲಿ ಪ್ರಾಧ್ಯಾಪಕರಾದರೂ ರಂಗಭೂಮಿ, ಕಲೆಅಭಿವೃದ್ಧಿಗೆ ಜೀವನವನ್ನೇ ಮುಡಿಪಾಗಿಟ್ಟರು ಎಂದುಸ್ಮರಿಸಿದರು.ಕಲೆಗೆ ಒಬ್ಬ ವ್ಯಕ್ತಿ ಹಾಗೂ ಸಮಾಜವನ್ನುಪರಿವರ್ತಿಸುವ ದೊಡ್ಡ ಶಕ್ತಿ ಇದೆ. ಪುನೀತ್ ರಾಜ್‌ಕುಮಾರ್ ಅವರನ್ನು ಅವರ ನಟನಾ ಕಲೆಯಿಂದಗುರುತಿಲಾಗುವುದು.
ಹಣ, ಅಂತಸ್ತು ಹಗಲುರಾತ್ರಿ ಇದ್ದಂತೆ. ಬರುತ್ತದೆ, ಹೋಗುತ್ತದೆ.ಆದರೆ ಹೃಯವಂತಿಕೆ, ಮಾನವೀಯತೆ, ಕಲೆಮಾತ್ರ ಕೊನೆಯವರೆಗೆ ಉಳಿಯುತ್ತದೆ. ಮೌಲ್ಯಕೇವಲ ಬಾಯಿಂದ ಉಳಿಯಲಾರದು.ಕ್ರಿಯಾಶೀಲತೆಯಿಂದ ಮಾತ್ರ ಉಳಿಯುತ್ತದೆಎನ್ನುವುದಕ್ಕೆ ಪುನೀತ್ ರಾಜ್‌ಕುಮಾರ್ ಸಾಕ್ಷಿಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಡಾ| ಎಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ, ನಾಡುಕಂಡಂತಹ ಅದ್ಬುತ ರಂಗಕರ್ಮಿ ಸಿ.ಜಿ. ಕೃಷ್ಣಸ್ವಾಮಿರಂಗಭೂಮಿಯಲ್ಲಿನ ಎಲ್ಲ ಅಸಾಧ್ಯತೆಗಳನ್ನುಸಾಧ್ಯತೆ ಮಾಡಿದವರು. ಅವರು ರಂಗಭೂಮಿಯವಿಶಿಷ್ಟತೆಗೆ ಹೆಸರಾಗಿದ್ದಾರೆ. ರಂಗಭೂಮಿಯಸಾಂಸ್ಕೃತಿಕ ತಲ್ಲಣಗಳನ್ನು ಅಭಿವ್ಯಕ್ತಿಗೊಳಿಸಿದವರು.