Advertisement

ಕಾಂಗ್ರೆಸ್‌ಗೆ ಅಧಿಕಾರದ ಚುಕ್ಕಾಣಿ

03:37 PM Jun 27, 2022 | Team Udayavani |

ದಾವಣಗೆರೆ: ಮುಂದಿನ 2023ರ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಅಧಿಕಾರಕ್ಕೆ ಬರಲಿದೆ ಎಂದು ಪಕ್ಷದ ಸಾಂಸ್ಥಿಕಚುನಾವಣೆಗಳ ಉಸ್ತುವಾರಿ ಅಭಿಲಾಷ್‌ ರಾವ್‌ವಿಶ್ವಾಸ ವ್ಯಕ್ತಪಡಿಸಿದರು.ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರನಡೆದ ಸಭೆಯಲ್ಲಿ ಮಾತನಾಡಿದ ಅವರು,ರಾಷ್ಟ್ರಪಿತ ಮಹಾತ್ಮ ಗಾಂಧಿ, ದೇಶದಮೊದಲ ಪ್ರಧಾನಿ ಜವಾಹರ ಲಾಲ್‌ ನೆಹರುಒಳಗೊಂಡಂತೆ ಅನೇಕರು ಕಟ್ಟಿರುವ ಕಾಂಗ್ರೆಸ್‌ನ್ನು ರಾಜ್ಯದಲ್ಲಿ ಮತ್ತೂಮ್ಮೆ ಅಧಿಕಾರಕ್ಕೆ ತರುವನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು.

Advertisement

ಮುಂದಿನಚುನಾವಣೆಯಲ್ಲಿ ಕರ್ನಾಟಕ ಮಾತ್ರವಲ್ಲತೆಲಂಗಾಣದಲ್ಲೂ ಕಾಂಗ್ರೆಸ್‌ ಅಧಿಕಾರಕ್ಕೆಬರಲಿದೆ ಎಂದರು.ಕೇಂದ್ರ ಮತ್ತು ರಾಜ್ಯದಲ್ಲಿ ಭ್ರಷ್ಟಸರ್ಕಾರಗಳಿವೆ. ಡಬ್ಬಲ್‌ ಇಂಜಿನ್‌ಸರ್ಕಾರಗಳು ಭ್ರಷ್ಟಾಚಾರದಲ್ಲಿ ತೊಡಗಿರುವಬಗ್ಗೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರುಜನರಿಗೆ ತಿಳಿಸಬೇಕು. ಸರ್ಕಾರಗಳವೈಫಲ್ಯಗಳ ಬಗ್ಗೆ ಜನಾರಿವು ರೂಪಿಸಬೇಕು.ಒಟ್ಟು ಮತದಾರರಲ್ಲಿ ಅರ್ಧದಷ್ಟುಇರುವ ಮಹಿಳೆಯರಿಗೆ ಪ್ರಾಮುಖ್ಯತೆಕೊಡಬೇಕಾಗಿದೆ. ಕಾಂಗ್ರೆಸ್‌ ಮಹಿಳೆಯರಿಗೆ ಪಕ್ಷದಲ್ಲಿ ಶೇ. 33ರಷ್ಟು ಸ್ಥಾನಗಳನ್ನುಕಡ್ಡಾಯವಾಗಿ ನೀಡಲಿದೆ.

ಸೋನಿಯಾಗಾಂಧಿ ಮತ್ತು ರಾಹುಲ್‌ ಗಾಂಧಿ ಯವರುದೇಶ, ಜನರ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ.ಎಲ್ಲರೂ ಸಂಘಟಿತರಾಗಿ ಮತ್ತೆ ಪಕ್ಷವನ್ನುಅಧಿಕಾರಕ್ಕೆ ತರೋಣ ಎಂದು ತಿಳಿಸಿದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆಸಗೋಡುಜಯಸಿಂಹ ಮಾತನಾಡಿ, ಕಾಂಗ್ರೆಸ್‌ನಲ್ಲಿರುವನಾಯಕರು ಕೇವಲ ಅವರ ಜಾತಿಯವರನ್ನುಸುತ್ತಮುತ್ತ ಇಟ್ಟುಕೊಳ್ಳಬಾರದು. ಎಲ್ಲ ಜಾತಿ,ಧರ್ಮದವರನ್ನು ಜೊತೆಯಲ್ಲಿಟ್ಟುಕೊಳ್ಳಬೇಕು.ಕಾಂಗ್ರೆಸ್‌ಗೆ ಹಿನ್ನಡೆ ಇಲ್ಲ. ಕಾಂಗ್ರೆಸ್‌ ದೇಶಮತ್ತು ರಾಜ್ಯಕ್ಕೆ ಅನಿವಾರ್ಯವಾಗಿದೆ.

ಬಿಜೆಪಿತಾತ್ಕಾಲಿಕವಾಗಿ ಅ ಧಿಕಾರದಲ್ಲಿ ಇದೆ. ಕಾಂಗ್ರೆಸ್‌ನಿಂದ ಮಾತ್ರ ಜನರಿಗೆ ಒಳಿತಾಗಲು ಸಾಧ್ಯಎಂದು ಪ್ರತಿಪಾದಿಸಿದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷಎಚ್‌.ಬಿ. ಮಂಜಪ್ಪ ಮಾತನಾಡಿ, ಪಕ್ಷದ ಸಾಂಸ್ಥಿಕಚುನಾವಣೆಯಲ್ಲಿ ಶಾಂತಿ ರೀತಿಯಿಂದ ನಡೆದುಕೊಳ್ಳಬೇಕು. ವೀಕ್ಷಕರು ಯಾವುದೇ ಚುನಾವಣಾಅಭ್ಯರ್ಥಿ ಆಯ್ಕೆ ಮಾಡಲು ಬಂದಿಲ್ಲ. ಸಭೆ ಪಕ್ಷಕಟ್ಟುವ ಉದ್ದೇಶದಿಂದ ಕರೆದಿದ್ದೇವೆ. ಟಿಕೆಟ್‌ಕೊಡುವುದಕ್ಕಲ್ಲ. ಎಲ್ಲರೂ ಸೇರಿ ಜಿಲ್ಲೆಯಲ್ಲಿಕಾಂಗ್ರೆಸ್‌ ಬಲಿಷ್ಠಗೊಳಿಸುವ ಕೆಲಸ ಮಾಡೋಣಎಂದು ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next