Advertisement

ದಾವಣಗೆರೆ ವಿವಿ ತಂಬಾಕು ಮುಕ್ತ

05:20 PM Jun 25, 2022 | Team Udayavani |

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯವನ್ನುತಂಬಾಕು ಮುಕ್ತ ವಿಶ್ವವಿದ್ಯಾನಿಲಯ ಎಂದುಶುಕ್ರವಾರ ಅಧಿಕೃತ ವಾಗಿ ಘೋಷಿಸಲಾಯಿತು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ದಾವಣಗೆರೆ ವಿಶ್ವ ವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗ, ಜಿಲ್ಲಾ ತಂಬಾಕುನಿಯಂತ್ರಣ ಕೋಶ ಸಂಯುಕ್ತಾಶ್ರಯದಲ್ಲಿವಿಶ್ವವಿದ್ಯಾನಿಲಯದ ಘಟಿಕೋತ್ಸವದ ಪ್ರತಿಮೆಮುಂದೆ ಅಪರ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್‌,ಪ್ರಭಾರ ಪ್ರೊ| ಪಿ. ಲಕ್ಷ್ಮಣ್‌, ಕುಲಸಚಿವೆ ಬಿ.ಬಿ.ಸರೋಜ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗರಾಜಮತ್ತು ಜಿಲ್ಲಾ ಸರ್ವೆàಕÒ‌ಣಾ ಧಿ ಕಾರಿ ಡಾ| ಜಿ.ಡಿ.ರಾಘವನ್‌ ಇತರರು ತಂಬಾಕು ಮುಕ್ತ ದಾವಣಗೆರೆವಿಶ್ವವಿದ್ಯಾನಿಲಯ ಎಂಬ ನಾಮಫಲಕವುಳ್ಳ ಬಲೂನ್‌ಗಳ ಗುತ್ಛ ಹಾರಿಸುವುದರ ಮೂಲಕ ಉದ್ಘಾಟಿಸಿದರು.

Advertisement

ಘೋಷಣಾ ಪ್ರಮಾಣಪತ್ರ ಸಹ ಬಿಡುಗಡೆಮಾಡಲಾಯಿತು. ಇದರೊಂದಿಗೆ ದಾವಣಗೆರೆವಿಶ್ವವಿದ್ಯಾಲಯ ರಾಜ್ಯದ ಮೊಟ್ಟ ಮೊದಲ ತಂಬಾಕುಮುಕ್ತ ದಾವಣಗೆರೆ ವಿಶ್ವವಿದ್ಯಾನಿಲಯವಾಗಿದೆ.ಎಂಬಿಎ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿಜಿಲ್ಲಾ ಸರ್ವೆàಕ್ಷಣಾಧಿ ಕಾರಿ ಡಾ| ಜಿ.ಡಿ.ರಾಘವನ್‌ಮಾತನಾಡಿ, ದಾವಣಗೆರೆ ವಿಶ್ವ ವಿದ್ಯಾನಿಲಯದಆವರಣವನ್ನು ತಂಬಾಕು ಮುಕ್ತ ಮಾಡುವ ನಿಟ್ಟಿನಲ್ಲಿಜಿಲ್ಲಾ ತಂಬಾಕು ನಿಯಂತ್ರಣ ಕೋಶ ಶ್ರಮಿಸಿರುವಹಿನ್ನೆಲೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆವಿಶ್ವವಿದ್ಯಾಲಯವನ್ನು ತಂಬಾಕು ಮುಕ್ತ ದಾವಣಗೆರೆವಿಶ್ವವಿದ್ಯಾನಿಲಯ ಎಂದು ಘೋಷಿಸಲಾಗಿದೆಹೇಳಿದರು.

ಅಪರ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್‌ಮಾತನಾಡಿ, ದಾವಣಗೆರೆ ವಿಶ್ವ ವಿದ್ಯಾನಿಲಯದಆವರಣದಲ್ಲಿರುವ ಎಲ್ಲ ಕಟ್ಟಡಗಳ ಮುಂದೆ ತಂಬಾಕುಮುಕ್ತ ವಲಯ, ತಂಬಾಕು ಮುಕ್ತ ಆವರಣ ಮತ್ತುತಂಬಾಕು ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸ್ವಾಗತ ಎಂಬನಾಮಫಲಕಗಳನ್ನು ಅಳವಡಿಸಲಾಗಿದೆ. ಆವರಣದಒಳಗೆ ತಂಬಾಕು ಉತ್ಪನ್ನಗಳನ್ನು ಬಳಸದಂತಹವಾತಾವರಣ ವಿಶ್ವವಿದ್ಯಾನಿಲಯದಲ್ಲಿ ಕಂಡುಬಂದಿರುವ ಪ್ರಯುಕ್ತ ವಿಶ್ವವಿದ್ಯಾ ನಿಲಯವನ್ನುತಂಬಾಕು ಮುಕ್ತ ಎಂದು ಘೋಷಿಸಿರುವುದುಸೂಕ್ತವಾಗಿದೆ ಎಂದರು.

ವಿದ್ಯಾರ್ಥಿಗಳು ತಪ್ಪು ಮಾಡುವುದು ಸಹಜ.ಆದರೆ, ಪದೆ ಪದೇ ತಪ್ಪು ಮಾಡುವುದು ದಡ್ಡತನ.ತಾವೆಲ್ಲರೂ ತಮ್ಮ ಸಹಪಾಠಿಗಳು, ಕುಟುಂಬದವರುಹಾಗೂ ನೆರೆಹೊರೆಯವರಿಗೂ ತಂಬಾಕು ಉತ್ಪನ್ನಗಳಬಳಕೆಯಿಂದ ದೇಹಾರೋಗ್ಯದ ಮೇಲೆ ಆಗುವಂತಹದುಷ್ಪರಿಣಾಮಗಳ ಬಗ್ಗೆ ತಿಳಿಸಿ, ಜಾಗೃತಿ ಮೂಡಿಸುವಮೂಲಕ ತಂಬಾಕು ಮುಕ್ತ ಸಮಾಜ ನಿರ್ಮಾಣಮಾಡಬೇಕು ಎಂದು ಮನವಿ ಮಾಡಿದರು.ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ| ಪಿ.ಲಕ್ಷ್ಮಣ್‌ಮಾತನಾಡಿ, ಮುಂದಿನ ಪೀಳಿಗೆಯನ್ನುತಂಬಾಕು ಉತ್ಪನ್ನಗಳ ಬಳಕೆ, ವ್ಯಸನದಿಂದ ಸಂರಕ್ಷಣೆಮಾಡುವ ನಿಟ್ಟಿನಲ್ಲಿ ಸ್ನಾತಕೋತ್ತರ ಪದವೀಧರರಿಗೆಕಾರ್ಯಕ್ರಮ ಆಯೋಜಿಸಲಾಗಿದೆ.

ತಂಬಾಕುಉತ್ಪನ್ನಗಳ ವಿಷಯದ ಕುರಿತು ಅರಿವು, ಆಚಾರ,ವಿಚಾರ, ಪ್ರಚಾರದ ಮೂಲಕ ಜೀವನದ ಮೌಲ್ಯಗಳನ್ನುಅರಿತುಕೊಳ್ಳಬೇಕು. ತಂಬಾಕಿನ ದುಷ್ಪರಿಣಾಮಗಳಬಗ್ಗೆ ಮೊದಲು ಅರಿತು ನಂತರ ವಿಚಾರದ ರೂಪದಲ್ಲಿಪ್ರಸ್ತುತ ಪಡಿಸುವ ಮುಖಾಂತರ ಸಾರ್ವಜನಿಕರಮನ ಗೆಲ್ಲುವಂತಹ ಕೆಲಸ ಯುವಕರದ್ದಾಗಿರುತ್ತದೆಎಂದು ತಿಳಿಸಿದರು

Advertisement
Advertisement

Udayavani is now on Telegram. Click here to join our channel and stay updated with the latest news.

Next