Advertisement

ಕಾನೂನು ಕಾರ್ಯಾಗಾರ ಸದು ಪಯೋಗಪಡಿಸಿಕೊಳ್ಳಿ

06:40 PM Oct 07, 2021 | Team Udayavani |

ಜಗಳೂರು: ಕಾನೂನು ಕುರಿತಉಪನ್ಯಾಸ ಕಾರ್ಯಾಗಾರಗಳುವಕೀಲ ವೃತ್ತಿಗೆ ವರದಾನವಾಗಲಿದೆಎಂದು ಸಿವಿಲ್‌ ಮತ್ತು ಜೆಎಂಎಫ್‌ಸಿನ್ಯಾಯಾಲಯದ ನ್ಯಾಯಾ ಧೀಶಜಿ. ತಿಮ್ಮಯ್ಯ ಹೇಳಿದರು.

Advertisement

ಪಟ್ಟಣದ ಸಿವಿಲ್‌ ಮತ್ತುಜೆಎಂಎಫ್‌ಸಿ ನ್ಯಾಯಾಲಯದಆವರಣದಲ್ಲಿರುವ ವಕೀಲರ ಸಂಘದಸಭಾಂಗಣದಲ್ಲಿ ಏರ್ಪಡಿಸಿದ್ದಕ್ರಿಮಿನಲ್‌ ಕಾನೂನು ಸಂಬಂಧಿತಕಾರ್ಯಾಗಾರವನ್ನು ಉದ್ಘಾಟಿಸಿಅವರು ಮಾತನಾಡಿದರು. ಹಿರಿಯಸಂಪನ್ಮೂಲ ವಕೀಲರಿಂದ ಕಾರ್ಯಾಗಾರಗಳಲ್ಲಿ ಲಭ್ಯವಾಗುವ ಕಾನೂನಾತ್ಮಕಸಲಹೆಗಳು ನ್ಯಾಯಾಂಗ ಸೇವೆಯಲ್ಲಿ ಉತ್ಸಾಹ ಮೂಡಿಸುತ್ತವೆ.

ಕಾನೂನುಪದವಿ ವಿದ್ಯಾಭ್ಯಾಸದ ಹಂತದಲ್ಲಿ ಖ್ಯಾತವಕೀಲರ ಮೌಲ್ಯಯುತ ಉಪನ್ಯಾಸಮಾಲಿಕೆಗಳು ನನ್ನನ್ನು ನ್ಯಾಯಾ ಧೀಶಹುದ್ದೆ ಅಲಂಕರಿಸಲು ಪ್ರೇರೇಪಿಸಿದವುಎಂದು ಸ್ಮರಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ಕಾನೂನಿಗೆ ಸಂಬಂಧಿಸಿದಕಾರ್ಯಾಗಾರಗಳು ಜರುಗಿದ್ದವು.ಬಹುದಿನಗಳ ನಂತರ ತಾಲೂಕಿನಲ್ಲಿಮೊದಲ ಬಾರಿಗೆ ಭೌತಿಕ ಕಾರ್ಯಾಗಾರಆಯೋಜನೆಗೆ ಅವಕಾಶ ದೊರೆತಿದೆ.ಇದನ್ನು ಪ್ರತಿಯೊಬ್ಬ ವಕೀಲರೂಸದುಪಯೋಗ ಪಡಿಸಿಕೊಳ್ಳಬೇಕೆಂದುಕರೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿರಿಷ್ಯಂತ್‌ ಮಾತನಾಡಿ, ಕೊಲೆ ಅಥವಾಅತ್ಯಾಚಾರ, ಕಳ್ಳತನದಂತಹ ಹಲವಾರುಪ್ರಕರಣಗಳಲ್ಲಿ ಆರೋಪಿಗಳನ್ನುಪತ್ತೆ ಹಚ್ಚಿದ ನಂತರ ಚಾರ್ಜ್‌ಶೀಟ್‌ ತಯಾರಿಕೆಯಿಂದ ಕನ್ವೆಷನಲ್‌ ಹಂತಗಳವರೆಗೆ ಸಾಕ್ಷ್ಯಾದಾರಗಳ ಸಂಗ್ರಹ ಅತಿ ಮುಖ್ಯ. ಪ್ರಕರಣಗಳನ್ನುಭೇದಿಸುವ ಹಾಗೂ ಎಫ್‌ಎಸ್‌ಎಲ್‌ ಸೇರಿದಂತೆ ಇತರೆ ಸಾಕ್ಷಿಗಳನ್ನುಸಂಗ್ರಹಿಸುವ ತರಬೇತಿಯನ್ನು ಪೊಲೀಸ್‌ಇಲಾಖೆಯವರು ಪಡೆದಿರುತ್ತೇವೆಎಂದು ತಿಳಿಸಿದರು.

Advertisement

ಪ್ರಾಸಿಕ್ಯೂಟರ್‌ ಹಾಗೂ ಪೊಲೀಸ್‌ಇಲಾಖೆ ಸಮನ್ವಯದಿಂದ ಕೆಲಸಮಾಡಿದರೆ ಆರೋಪಿತರಿಗೆ ಶಿಕ್ಷೆಕೊಡಿಸಬಹುದು. ಪ್ರಕರಣ ದಾಖಲಾಗಿಪತ್ತೆ ಹಚ್ಚುವಾಗ ಇರುವ ಆಸಕ್ತಿಯನ್ನುನಂತರ ಕೆಲಸದ ಒತ್ತಡಗಳಲ್ಲಿ ನಿರ್ಲಕ್ಷಿಸದೆಎಲ್ಲಾ ಮಾಹಿತಿ, ಸಾಕ್ಷಿಗಳ ಸಂಗ್ರಹಣೆಮಾಡಬೇಕು. ಆಗ ಕಾನೂನಿನಡಿನ್ಯಾಯಬದ್ದ ತೀರ್ಪು ಕೊಡಿಸಲು ಸಾಧ್ಯಎಂದರು.

ಮಾನವ ಹಕ್ಕುಗಳ ಆಯೋಗದಸದಸ್ಯ ಎಲ್‌.ಎಚ್‌. ಅರುಣಕುಮಾರ್‌ಮಾತನಾಡಿ, ಕಾನೂನು ಅರಿವು ನೆರವುಕಾರ್ಯಾಗಾರದಂತಹ ಕಾನೂನುಸೇವಾ ಕಾರ್ಯಕ್ರಮಗಳ ಆಯೋಜನೆಗೆರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾಪ್ರಾ ಧಿಕಾರಗಳಲ್ಲಿನ ಅನುದಾನವನ್ನುಜಿಲ್ಲಾ ಹಂತಗಳಿಗೂ ವಿಸ್ತರಿಸಲುಒತ್ತಡ ತರಬೇಕಿದೆ. ಅಖೀಲಭಾರತವಕೀಲರ ಸಂಘದ ನೇತೃತ್ವದಲ್ಲಿ ಎಪಿಪಿಮತ್ತು ನ್ಯಾಯಾ ಧೀಶರ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಆನ್‌ಲೈನ್‌ಮುಖಾಂತರ ತರಬೇತಿ ನೀಡಲಾಗಿದೆ.

ಕಳೆದ ಮೂರು ವರ್ಷಗಳಿಂದ ಹೆಚ್ಚುಕಾರ್ಯಕ್ರಮಗಳನ್ನು ನಡೆಸಲಾಗಿದೆ.ಕಾನೂನು ಸೇವಾ ಪ್ರಾಧಿ ಕಾರಗಳು ಸದಾವಕೀಲರ ಧ್ವನಿಯಾಗಿ ಕುಂದುಕೊರತೆಗಳನ್ನು ಈಡೇರಿಸುತ್ತದೆ ಎಂದರು.ಎಐಎಲ್‌ಯು ರಾಜ್ಯ ಸಮಿತಿ ಸದಸ್ಯಹಾಗೂ ಹಿರಿಯ ವಕೀಲ ಶಂಕ್ರಪ್ಪ ಅವರುಉಪನ್ಯಾಸ ನೀಡಿದರು.

ಎಎಸ್‌ಪಿ ಕನ್ನಿಕಾ,ಸರ್ಕಾರಿ ಸಹಾಯಕ ಅಭಿಯೋಜಕಿ ಡಿ.ರೂಪ, ಸಿಪಿಐ ಮಂಜುನಾಥ್‌ ಪಂಡಿತ್‌,ಪಿಎಸ್‌ಐ ಸಂತೋಷ್‌ ಬಾಗೋಜಿ,ವಕೀಲರ ಸಂಘದ ಪದಾ ಧಿಕಾರಿಗಳಾದವೈ. ಹನುಮಂತಪ್ಪ, ರುದ್ರೇಶ್‌,ತಿಪ್ಪೇಸ್ವಾಮಿ, ಆರ್‌. ಓಬಳೇಶ್‌, ಡಿ.ಶ್ರೀನಿವಾಸ್‌, ಕರಿಬಸಪ್ಪ ಮೊದಲಾದವರುಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next