Advertisement

ಅಗ್ನಿಪಥ ಯೋಜನೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

08:46 PM Jun 24, 2022 | Team Udayavani |

ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೆತರಲು ಉದ್ದೇಶಿಸಿರುವ ಅಗ್ನಿಪಥಯೋಜನೆಯನ್ನು ಕೈ ಬಿಡಬೇಕುಎಂದು ಒತ್ತಾಯಿಸಿ ಗುರುವಾರ ಅಖೀಲಭಾರತ ಯುವಜನ ಫೆಡರೇಷನ್‌(ಎಐವೈಎಫ್‌) ಕಾರ್ಯಕರ್ತರು ನಗರದಉಪವಿಭಾಗಾಧಿಕಾರಿ ಕಚೇರಿ ಎದುರುಪ್ರತಿಭಟನೆ ನಡೆಸಿದರು.ಎಐವೈಎಫ್‌ ರಾಜ್ಯ ಉಪಾಧ್ಯಕ್ಷಆವರಗೆರೆ ವಾಸು ಮಾತನಾಡಿ,ಕೇಂದ್ರ ಸರ್ಕಾರ ಅಗ್ನಿಪಥ್‌ ಯೋಜನೆಜಾರಿಗೆ ತರುವ ಮೂಲಕ ದೇಶದಸೈನಿಕ ವ್ಯವಸ್ಥೆಯನ್ನೇ ನಾಶ ಮಾಡಲುಮುಂದಾಗಿರುವುದನ್ನು ಅಖೀಲ ಭಾರತಯುವಜನ ಫೆಡರೇಷನ್‌ ಖಂಡಿಸುತ್ತದೆ.ದೇಶದ ಸೇವೆಗೆ ಸೇರಬೇಕು,

Advertisement

ದೇಶಸೇವೆಯ ಜೊತೆಗೆ ಕುಟುಂಬದ ನಿರ್ವಹಣೆಮಾಡಬೇಕು ಎಂಬ ಮಹೋನ್ನತ ಉದ್ದೇಶಹೊಂದಿರುವ ಲಕ್ಷಾಂತರ ಯುವಕರಿಗೆಸರ್ಕಾರದ ನೂತನ ಯೋಜನೆ ಅಗ್ನಿಪಥ್‌ಯೋಜನೆ ಅನ್ಯಾಯ ಮಾಡುತ್ತಿದೆ.ಆದ್ದರಿಂದ ಕೂಡಲೇ ಅಗ್ನಿಪಥ್‌ ಯೋಜನೆಕೈ ಬಿಡಬೇಕು ಎಂದು ಒತ್ತಾಯಿಸಿದರು.ದೇಶದ ಯುವಜನರು ಬಯಸುತ್ತಿರುವುದು ಕಾಯಂ ಉದ್ಯೋಗವೇ ಹೊರತುತಾತ್ಕಾಲಿಕ ಉದ್ಯೋಗ ಅಲ್ಲ.

ಅಗ್ನಿಪಥಯೋಜನೆಯಿಂದ ಕೇವಲ ನಾಲ್ಕುವರ್ಷಗಳಿಗೆ ಸೇನೆಯಲ್ಲಿ ತಾತ್ಕಾಲಿಕನೇಮಕಾತಿ ಮಾಡಿಕೊಂಡು ಆ ನಂತರಅವರನ್ನು ಅಲ್ಪ ಮೊತ್ತ ಹಾಗೂ ಒಂದುಪ್ರಮಾಣಪತ್ರ ನೀಡಿ ಬಿಡುಗಡೆಗೊಳಿಸಿದರೆಅವರ ಮುಂದಿನ ಭವಿಷ್ಯವೇನು ಎಂಬಬಗ್ಗೆ ಸರ್ಕಾರ ಯೋಚನೆ ಮಾಡಬೇಕು.ಪ್ರಾರಂಭಿಕ ಹಂತದಲ್ಲಿ ನೀಡಲಾಗುವಂತಹಭರವಸೆ, ಆಶ್ವಾಸನೆ ಖಂಡಿತವಾಗಿಯೂಅನುಷ್ಠಾನಕ್ಕೆ ಬರುತ್ತವೆಯೇ ಎಂಬುದರಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಯುವಸಮೂಹಕ್ಕೆ ಯಾವುದೇ ರೀತಿಯಲ್ಲೂಅನ್ಯಾಯ ಆಗದಂತೆ ಸೇನೆಗೆ ಸೇರುವಅವಕಾಶ ಮಾಡಿಕೊಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next