Advertisement

ನಿವೇಶನ ಹಂಚಿಕೆಯಲ್ಲಿ ಬಡವರಿಗೆ ಅನ್ಯಾಯ

06:32 PM Oct 05, 2021 | Team Udayavani |

ದಾವಣಗೆರೆ: ದಾವಣಗೆರೆ- ಹರಿಹರನಗರಾಭಿವೃದ್ಧಿ ಪ್ರಾಧಿಕಾರ 2014ರಲ್ಲಿ ನಿರ್ಮಿಸಿದ ಜೆ.ಎಚ್‌. ಪಟೇಲ್‌ ಬಡಾವಣೆಯನಿವೇಶನಗಳನ್ನು ನಿಯ ಮಬಾಹಿರವಾಗಿ ಹಂಚಿಕೆಮಾಡಿ ಬಡವರಿಗೆ ಅನ್ಯಾಯ ಮಾಡಲಾಗಿದೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ ಆರೋಪಿಸಿದರು.

Advertisement

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸುಳ್ಳು ಪ್ರಮಾಣಪತ್ರನೀಡಿ ನಿವೇಶನ ಪಡೆದ ಜಿಲ್ಲೆಯ ಜನಪ್ರತಿನಿಧಿಗಳವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷನ್ಯಾಯಾಲಯದಲ್ಲಿ ಈಗಾಗಲೇ ಪ್ರಕರಣದಾಖಲಿಸಲಾಗಿದ್ದು ವಿಚಾರಣೆ ನಡೆಯುತ್ತಿದೆ ಎಂದರು.
ಕಾನೂನು ಉಲ್ಲಂಘಿಸಿ ನಿವೇಶನ ಪಡೆದ ಪ್ರಭಾವಿಗಳು, ನಿವೇಶನ ಹಾಗೂ ಮನೆಉಳ್ಳವರ ವಿರುದ್ಧವೂ ಉಚ್ಚ ನ್ಯಾಯಾಲಯದಲ್ಲಿದೂರು ದಾಖಲಿಸಲಾಗುವುದು. ಒಟ್ಟು 103ನಿವೇಶನಗಳನ್ನು ನಿಯಮ ಮೀರಿ ನೀಡಲಾಗಿದೆ.ಅದೇ ರೀತಿ ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆಸಂಬಂಧಿಸಿ ದೂಡಾದ ಹಾಲಿ ಆಯುಕ್ತರ ವಿರುದ್ಧವೂ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ.

ನಿವೇಶನ ಹಂಚಿಕೆಯಲ್ಲಿ ಈ ಹಿಂದೆಅಕ್ರಮ ನಡೆದಿರುವುದರಿಂದ ದೂಡಾದಿಂದಈಗ ನಿರ್ಮಿಸಲು ಉದ್ದೇಶಿಸಿರುವ ಹೊಸಬಡಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡುವಂತೆನ್ಯಾಯಾಲಯದ ಮೊರೆ ಹೋಗಲಾಗುವುದುಎಂದು ಹೇಳಿದರು.ನಿವೇಶನ ಹಂಚಿಕೆ ಹಗರಣದಲ್ಲಿಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಪ್ರಮುಖರು ಭಾಗಿಯಾಗಿದ್ದಾರೆ.

ದೂಡಾದಹಾಲಿ ಅಧ್ಯಕ್ಷರು ಸಹ ನಿಯಮ ಉಲ್ಲಂಘಿಸಿನಿವೇಶನ ಪಡೆದಿರುವ ಬಗ್ಗೆ ದಾಖಲೆಗಳಿವೆ.ಆದ್ದರಿಂದ ಅವರು ನೈತಿಕ ಹೊಣೆ ಹೊತ್ತುಕೂಡಲೇ ರಾಜೀನಾಮೆ ನೀಡಬೇಕು. ಇಲ್ಲವೇದೂಡಾ ಅಧ್ಯಕ್ಷ ಸ್ಥಾನ ನೀಡಿದ ಬಿಜೆಪಿಯವರುಅವರಿಂದ ರಾಜೀನಾಮೆ ಪಡೆಯಬೇಕು.ಇಲ್ಲದಿದ್ದರೆ ದೂಡಾ ಕಚೇರಿ ಹಾಗೂ ಬಿಜೆಪಿಕಚೇರಿ ಎದುರು ಶ್ರೀರಾಮಸೇನೆಯಿಂದ ಧರಣಿನಡೆಸಲಾಗುವುದು ಎಂದು ಮುತಾಲಿಕ್‌ ಎಚ್ಚರಿಕೆನೀಡಿದರು.ಶ್ರೀರಾಮಸೇನೆ ಸಂಘಟನೆಯ ಜಿಲ್ಲಾಧ್ಯಕ್ಷಮಣಿ ಸರ್ಕಾರ್‌, ಪ್ರಮುಖರಾದ ಸಾಗರ್‌,ಆಲೂರ ರಾಜಶೇಖರ್‌ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next