Advertisement

ಎಲ್ಲಾ ಮನೆಗಳಿಗೆ ಶುದ್ಧ ನೀರು ಪೂರೈಕೆ ಗುರಿ

04:58 PM Feb 23, 2022 | Team Udayavani |

ದಾವಣಗೆರೆ: ಜಲಜೀವನ್‌ ಮಿಷನ್‌ ಯೋಜನೆಯಡಿ2024ರೊಳಗೆ ಜಿಲ್ಲೆಯ ಎಲ್ಲ ಕಂದಾಯ ಮತ್ತುಜನವಸತಿ ಗ್ರಾಮಗಳ ಮನೆ ಮನೆಗೆ ಶುದ್ಧ ಕುಡಿಯುವನೀರು ಒದಗಿಸುವ ಗುರಿ ಹೊಂದಲಾಗಿದೆ ಎಂದುಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕಅಧಿ ಕಾರಿ ಡಾ| ವಿಜಯಮಹಾಂತೇಶ ದಾನಮ್ಮನವರ್‌ ಹೇಳಿದರು.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿಮಂಗಳವಾರ ಚಿಕ್ಕಮಗಳೂರಿನ ಸೊಸೈಟಿ ಫಾರ್‌ಪೀಪಲ್ಸ್‌ ಇಂಟಿಗ್ರೇಟೆಡ್‌ ಡೆವಲಪ್‌ಮೆಂಟ್‌ಸಂಸ್ಥೆ ಸಹಯೋಗದಲ್ಲಿ ಜಲಜೀವನ್‌ ಮಿಷನ್‌ಕುರಿತು ಗ್ರಾಮ ಪಂಚಾಯತಿ, ನೀರು ಮತ್ತುನೈರ್ಮಲ್ಯ ಸಮಿತಿ ಸದಸ್ಯರಿಗೆ 4 ದಿನಗಳ ಕಾಲಹಮ್ಮಿಕೊಂಡಿರುವ ತರಬೇತಿ ಕಾರ್ಯಾಗಾರ ಉದ್ಘಾಟಿಸಿಅವರು ಮಾತನಾಡಿದರು. ಜಲಜೀವನ್‌ ಮಿಷನ್‌ಯೋಜನೆಯಡಿಯಲ್ಲಿನ ಕಾಮಗಾರಿಗಳುತ್ವರಿತಗತಿಯಲ್ಲಿ ನಡೆಯುತ್ತಿವೆ.

2024ರ ವೇಳೆಗೆನಿಗದಿತ ಗುರಿಯಂತೆ ಶುದ್ಧ ಕುಡಿಯುವ ನೀರುಒದಗಿಸಲಾಗುವುದು ಎಂದರು.ಬದುಕಿಗೆ ನೀರು ಅತಿ ಮುಖ್ಯವಾದದು.ನೀರಿಲ್ಲದೆ ಬದುಕಲು ಅಸಾಧ್ಯ. ವೈಜ್ಞಾನಿಕವಾಗಿಜೀವ ಹುಟ್ಟಿದ್ದು ನೀರಿನಿಂದಲೇ. ಇತಿಹಾಸದಲ್ಲಿಹಲವಾರು ನಾಗರಿಕತೆಗಳು ನದಿಯ ದಂಡೆಯಮೇಲೆ ಹುಟ್ಟಿಕೊಂಡಿವೆ.

ಜೀವಸಂಕುಲಗಳ ಬದುಕಿಗೆಪೋಷಕಾಂಶಗಳಂತೆ ನೀರು ಅತಿ ಮುಖ್ಯ. ನೀರುಸಂತೋಷ, ಶಕ್ತಿ, ಆರೋಗ್ಯ ಮತ್ತು ಧರ್ಮಶ್ರದ್ಧೆಯಮೂಲ, ತಾಯಿಯಂತೆ ನೀರಿನ ಬಗ್ಗೆ ಕಾಳಜಿವಹಿಸುವುದು ಅವಶ್ಯಕವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next