Advertisement

ಭಜನೆಗಿದೆ ಪುಳಕಿತಗೊಳಿಸುವ ಶಕ್ತಿ: ಲಕ್ಷ್ಮೀದೇವಮ್ಮ

02:01 PM Feb 18, 2022 | Team Udayavani |

ದಾವಣಗೆರೆ: ಹಲವಾರು ಕಾರಣಗಳಿಂದಜೀವನದಲ್ಲಿ ಜಿಗುಪ್ಸೆ, ಖನ್ನತೆಗೊಳಗಾದಮನಸ್ಸುಗಳನ್ನು ಪುಳಕಿತಗೊಳಿಸುವಶಕ್ತಿ ಭಜನಾ ಪರಂಪರೆಗೆ ಇದೆ ಎಂದುಕರ್ನಾಟಕ ಜಾನಪದ ಅಕಾಡೆಮಿ ಸದಸ್ಯಚಿಕ್ಕಮಗಳೂರಿನ ಎನ್‌.ಜಿ. ಲಕ್ಷ್ಮೀದೇವಮ್ಮಹೇಳಿದರು.ಇಲ್ಲಿಯ ಶ್ರೀ ಪುಟ್ಟರಾಜ ನಗರದ (ಬಾಡಾಕ್ರಾಸ್‌) ಶ್ರೀ ವೀರೇಶ್ವರ ಪುಣ್ಯಾಶ್ರಮದಶ್ರೀ ಗುರುಕುಮಾರಸ್ವಾಮಿ ವೇದಿಕೆಯಲ್ಲಿನಿರಂತರವಾಗಿ ನಡೆಯುತ್ತಿರುವ 16ನೇದಿನದ ರಾಜ್ಯ ಮಟ್ಟದ ಕನ್ನಡ ಸಮೂಹಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿದಭಜನಾ ಕಲಾವಿದರನ್ನು ಸನ್ಮಾನಿಸಿಅವರು ಮಾತನಾಡಿದರು.

Advertisement

ಭಜನೆ,ತತ್ವಪದ, ಪ್ರವಚನ ಕೇವಲ ಆಲಿಸುವುದಕ್ಕೆಸೀಮಿತವಲ್ಲ, ಪ್ರೇಕ್ಷಕರಾಗಲಿ, ಅದನ್ನುಪ್ರಸ್ತುತ ಪಡಿಸುವವರಾಗಲಿ ಅದರಲ್ಲಿರುವಜೀವನ ಪರಿವರ್ತನೆಯ ಹಾಗೂ ಸನ್ಮಾರ್ಗದಸಂದೇಶಗಳನ್ನು ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬೇಕು ಎಂದರು.

ಶ್ರೀ ವೀರೇಶ್ವರ ಪುಣ್ಯಾಶ್ರಮದಪ್ರಧಾನ ಕಾರ್ಯದರ್ಶಿ ಎ.ಎಚ್‌.ಶಿವಮೂರ್ತಿಸ್ವಾಮಿ, ಖಜಾಂಚಿ ಜೆ.ಎನ್‌.ಕರಿಬಸಪ್ಪ ಜಾಲಿಮರದ, ಸಂಘಟನಾಕಾರ್ಯದರ್ಶಿ ಎ. ಕೊಟ್ರಪ್ಪ ಕಿತ್ತೂರು,ತೀರ್ಪುಗಾರರಾದ ಹಿರಿಯ ಸಂಗೀತಕಲಾವಿದರಾದ ಹನುಮಂತಪ್ಪ, ವಿದೂಷಿಮಂಗಳಗೌರಿ ವೇದಿಕೆಯಲ್ಲಿದ್ದರು. ಭಜನಾಸಮಿತಿಯ ಕಾರ್ಯಾಧ್ಯಕ್ಷ ಸಾಲಿಗ್ರಾಮಗಣೇಶ ಶೆಣೈ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next