Advertisement

ಭಾರತೀಯ ವಿಜ್ಞಾನಿಗಳ ಕೊಡುಗೆ ಅಮೂಲ್ಯ: ಶಿವರಾಜ್‌

01:59 PM Feb 18, 2022 | Team Udayavani |

ದಾವಣಗೆರೆ: ವಿಜ್ಞಾನ ಕ್ಷೇತ್ರಕ್ಕೆ ಭಾರತೀಯವಿಜ್ಞಾನಿಗಳು ಅಪಾರ ಪ್ರಮಾಣದಲ್ಲಿವಿಶ್ವದರ್ಜೆಯ ಕೊಡುಗೆ ನೀಡುತ್ತಿದ್ದಾರೆ ಎಂದುಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಶಿವರಾಜ್‌ ಹೇಳಿದರು.ವಿಜ್ಞಾನ ಮತ್ತು ತಂತ್ರಜ್ಞಾನ, ಪದವಿಪೂರ್ವಶಿಕ್ಷಣ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯವಿಜ್ಞಾನ ಪರಿಷತ್‌ ಸಂಯುಕ್ತಾಶ್ರಯಲ್ಲಿನಗರದಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದಯುವ ವಿಜ್ಞಾನಿ ಪ್ರಶಸ್ತಿ ವಿತರಣಾಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ವಿಜ್ಞಾನ ಕ್ಷೇತ್ರದಲ್ಲಿ ಕ್ಷಿಪ್ರರೀತಿಯಆವಿಷ್ಕಾರಗಳಾಗುತ್ತಿವೆ. ಸಂಶೋಧನಾ ಕ್ಷೇತ್ರತೀವ್ರವಾದ ಬೆಳವಣಿಗೆಯೊಂದಿಗೆ ನಮ್ಮಊಹೆಗೂ ನಿಲುಕದ ಬದಲಾವಣೆಗಳಕಂಡುಕೊಳ್ಳುತ್ತಿದೆ. ಭಾರತೀಯ ವಿಜ್ಞಾನಗಳುಕೂಡ ಆ ದಿಸೆಯಲ್ಲಿ ವಿಶ್ವದರ್ಜೆಯಮಹತ್ತರವಾದ ಅನೇಕ ಕೊಡುಗೆನೀಡುತ್ತಿದ್ದಾರೆ ಎಂದರು.ಕೊರೊನಾ ಸಂದರ್ಭದಲ್ಲಿ ಪ್ರಪಂಚವೇತತ್ತರಿಸಿ ಹೋಯಿತು. ವಿಶ್ವದಾದ್ಯಂತಕೋಟಿಗಟ್ಟಲೆ ಜನ ಅಸುನೀಗಿದರು.

ಅಂತಹ ಸಂದರ್ಭದಲ್ಲಿ ಭಾರತೀಯವೈದ್ಯ ವಿಜ್ಞಾನಿಗಳು ವಿಶ್ವಕ್ಕೆ ಮೊದಲ ಲಸಿಕೆನೀಡುವ ಮೂಲಕ ಪ್ರಪಂಚದ ಜನತೆಯನ್ನುಸಾವಿನಿಂದ ಪಾರು ಮಾಡಲು ಶ್ರಮಿಸಿದರು.ಅವರೆಲ್ಲರ ಸಂಶೋಧನೆ ಸಾರ್ಥಕವೆನಿಸಿದೆ.ವಿಜ್ಞಾನಿಗಳೆಂದರೆ ಮನುಕುಲದ ಉದ್ಧಾರಕರುಎಂದರೆ ತಪ್ಪಾಗಲಾರದು.

ವಿಜ್ಞಾನವನ್ನು ಜನರಬದುಕಿಗೆ ಬೆಳಕಾಗಿ ಬಳಕೆ ಮಾಡಬೇಕು.ಮನುಕುಲದ ನಾಶಕ್ಕೆ ಬಳಕೆಯಾಗಬಾರದು.ಜಿಲ್ಲಾ ಯುವ ವಿಜ್ಞಾನಿ ಪ್ರಶಸ್ತಿ ಪಡೆದವಿದ್ಯಾರ್ಥಿಗಳು ಮೂಲ ವಿಜ್ಞಾನದ ಕಡೆಆಸಕ್ತಿ ವಹಿಸಿ, ಸಂಶೋಧನಾ ರಂಗವನ್ನುಆಯ್ಕೆ ಮಾಡಿಕೊಳ್ಳಬೇಕು ಎಂದು ಸಲಹೆನೀಡಿದರು.

ವಿಜ್ಞಾನ ವಿಷಯ ಪರಿವೀಕ್ಷಕಿ ಆರ್‌.ಬಿ.ವಸಂತಕುಮಾರಿ ಮಾತನಾಡಿ, ವಿಜ್ಞಾನದಆವಿಷ್ಕಾರಗಳು, ಸಂಶೋಧನೆಗಳು ಆಸಹಾಯಕ ಜನರ ಬದುಕಿಗೆ ಆಸರೆಯಾಗುವಂತಿರಲಿ. ಯುವ ವಿಜ್ಞಾನಿಗಳು ಕಾರ್ಯೋನ್ಮುಖರಾಗಬೇಕು. ಅಂಧಮಕ್ಕಳುಕಲಿಕೆಗೆ ಬಳಕೆ ಮಾಡುತ್ತಿರುವ ಬ್ರೈಲ್‌ ಲಿಪಿಅದರ ಒತ್ತುಗುಂಡಿಗಳನ್ನು ಒತ್ತಿ ಒತ್ತಿ ಆಮಕ್ಕಳ ಕೈಗಳು ನೋವಾಗುತ್ತಿವೆ. ಸುಧಾರಿತಾಕಲಿಕ ಯಂತ್ರವನ್ನು ಸಂಶೋಧಿಸಿ ಅವರಬಾಳಿಗೆ ಬೆಳಕು ನೀಡಬೇಕು ಎಂದು ಯುವವಿಜ್ಞಾನಿಗಳಲ್ಲಿ ಮನವಿ ಮಾಡಿದರು.

Advertisement

ವಿಜ್ಞಾನ ಪರಿಷತ್‌ನ ಜಿಲ್ಲಾ ಸಹಕಾರ್ಯದರ್ಶಿ ಡಾ| ಎಂ.ಆರ್‌. ಜಗದೀಶ್‌,ಖಜಾಂಚಿ ಅಂಗಡಿ ಸಂಗಪ್ಪ, ದಾವಣಗೆರೆವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಡಾ| ಸಿದ್ದಪ್ಪ ಕಕ್ಕಮೇಲಿ ಮಾತನಾಡಿದರು.ಸೋಮೇಶ್ವರ ವಿದ್ಯಾಲಯದ ಪ್ರಾಚಾರೆÂಪ್ರಭಾವತಿ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನಪರಿಷತ್‌ ಕಾರ್ಯದರ್ಶಿ ಎಂ. ಗುರುಸಿದ್ದಸ್ವಾಮಿಸ್ವಾಗತಿಸಿದರು. ಕೆ. ಸಿದ್ದೇಶ್‌ ವಂದಿಸಿದರು.

ಜಗಳೂರಿನ ಸರ್ಕಾರಿ ಪಿಯು ಕಾಲೇಜಿನಜಿ.ಎನ್‌. ವಿಸ್ಮಯ್‌ ತೇಜಸ್ವಿ 5 ಸಾವಿರ ರೂ.ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನಪಡೆದರು. ದಾವಣಗೆರೆ ರಾಘವೇಂದ್ರ ಪಿಯುಕಾಲೇಜಿನ ಪಿ. ಅಂಕಿತ 3 ಸಾವಿರ ರೂ. ನಗದುಬಹುಮಾನದೊಂದಿಗೆ ದ್ವಿತೀಯ ಸ್ಥಾನಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು.

 

Advertisement

Udayavani is now on Telegram. Click here to join our channel and stay updated with the latest news.

Next