Advertisement

ಮತ್ತೊಮ್ಮೆ ಬಿಜೆಪಿ ಎಲ್ಲೆಡೆ ಗೆಲ್ಲುವ ವಾತಾವರಣ ಸೃಷ್ಟಿ: ನಳಿನ್‌ಕುಮಾರ್‌ ಕಟೀಲ್‌

11:43 AM Sep 26, 2021 | Team Udayavani |

ದಾವಣಗೆರೆ: ನಗರದಲ್ಲಿ ಇತ್ತೀಚೆಗೆಎರಡು ದಿನಗಳ ಕಾಲ ನಡೆದ ಬಿಜೆಪಿ ರಾಜ್ಯ ಪದಾಧಿಕಾರಿಗಳಸಭೆ ಹಾಗೂ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿ ನಡೆದಿದೆ. ಪ್ರಬಂಧಕರಾಗಿ ಕಾರ್ಯನಿರ್ವಹಿಸಿದ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಶನಿವಾರ ಸಂಜೆ ತ್ರಿಶೂಲ್‌ ಕಲಾಭವನದಲ್ಲಿ ನಡೆಯಿತು.

Advertisement

ಸಮಾರಂಭ ಉದ್ಘಾಟಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಎರಡು ದಿನಗಳ ಕಾಲ ನಡೆದ ಪದಾಧಿಕಾರಿಗಳಸಭೆ ಹಾಗೂ ಕಾರ್ಯಕಾರಿಣಿಯನ್ನು ಅಚ್ಚುಕಟ್ಟಾಗಿ ಮಾಡಿ ಯಶಸ್ವಿಗೊಳಿಸಿದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾರ್ಯಕರ್ತರು ತಾವು ನಿರ್ವಹಿಸಿದ ಕೆಲಸದ ಬಗ್ಗೆ ವೇದಿಕೆಯಲ್ಲಿ ಅನುಭವ ಹಂಚಿಕೊಳ್ಳಬಹುದಾಗಿದೆ ಎಂದರು.ಸಂಸದ ಡಾ| ಜಿ.ಎಂ. ಸಿದ್ದೇಶ್ವರ ಮಾತನಾಡಿ, ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ ಎಲ್ಲ ನಾಯಕರು ಅಚ್ಚುಕಟ್ಟಾದ ವ್ಯವಸ್ಥೆ, ನಿರ್ವಹಣೆ ಬಗ್ಗೆಹೊಗಳಿಕೆಯ ಮಾತುಗಳನ್ನಾಡಿದ್ದಾರೆ.ಈ ಹೊಗಳಿಕೆ ಕಾರ್ಯಕರ್ತರಿಗೆಸಲ್ಲುತ್ತದೆ ಎಂದರು ಹಾಗೂಕಲಾಭವನವನ್ನು ಉಚಿತವಾಗಿ ನೀಡಿದ ಮಾಲೀಕರ ಕೊಡುಗೆ ಸ್ಮರಿಸಿದರು.

ಇದನ್ನೂ ಓದಿ:ಬೈಕುಲಾ ಜೈಲಿನಲ್ಲಿ ಆರು ಮಕ್ಕಳು ಸೇರಿದಂತೆ 39 ಕೈದಿಗಳಿಗೆ ಕೋವಿಡ್ ಪಾಸಿಟಿವ್

ದಾವಣಗೆರೆಯಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಿಂದ ಜಿಲ್ಲೆಯಲ್ಲಿ ಮತ್ತೂಮ್ಮೆ ಬಿಜೆಪಿ ಎಲ್ಲೆಡೆ ಗೆಲ್ಲುವ ವಾತಾವರಣ ಸೃಷ್ಟಿಸಿದೆ.ಚುನಾವಣೆಗೆ ಇನ್ನೂ ಎರಡು ವರ್ಷ ಅವಧಿ ಇದ್ದು ಅಲ್ಲಿಯವರೆಗೂ ಈ ವಾತಾವರಣ ಕಾಯ್ದುಕೊಳ್ಳುವ ರೀತಿಯಲ್ಲಿ ಕಾರ್ಯಕರ್ತರು ಕೆಲಸಮಾಡಬೇಕು ಎಂದರು.ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ,ಪಕ್ಷಕ್ಕೆ ಕಾರ್ಯಕರ್ತರೇ ಬೆನ್ನೆಲುಬು.ಕಾರ್ಯಕರ್ತರ ಶ್ರಮದಿಂದಲೇ ಮುಖ್ಯಮಂತ್ರಿ, ಮಂತ್ರಿ,ಶಾಸಕರಾಗಿರುವುದನ್ನು ಯಾರೂ ಮರೆಯುವಂತಿಲ್ಲ. ಪಕ್ಷದ ಎಲ್ಲಯಶಸ್ಸಿಗೆ ಕಾರ್ಯಕರ್ತರ ಸೇವೆಯೇಕಾರಣ ಎಂದು ತಿಳಿಸಿದರು.

Advertisement

ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ್‌ ಅಧ್ಯಕ್ಷತೆ ವಹಿಸಿದ್ದರು.ಶಾಸಕರಾದ ಎಸ್‌.ಎ. ರವೀಂದ್ರನಾಥ್‌,ಎಸ್‌.ವಿ. ರಾಮಚಂದ್ರಪ್ಪ , ಪ್ರೊ|ಲಿಂಗಣ್ಣ ಸೇರಿದಂತೆ ಪಕ್ಷದಪದಾಧಿಕಾರಿಗಳು, ಕಾರ್ಯಕರ್ತರು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next