Advertisement

ದಾವಣಗೆರೆಯಲ್ಲಿ ಈರುಳ್ಳಿ ಬೆಲೆ ಕೆಜಿಗೆ 50 ಪೈಸೆ!

05:13 PM Sep 20, 2021 | Team Udayavani |

ದಾವಣಗೆರೆ: ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯ ಎಪಿಎಂಸಿಯಲ್ಲಿ ಕ್ವಿಂಟಲ್‌ ಈರುಳ್ಳಿ ಧಾರಣೆ ಕನಿಷ್ಟ100 ರೂಪಾಯಿಯಿಂದ ಗರಿಷ್ಠ 900 ರೂಪಾಯಿವರೆಗೆ ಇದೆ. ಕೆಲವು ಕಡೆ ಕೆಜಿಗೆ 50 ಪೈಸೆ ಧಾರಣೆಯೂ ಇದೆ. ಹಾಗಾಗಿ ಈರುಳ್ಳಿ ಬೆಳೆಗಾರರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

Advertisement

ದಾವಣಗೆರೆ ಜಿಲ್ಲೆಯ ಜಗಳೂರಲ್ಲಿ 1500-1800, ನ್ಯಾಮತಿಯಲ್ಲಿ 500-600, ಹರಿಹರದಲ್ಲಿ 150,ದಾವಣಗೆರೆ ತಾಲೂಕಿನಲ್ಲಿ 100 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಅತಿವೃಷ್ಟಿಯ ಪರಿಣಾಮ 950 ಹೆಕ್ಟೇರ್‌ನಲ್ಲಿನ ಈರುಳ್ಳಿ ಸಂಪೂರ್ಣ ಹಾಳಾಗಿದೆ.ಅತೀ ಹೆಚ್ಚು ಜಗಳೂರು ತಾಲೂಕಿನಲ್ಲಿ 950, ಹೊನ್ನಾಳಿಯಲ್ಲಿ 50, ಹರಿಹರದಲ್ಲಿ30, ದಾವಣಗೆರೆಯಲ್ಲಿ 20 ಹೆಕ್ಟೇರ್‌ನಲ್ಲಿದ್ದ ಈರುಳ್ಳಿ ಸಂಪೂರ್ಣವಾಗಿ ನಾಶವಾಗಿದೆ. ಅತಿವೃಷ್ಟಿಯಿಂದ ಬೆಳೆಕಳೆದುಕೊಂಡಿರುವ ಜೊತೆಗೆ ಮುಕ್ತಮಾರುಕಟ್ಟೆಯಲ್ಲಿ ಬೆಲೆಯೂ ದೊರೆಯದಂತಾಗಿ ರೈತರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ:ಗಾಂಧಿ ಜಯಂತಿಯಂದು ಕನ್ನಯ್ಯ, ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ?

ಸರ್ಕಾರದಿಂದಪ್ರತಿ ಹೆಕ್ಟೇರ್‌ಗೆ 6,800 ರೂಪಾಯಿಪರಿಹಾರ ನೀಡಲಾಗುತ್ತದೆ. ಪ್ರತಿ ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲು 25 ರಿಂದ 30 ಸಾವಿರ ಖರ್ಚು ಮಾಡುವ ರೈತರಿಗೆಸರ್ಕಾರ ನೀಡುವ ಪರಿಹಾರ ಭೀಮನಹೊಟ್ಟೆಗೆ ಅರೆ ಕಾಸಿನಮಜ್ಜಿಗೆ ಎನ್ನುವಂತಾಗಿದೆ.ಅತಿವೃಷ್ಟಿಯಿಂದ ಈರುಳ್ಳಿ ನಾಶವಾಗಿರುವ ಜೊತೆಗೆ ಮಹಾರಾಷ್ಟ್ರದ ನಾಸಿಕ್‌ ಇತರೆ ಭಾಗದಿಂದ ಹೆಚ್ಚಾಗಿಈರುಳ್ಳಿ ದಾವಣಗೆರೆ ಮಾರುಕಟ್ಟೆಗೆ ಬರುತ್ತಿರುವುದು ಬೆಲೆ ಕುಸಿತಕ್ಕೆ ಕಾರಣ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ್‌ ಬೊಮ್ಮನಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next