ಹೊನ್ನಾಳಿ: ಚುನಾವಣೆಯ ಸಮಯದಲ್ಲಿ ದೇಶದ ಮತದಾರ ಸಕ್ರಿಯವಾಗಿಭಾಗವಹಿಸುವುದನ್ನು ಉತ್ತೇಜಿಸುವುದು ಹಾಗೂ ಒಬ್ಬ ಜವಾಬ್ದಾರಿಯುತ ಮತದಾರಎಂಬುದನ್ನು ನೆನಪಿಸುವುದೇ ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ ಎಂದುತಹಶೀಲ್ದಾರ್ ಬಸನಗೌಡ ಕೋಟೂರ ಹೇಳಿದರು.
ಮಂಗಳವಾರ ತಾಲೂಕು ಕಚೇರಿಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾನ ದಿನಾಚರಣೆ ಹಾಗೂ ನೂತನಮತದಾರರಿಗೆ ಗುರುತಿನಚೀಟಿ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರುಮಾತನಾಡಿದರು. ರಾಷ್ಟ್ರವನ್ನು ಮುನ್ನಡೆಸುವ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವಪವಿತ್ರವಾದ ಮತದಾನದ ಹಕ್ಕನ್ನು ಸಂವಿಧಾನ ನಮಗೆ ಕೊಟ್ಟಿದೆ.
ಈ ಮೂಲಭೂತವಾಗಿಕೊಟ್ಟಿರುವ ಹಕ್ಕನ್ನು ನಾವು ಯೋಚಿಸಿ ಮತದಾನ ಮಾಡಿ ಸಭ್ಯ ವ್ಯಕ್ತಿಯನ್ನು ಆಯ್ಕೆಮಾಡಿದರೆ ರಾಷ್ಟ್ರ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತದೆ ಎಂದರು. ತಾಲೂಕು ವಕೀಲರಸಂಘದ ಅಧ್ಯಕ್ಷ ಉಮಾಕಾಂತ್ ಜೋಯ್ಸ ಉಪನ್ಯಾಸ ನೀಡಿ, ದೇಶದ ವಿವಿಧ ಹಂತಗಳಅಡಳಿತ ವ್ಯವಸ್ಥೆಗಾಗಿ ನಡೆಯುವ ಚುನಾವಣೆಯಲ್ಲಿ ಮತ ಹಾಕುವ ಮೂಲಕ ತಮ್ಮಪ್ರತಿನಿಧಿ ಗಳನ್ನು ಆಯ್ಕೆಮಾಡಿಕೊಳ್ಳವ ಪ್ರಕ್ರಿಯೇಗೆ ಮತದಾನ ಎನ್ನುತ್ತೇವೆ. ಮತದಾನಪವಿತ್ರವಾದದ್ದು ಎಂದು ತಿಳಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಉಮೇಶ್, ವಕೀಲಮೇಘರಾಜ್ ಸಿಪಿಐ ದೇವರಾಜ್ ಮಾತನಾಡಿದರು. ತಹಶೀಲ್ದಾರರು ಮತದಾನದ ಪ್ರತಿಜ್ಞಾವಿಧಿ ಬೋಧಿ ಸಿದರು. ನಂತರ ಯುವ ಮತದಾರರಿಗೆ ಎಪಿಕ್ ಕಾರ್ಡ್ ವಿತರಿಸಲಾಯಿತು.ಪುರಸಭೆ ಮುಖ್ಯಾಧಿ ಕಾರಿ ಪಂಪಾಪತಿ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.