Advertisement

ಎಲ್ಲರೂ ಮತ ಹಕ್ಕು ಚಲಾಯಿಸಿ

01:57 PM Jan 26, 2022 | Team Udayavani |

ದಾವಣಗೆರೆ: ದೇಶದ ಚಿತ್ರಣವನ್ನೇಬದಲಾಯಿಸುವಂತಹ ವಿಭಿನ್ನ ಶಕ್ತಿ ಹೊಂದಿರುವಮತದಾನದ ಹಕ್ಕನ್ನು ಪ್ರತಿಯೊಬ್ಬರುಕಡ್ಡಾಯವಾಗಿ ಚಲಾಯಿಸಬೇಕು ಎಂದು ಜಿಲ್ಲಾಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಡಾ| ವಿಜಯಮಹಾಂತೇಶ್‌ ದಾನಮ್ಮನವರ್‌ಕರೆ ನೀಡಿದರು.

Advertisement

ಮಹಾನಗರ ಪಾಲಿಕೆ ಆವರಣದಲ್ಲಿಮಂಗಳವಾರ ನಡೆದ 12ನೇ ರಾಷ್ಟ್ರೀಯಮತದಾರರ ದಿನಾಚರಣೆ ಉದ್ಘಾಟಿಸಿಮಾತನಾಡಿದ ಅವರು, ಮತದಾನದ ಹಕ್ಕು ಎಲ್ಲಹಕ್ಕುಗಳಗಿಂತಲೂ ವಿಭಿನ್ನವಾದ ಹಕ್ಕು. ನಮ್ಮಕೈಯಲ್ಲಿರುವಂತಹ ಮತದಾನದ ಹಕ್ಕು ಇಡೀದೇಶದ ಚಿತ್ರಣವನ್ನೇ ಬದಲಾಯಿಸುವಂತಹಶಕ್ತಿ ಹೊಂದಿದೆ.

ಅಂತಹ ವಿಶೇಷ ಹಕ್ಕನ್ನು ತಪ್ಪದೇಚಲಾಯಿಸಬೇಕು ಎಂದರು.ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಹೊಂದಿರುವ ಭಾರತದಲ್ಲಿ 18 ವರ್ಷಮೇಲ್ಪಟ್ಟ ಎಲ್ಲ ಅರ್ಹರಿಗೆ ಮತದಾನದ ಹಕ್ಕುನೀಡಲಾಗಿದೆ. ಆದರೆ, ಮತದಾನ ಹೆಚ್ಚಿನಪ್ರಮಾಣದಲ್ಲಿ ಆಗುತ್ತಿಲ್ಲ. ವಿಶೇಷವಾಗಿ ನಗರಪ್ರದೇಶದಲ್ಲಿ ಶೇ. 40-50ರಷ್ಟು ಪ್ರಮಾಣದಮತದಾನ ಆಗುತ್ತಿದೆ. ಯುವ ಸಮುದಾಯಮತದಾನ ಮಾಡುವಲ್ಲಿ ನಿರ್ಲಕ್ಷé ತೋರುತ್ತಿದೆಎಂಬುದು ಕೇಳಿ ಬರುತ್ತಿದೆ.

ಯುವಸಮೂಹ ಹೆಚ್ಚಿನ ಪ್ರಮಾಣದಲ್ಲಿ ಮತದಾರರಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಮಾತ್ರವಲ್ಲ, ಮತದಾನದ ದಿನ ಕಡ್ಡಾಯವಾಗಿಮತದಾನ ಮಾಡಬೇಕು. ಇತರರೂಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯತೆ ಯಿಂದಭಾಗವಹಿಸಲು ಪ್ರೇರಣಾದಾಯಕರಾಗಬೇಕು ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next