Advertisement

ರಾಜಕೀಯ ಅದೃಷ್ಟದ ಊರಲ್ಲಿ ಬಿಜೆಪಿ ಕಾರ್ಯಕಾರಿಣಿ

10:36 AM Sep 17, 2021 | Team Udayavani |

ದಾವಣಗೆರೆ: “ರಾಜಕೀಯ ಪಕ್ಷಗಳ ಅದೃಷ್ಟ ತಾಣ’ಎಂದೇ ಖ್ಯಾತಿ ಪಡೆದಿರುವ ದಾವಣಗೆರೆಯಲ್ಲಿ 14ವರ್ಷಗಳ ನಂತರ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸೆ. 18ಮತ್ತು 19 ರಂದು ನಡೆಯಲಿದೆ.

Advertisement

ಬಿಜೆಪಿ ಭದ್ರಕೋಟೆಯಾಗಿರುವದಾವಣಗೆರೆ ಜಿಲ್ಲೆಯಲ್ಲಿ ಮೂರನೇಬಾರಿಗೆ ರಾಜ್ಯ ಬಿಜೆಪಿ ಕಾರ್ಯಕಾರಿಣಿಆಯೋಜನೆಗೊಂಡಿದೆ. 2007ರಲ್ಲಿದಾವಣಗೆರೆಯ ಹದಡಿ ರಸ್ತೆಯಶಾಮನೂರು ಶಿವಶಂಕರಪ್ಪ ಪಾರ್ವತಮ್ಮಕಲ್ಯಾಣ ಮಂಟಪದಲ್ಲಿ ಎರಡನೇ ಬಾರಿ ರಾಜ್ಯಕಾರ್ಯಕಾರಿಣಿ ನಡೆದಿತ್ತು.

ರಾಜ್ಯ ಕಾರ್ಯಕಾರಿಣಿಯನ್ನುಕೇಂದ್ರದ ಅಂದಿನ ಹಣಕಾಸು ಸಚಿವ ಯಶವಂತ ಸಿನ್ಹಾಉದ್ಘಾಟಿಸಿದ್ದರು.ಮರು ವರ್ಷ ನಡೆದ ವಿಧಾನಸಭಾಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಪಡೆದಿದ್ದ ಬಿಜೆಪಿ,ರಾಜ್ಯ ರಾಜಕೀಯದಲ್ಲಿನ ಬದಲಾವಣೆಯ ಪರಿಣಾಮಮೊದಲ ಬಾರಿ ಅಧಿಕಾರದ ಗದ್ದುಗೆಗೇರಿತ್ತು.ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆಬಂದಿತ್ತು.

ಅಂದಿನಿಂದ ದಾವಣಗೆರೆ ಬಿಜೆಪಿಗೆಅದೃಷ್ಟತಾಣವಾಗಿದೆ.ಸೆ.2ರಂದು ವಿವಿಧ ಅಭಿವೃದ್ಧಿಕಾಮಗಾರಿಗಳ ಉದ್ಘಾಟನೆಗೆದಾವಣಗೆರೆಗೆ ಆಗಮಿಸಿದ್ದಕೇಂದ್ರದ ಗೃಹ ಸಚಿವ ಅಮಿತ್‌ಶಾ, ಮುಂದಿನ ವಿಧಾನಸಭಾಚುನಾವಣೆಯನ್ನು ಸಿಎಂಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇಎದುರಿಸಲಾಗುವುದು.

ಬಿಜೆಪಿ ಸಂಪೂರ್ಣಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆಎಂದು ತಮಗೆ ಸಂಪೂರ್ಣ ವಿಶ್ವಾಸ ಇದೆ ಎಂದುನೀಡಿರುವ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಭಾರೀಸಂಚಲನ ಸೃಷ್ಟಿಸಿದೆ.

Advertisement

ದಿಕ್ಸೂಚಿಯಾದೀತೇ?: “ರಾಜಕೀಯ ಚಾಣಕ್ಯ’ ಎಂದೇಗುರುತಿಸಲ್ಪಡುವ ಅಮಿತ್‌ ಶಾ ಹೇಳಿಕೆ ನೀಡಿದ16 ದಿನಗಳ ಅಂತರದಲ್ಲಿ ಅದೇ ದಾವಣಗೆರೆಯಲ್ಲಿನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ವಿಧಾನಸಭಾಚುನಾವಣೆ ಯಾರ ನೇತೃತ್ವದಲ್ಲಿ ನಡೆಯಲಿದೆಎಂಬುದಕ್ಕೆ ರಾಜ್ಯ ಪದಾಧಿಕಾರಿಗಳ ಸಭೆ, ಕೋರ್‌ಕಮಿಟಿ ಮತ್ತು ಕಾರ್ಯಕಾರಿಣಿ ಸಭೆ ದಿಕ್ಸೂಚಿ ಆಗಬಹುದು ಎಂಬ ಲೆಕ್ಕಾಚಾರ ಕಮಲ ಪಾಳೆಯದಲ್ಲಿದೆ.

ಬಿಜೆಪಿಯ ಪರಮೋತ್ಛ ನಾಯಕರಾಗಿರುವ ಅಮಿತ್‌ಶಾ ಪ್ರತಿ ಹೇಳಿಕೆಯ ಹಿಂದೆ ಮುಂದಿನ ರಾಜಕೀಯಲೆಕ್ಕಾಚಾರ ಇದ್ದೇ ಇರುತ್ತದೆ ಎಂಬುದು ಜನಜನಿತ.ಮುಂದಿನ ವಿಧಾನಸಭಾ ಚುನಾವಣೆ ನೇತೃತ್ವದಕುರಿತಂತೆ ನೀಡಿರುವ ಹೇಳಿಕೆಯೂ ಅದೇ ಮಹತ್ವಪಡೆದುಕೊಂಡಿದೆ. ಹಾಗಾಗಿಯೇ ದಾವಣಗೆರೆಯಲ್ಲಿನಡೆಯಲಿರುವ ರಾಜ್ಯ ಕಾರ್ಯಕಾರಿಣಿಯೂ ಬಿಜೆಪಿಪಾಲಿಗೆ ಮಹತ್ವದ್ದಾಗಿದೆ.ಅಮಿತ್‌ ಶಾ ಹೇಳಿಕೆಗೆ ಬಿಜೆಪಿಯ ಕೆಲ ಹಿರಿಯಮುಖಂಡರು ಬದ್ಧತೆ ಪ್ರದರ್ಶಿಸಿದರೆ, ಇನ್ನು ಕೆಲವರು ಸಮಯಾವಕಾಶ ಇದೆ.

ಈಗಲೇ ನಾಯಕತ್ವ ಕುರಿತುಹೇಳಿಕೆ ನೀಡುವ ಅವಸರ ಇರಲಿಲ್ಲ ಎಂಬ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕಾರಿಣಿ ಮತ್ತುಕೋರ್‌ ಕಮಿಟಿ ಸಭೆಯಲ್ಲಿ ನಡೆಯುವ ಚರ್ಚೆ, ಅದರಪ್ರತಿಫಲ ಬಿಜೆಪಿ ಮಾತ್ರವಲ್ಲ, ರಾಜ್ಯ ರಾಜಕೀಯವಲಯದಲ್ಲಿ ಭಾರೀ ಕೌತುಕಕ್ಕೆ ಕಾರಣವಾಗಿದೆ.ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿಅಧಿಕಾರ ವಹಿಸಿಕೊಂಡ ನಂತರ ಪ್ರಪ್ರಥಮ ಬಾರಿಗೆಪದಾಧಿಕಾರಿಗಳ ಸಭೆ, ಕೋರ್‌ ಕಮಿಟಿ ಸಭೆ ಮತ್ತುಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸುತ್ತಿರುವುದುಸಹ ದಾವಣಗೆರೆಯಲ್ಲೇ ಎಂಬುದು ಗಮನಾರ್ಹ.

ಅಂತೆಯೇ ನಳಿನ್‌ಕುಮಾರ್‌ ರಾಜ್ಯ ಬಿಜೆಪಿಯಚುಕ್ಕಾಣಿ ಹಿಡಿದ ನಂತರ ಪೂರ್ಣ ಪ್ರಮಾಣದ ರಾಜ್ಯಕಾರ್ಯಕಾರಿಣಿ ನಡೆಯುತ್ತಿರುವುದು ದಾವಣಗೆರೆಯಲ್ಲೇ.ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲನಡೆಯುವ ಪದಾಧಿಕಾರಿಗಳ, ಕೋರ್‌ ಕಮಿಟಿ ಸಭೆಮತ್ತು ಕಾರ್ಯಕಾರಿಣಿ ಕುತೂಹಲದ ಕೇಂದ್ರವಾಗಿದೆ.

ರಾ.ರವಿಬಾಬು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next