Advertisement

ಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಅಗತ್ಯ ಸೌಲಭ್ಯ

06:30 PM Jan 25, 2022 | Team Udayavani |

ದಾವಣಗೆರೆ: ನಾಯಕ ಸಮಾಜ ಮಹಿಳಾವಿದ್ಯಾರ್ಥಿನಿಲಯಕ್ಕೆ ನಿವೇಶನ ಒಳಗೊಂಡಂತೆಎಲ್ಲ ಅಗತ್ಯ ಸೌಲಭ್ಯ ಒದಗಿಸಲಾಗುವುದುಎಂದು ಸಂಸದ ಡಾ| ಜಿ.ಎಂ. ಸಿದ್ದೇಶ್ವರಭರವಸೆ ನೀಡಿದರು.ನಗರದ ನಾಯಕ ವಿದ್ಯಾರ್ಥಿನಿಲಯದಲ್ಲಿ60 ಲಕ್ಷ ರೂ. ಅನುದಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗೆಭೂಮಿಪೂಜೆ ನೆರವೇರಿಸಿ ಅವರುಮಾತನಾಡಿದರು.

Advertisement

ನಾಯಕ ಸಮಾಜದಮಹಿಳಾ ವಿದ್ಯಾರ್ಥಿ ನಿಲಯಕ್ಕೆ ಅಗತ್ಯವಾದನಿವೇಶನ ಕೋರಿ ದೂಡಾಕ್ಕೆ ಅರ್ಜಿಸಲ್ಲಿಸಿದರೆ ಖಂಡಿತವಾಗಿಯೂ ನಿವೇಶನಕೊಡಲಾಗುವುದು. ಅಗತ್ಯ ಸೌಲಭ್ಯಒದಗಿಸಲಾಗುವುದು ಎಂದರು.ಮಹಾನಗರ ಪಾಲಿಕೆಯಿಂದ ಟಿಎಸ್‌ಪಿಯೋಜನೆಯಡಿ ನಾಯಕ ಸಮುದಾಯಕ್ಕೆ68.89 ಲಕ್ಷದಷ್ಟು ಅನುದಾನ ನೀಡಲಾಗಿದೆ.ತಮಗೆ ತಿಳಿದಿರುವಂತೆ ಬೇರೆ ಯಾವುದೇಸಮುದಾಯಕ್ಕೆ ಇಷ್ಟೊಂದು ದೊಡ್ಡ ಮೊತ್ತದಅನುದಾನ ನೀಡಿಲ್ಲ.

ಅನುದಾನವನ್ನಸದುಪಯೋಗಪಡಿಸಿಕೊಂಡು ಹಾಸ್ಟೆಲ್‌ನಲ್ಲಿಅಗತ್ಯ ಮೂಲ ಸೌಕರ್ಯ ಒದಗಿಸಬೇಕುಎಂದು ತಿಳಿಸಿದರು.ಕೇಂದ್ರ, ರಾಜ್ಯ ಸರ್ಕಾರ, ನಾನು, ಶಾಸಕರವೀಂದ್ರನಾಥ್‌ ಒಳಗೊಂಡಂತೆ ಎಲ್ಲರೂನಾಯಕ ಸಮಾಜದ ಎಲ್ಲ ಬಾಂಧವರುವಿದ್ಯಾವಂತರಾಗಬೇಕು ಎಂಬುದಕ್ಕೆ ಬೇಕಾದಎಲ್ಲ ಸೌಲಭ್ಯ ಕೊಡಲು ಸಿದ್ಧರಿದ್ದೇವೆ.

ನಾಯಕಸಮಾಜದ ಯಾವುದೇ ಅಭಿವೃದ್ಧಿ, ಕೆಲಸ,ಕಾರ್ಯಗಳಿಗೆ ಕೈ ಜೋಡಿಸುತ್ತೇವೆ. ನಗರಸಭೆಮಾಜಿ ಅಧ್ಯಕ್ಷ ಬಿ. ವೀರಣ್ಣ ನಾಯಕ ಹಾಸ್ಟೆಲ್‌ಅಧ್ಯಕ್ಷರಾದ ಮೇಲೆ ಸಾಕಷ್ಟು ಒಳ್ಳೆಯ ಕೆಲಸಆಗುತ್ತಿವೆ. ಎಲ್ಲರೂ ಸೇರಿ ಮಾಡುವುದರಿಂದಒಳ್ಳೆಯ ಕೆಲಸ ಆಗುತ್ತಿವೆ. ನಿಮ್ಮ ಜೊತೆಸದಾ ಇರುತ್ತೇವೆ. ಅಭಿವೃದ್ಧಿಯ ಚಿಂತನೆಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next