Advertisement

ಯೋಧರು-ರೈತರ ಗೌರವಿಸುವ ಪ್ರವೃತ್ತಿ ಬೆಳೆಯಲಿ

06:28 PM Jan 25, 2022 | Team Udayavani |

ದಾವಣಗೆರೆ: ದೇಶದ ಗಡಿ ಕಾಯುವ ಯೋಧರು,ಅನ್ನ ನೀಡುವ ರೈತಾಪಿ ವರ್ಗಕ್ಕೆ ಗೌರವ, ಸ್ಥಾನಮಾನನೀಡುವುದು ಎಲ್ಲರ ಆದ್ಯ ಕರ್ತವ್ಯ ಎಂದು ಸಂಸದಡಾ| ಜಿ.ಎಂ. ಸಿದ್ದೇಶ್ವರ ಹೇಳಿದರು.ನಗರದ ಎಸ್‌. ನಿಜಲಿಂಗಪ್ಪ ಬಡಾವಣೆಯಅಮರ್‌ ಜವಾನ್‌ ಸ್ಮಾರಕ ಉದ್ಯಾನವನದಲ್ಲಿ ಸೋಮವಾರ ಎರಡನೇ ಹಂತದ ಅಭಿವೃದ್ಧಿಕಾಮಗಾರಿಗಳ ಉದ್ಘಾಟಿಸಿ ಮಾತನಾಡಿದ ಅವರು,ಪ್ರಧಾನಿಯವರು ಸದಾ ಸೈನಿಕರು, ಮಾಜಿ ಸೈನಿಕರಿಗೆಗೌರವ ನೀಡುತ್ತಿದ್ದಾರೆ.

Advertisement

ಬಿಜೆಪಿ, ಮುಖಂಡರು ಕೂಡಅದೇ ಕೆಲಸ ಮಾಡುತ್ತಿದ್ದೇವೆ. ಸೈನಿಕರು, ಮಾಜಿಸೈನಿಕರು ಮತ್ತವರ ಕುಟುಂಬದವರಿಗೆ ಬೇಕಾಗುವಎಲ್ಲ ರೀತಿಯ ಸೌಲಭ್ಯ ಒದಗಿಸಲು ನಾವು ಎಲ್ಲರೂಸದಾ ಬದ್ಧರಾಗಿರುತ್ತೇವೆ. ಸೈನಿಕರು, ಮಾಜಿ ಸೈನಿಕರಿಗೆಬೇಕಾದ ಕೆಲಸ ಮಾಡಿಕೊಡಲು ಬಿಜೆಪಿಯವರೇಅಧಿಕಾರಕ್ಕೆ ಬರಬೇಕಾಯಿತು ಎನ್ನುವಂತೆ ಕೆಲಸಮಾಡಿದ್ದೇವೆ ಎಂದರು.

ದಾವಣಗೆರೆಯಲ್ಲಿ ಬಹಳ ವರ್ಷದಿಂದ ಸೈನಿಕರು,ಮಾಜಿ ಸೈನಿಕರು, ಕುಟುಂಬದವರು ಅಮರ್‌ ಜವಾನ್‌ಪಾರ್ಕ್‌, ಸ್ಮಾರಕ, ವೇದಿಕೆ ಮಾಡಬೇಕು ಎಂಬ ಆಸೆಹೊಂದಿದ್ದರು. ದಾವಣಗೆರೆ ಮಹಾನಗರ ಪಾಲಿಕೆ,ದೂಡಾ, ಬಿಜೆಪಿ ಮುಖಂಡರು, ಕಾರ್ಯಕರ್ತರಎಲ್ಲರ ಸಹಕಾರದಿಂದ ಸೈನಿಕರ ಆಸೆ ಈಡೇರಿದೆ.

ಈಜಾಗದ ಮೇಲೆ ಬೇರೆಯವರು ಕಣ್ಣು ಹಾಕಿದ್ದರು.ಆದರೆ ಯಾಕೋ ಸುಮ್ಮನೆ ಬಿಟ್ಟಿದ್ದಾರೆ. ರಾಜನಹಳ್ಳಿಶಿವಕುಮಾರ್‌ ಜಾಗ ಹುಡುಕಿ ಕೆಲಸ ಪ್ರಾರಂಭಿಸಿದರು.ಒಟ್ಟಾರೆ 80 ಲಕ್ಷಕ್ಕೂ ಹೆಚ್ಚು ಅನುದಾನ ಖರ್ಚುಮಾಡಲಾಗಿದೆ ಎಂದು ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next