Advertisement

ವಸತಿ ಸೌಲಭ್ಯ: ಮರು ಭೂಸ್ವಾಧೀನ ಪ್ರಸ್ತಾವನೆ ಸಲ್ಲಿಸಿ

02:57 PM Jan 20, 2022 | Team Udayavani |

ದಾವಣಗೆರೆ: ವಸತಿರಹಿತರಿಗೆ ವಸತಿ ಕಲ್ಪಿಸಲುಬೇಕಾಗುವ ಜಮೀನಿಗಾಗಿ ಮರು ಭೂಸ್ವಾಧೀನಪ್ರಸ್ತಾವನೆ ಸಲ್ಲಿಸುವಂತೆ ವಸತಿ ಸಚಿವ ವಿ.ಸೋಮಣ್ಣ, ಜಿಲ್ಲಾಧಿಕಾರಿಯವರಿಗೆ ಸೂಚನೆನೀಡಿದರು.ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿಸಚಿವರು ಈ ಸೂಚನೆ ನೀಡಿದರು. ದಾವಣಗೆರೆನಗರದಲ್ಲಿ ಸುಮಾರು 27 ಸಾವಿರದಷ್ಟು ಜನರುವಸತಿಗಾಗಿ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿಕಾಯುತ್ತಿದ್ದಾರೆ.

Advertisement

ಇವರೆಲ್ಲರಿಗೂ ವಸತಿ ಸೌಲಭ್ಯಕಲ್ಪಿಸಲು ಅಗತ್ಯ ಜಮೀನಿನ ದೃಷ್ಟಿಯಿಂದಸಮಸ್ಯೆ ಸಾಕಷ್ಟು ಜಟಿಲವಾಗಿತ್ತು, ದಾವಣಗೆರೆನಗರದ ವಸತಿರಹಿತರ ಸಮಸ್ಯೆ ಪರಿಹರಿಸಲುಜಿಲ್ಲಾಧಿಕಾರಿಗಳ ಮುಖಾಂತರ ಸಾಲಕಟ್ಟೆಹಾಗೂ ಕೆ. ಬೇವಿನಹಳ್ಳಿ ಸರ್ವೆ ನಂಬರಿನಸುಮಾರು 170ಎಕರೆ ಜಮೀನನ್ನು ಗುರುತಿಸಿಭೂಸ್ವಾಧೀನಕ್ಕಾಗಿ ವಸತಿ ಇಲಾಖೆಗೆ ಪ್ರಸ್ತಾವನೆಸಲ್ಲಿಸಲಾಗಿತ್ತು, ಅನುದಾನ ಅಲಭ್ಯತೆಯಕಾರಣದಿಂದ 170 ಎಕರೆ ಭೂಸ್ವಾಧೀನನನೆಗುದಿಗೆ ಬಿದ್ದಿತ್ತು ಎಂದು ಸಂಸದ ಡಾ| ಜಿ.ಎಂ.ಸಿದ್ದೇಶ್ವರ ಗಮನ ಸೆಳೆದರು.

ದಾವಣಗೆರೆ ನಗರದ ಅಶೋಕಚಿತ್ರಮಂದಿರದ ಬಳಿಯ ರೇಲ್ವೆ ಗೇಟ್‌ ಬಳಿನಿರ್ಮಾಣ ಮಾಡಲುದ್ದೇಶಿಸಿರುವ ಲಿಮಿಟೆಡ್‌ಹೈಟ್‌ ಸಬ್‌ವೇಯನ್ನು ಮೇ ತಿಂಗಳ ಒಳಗಾಗಿನಿರ್ಮಾಣ ಮಾಡಿಕೊಡುವುದಾಗಿ ರೇಲ್ವೆಇಲಾಖೆಯ ಉಪಮುಖ್ಯ ಅಭಿಯಂತರದೇವೇಂದ್ರ ಗುಪ್ತ ಭರವಸೆ ನೀಡಿದರು.ಪುಷ್ಪಾಂಜಲಿ ಚಿತ್ರಮಂದಿರದ ಎದುರು ಎರಡುವೆಂಟ್‌ಗಳುಳ್ಳ ಕೆಳಸೇತುವೆ ಹಾಗೂ ರೈಲ್ವೆಹಳಿಗೆ ಸಮಾನಾಂತರವಾಗಿ ಪರ್ಯಾಯರಸ್ತೆ ನಿರ್ಮಾಣ ಮಾಡಲು ಭೂಸ್ವಾಧೀನದಅವಶ್ಯಕತೆಯಿದೆ.

ಖಾಸಗಿಯವರ ಜಮೀನನ್ನುಸ್ವಾಧೀನಪಡಿಸಿಕೊಂಡರೆ ಮಾತ್ರ ಪರ್ಯಾಯರಸ್ತೆ ನಿರ್ಮಾಣ ಮಾಡಲು ಸಾಧ್ಯ ಎನ್ನುವವಿಷಯವನ್ನು ಜಿಲ್ಲಾಧಿಕಾರಿಗಳು ಸಭೆಯ ಗಮನಕ್ಕೆತಂದರು. ರೈಲ್ವೆ ಇಲಾಖೆಯಲ್ಲಿ ಭೂಸ್ವಾಧೀನಕ್ಕಾಗಿಅನುದಾನ ಒದಗಿಸಲು ಅವಕಾಶ ಇಲ್ಲ, ರಾಜ್ಯಸರ್ಕಾರ ಭೂಮಿ ಒದಗಿಸಿದರೆ ಮಾತ್ರ ನಾವುಕೆಳಸೇತುವೆ ನಿರ್ಮಾಣ ಮಾಡಬಹುದು ಎಂದುರೈಲ್ವೆ ಅಧಿಕಾರಿಗಳು ತಿಳಿಸಿದರು.ಆಗ ಸಚಿವ ಸೋಮಣ್ಣ ಭೂಸ್ವಾಧೀನಕ್ಕೆ ಎಷ್ಟುಬೇಕಾಗಬಹುದು ಎನ್ನುವುದನ್ನು ಪ್ರತ್ಯೇಕವಾಗಿಪ್ರಸ್ತಾವನೆ ಸಿದ್ಧಪಡಿಸಿ ರೈಲ್ವೆ ಇಲಾಖೆಯವರಿಗೆಕೊಡಿ. ರೈಲ್ವೆ ಇಲಾಖೆಯವರು ಭೂಸ್ವಾಧೀನದಹಣ ಸೇರ್ಪಡೆ ಮಾಡಿಕೊಂಡು ನಮಗೆಒಟ್ಟಾರೆ ಅಂದಾಜು ಪಟ್ಟಿ ಸಲ್ಲಿಸಿದರೆ ತಾವುಮತ್ತು ಸಂಸದರು ಸೇರಿ ಮುಖ್ಯಮಂತ್ರಿಗಳಬಳಿ ಮಾತನಾಡಿ ಇದೊಂದು ವಿಶೇಷ ಪ್ರಕರಣಎಂದು ಪರಿಗಣಿಸಿ ಅನುದಾನ ಒದಗಿಸಲುಮನವಿ ಮಾಡಿಕೊಳ್ಳುತ್ತೇವೆ ಎಂದರು.ಅದೇ ರೀತಿ ತೋಳಹುಣಸೆ ಬಳಿ ರೇಲ್ವೆಗೇಟ್‌ಗೆ ಅಡ್ಡಲಾಗಿ ಬೀರೂರು-ಸಮ್ಮಸಗಿರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣ ಮಾಡಿರುವಫ್ಲೆ$çಓವರ್‌ ಕೆಳಗೆ ಜನರಿಗೆ ಓಡಾಡಲು ಸಬ್‌ವೇ ನಿರ್ಮಾಣ ಮಾಡಬೇಕಾಗಿತ್ತು, ಇದಕ್ಕೆಸಂಬಂಧಿಸಿದ 6.75 ಕೋಟಿ ರೂ.ಗಳನ್ನುಕೆಶಿಪ್‌ನವರು ರೈಲ್ವೆ ಇಲಾಖೆಗೆ ಡಿಪಾಸಿಟ್‌ಮಾಡಿದರೆ ರೈಲ್ವೆಯವರು ಸಬ್‌ವೇ ನಿರ್ಮಾಣಮಾಡಿಕೊಡಲಿದ್ದಾರೆ.

ಹಣ ಡೆಪಾಸಿಟ್‌ಮಾಡಬೇಕು ಎಂದು ಸಂಸದರು ಸಭೆಯಲ್ಲಿಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆಯಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್‌.ಅನಿಲ್‌ಕುಮಾರ್‌ ಅವರಿಗೆ ಮನವಿ ಮಾಡಿದರು.ಈ ಬಗ್ಗೆ ಕೆಶಿಪ್‌ನವರು ನಿಮಗೆ ಪ್ರಸ್ತಾವನೆಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಿ ಅನುದಾನಬಿಡುಗಡೆ ಮಾಡಿ ಎಂದರು.ಮೂಲಸೌಲಭ್ಯ ಇಲಾಖೆ ಹೆಚ್ಚುವರಿಮುಖ್ಯ ಕಾರ್ಯದರ್ಶಿ ಬಿ.ಎಚ್‌. ಅನಿಲ್‌ಕುಮಾರ್‌, ಐಡಿಡಿ ಹೆಚ್ಚುವರಿ ಕಾರ್ಯದರ್ಶಿಶ್ರೀಧರಮೂರ್ತಿ, ರೈಲ್ವೆ ಉಪ ಮುಖ್ಯಎಂಜಿನಿಯರ್‌ ದೇವೇಂದ್ರ ಗುಪ್ತಾ, ಜಿಲ್ಲಾಧಿಕಾರಿಮಹಾಂತೇಶ ಬೀಳಗಿ ಸೇರಿದಂತೆ ಹಲವುಅಧಿಕಾರಿಗಳು ಸಭೆಯಲ್ಲಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next