Advertisement

ಏಕ ಬೆಳೆಗೆ ರೈತರು ಸೀಮಿತ ಆಗದಿರಲಿ: ರವೀಂದ್ರನಾಥ್

02:53 PM Jan 19, 2022 | Team Udayavani |

ದಾವಣಗೆರೆ: ರೈತಾಪಿ ವರ್ಗ ಏಕ ಬೆಳೆಗೆ ಮಾತ್ರವೇಸೀಮಿತವಾಗದೆ ಇತರೆ ಬೆಳೆಗಳತ್ತಲೂ ಗಮನಹರಿಸಬೇಕು ಎಂದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ಸಲಹೆ ನೀಡಿದರು.

Advertisement

ಕೃಷಿ ಇಲಾಖೆಯಿಂದ ರಾಷ್ಟ್ರೀಯ ಆಹಾರಭದ್ರತಾ ಯೋಜನೆಯಡಿ ಮಂಗಳವಾರ ದಾವಣಗೆರೆ ತಾಲೂಕಿನ ಅರಸಾಪುರ ಗ್ರಾಮದಪ್ರಗತಿಪರ ರೈತರಾದ ಮಂಜನಾಯ್ಕ ರ ಹೊಲದಲ್ಲಿ ಏರ್ಪಡಿಸಿದ್ದ ರಾಗಿ ಬೆಳೆಯ ಕ್ಷೇತ್ರೋತ್ಸವದಲ್ಲಿಮಾತನಾಡಿದ ಅವರು, ರೈತರು ದೇಶಕ್ಕೆ ಅನ್ನಕೊಡುವಂತವರು. ಭದ್ರಾ ಅಚ್ಚುಕಟ್ಟಿನ ಕೊನೆಭಾಗದ ರೈತರು ಒಂದೇ ಬೆಳೆಗೆ ಅಂಟಿಕೊಳ್ಳದೇಬೆಳೆ ಪರಿವರ್ತನೆ ಮಾಡುವುದು ಉತ್ತಮ ಎಂದುತಿಳಿಸಿದರು.ಕೃಷಿ ಇಲಾಖೆಯವರು ಸಹ ಬೆಳೆ ಪರಿವರ್ತನಾಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕು.

ಭತ್ತದ ಬೆಳೆಯನ್ನುಹೊರತುಪಡಿಸಿ ಬೇರೆ ಬೇರೆ ಬೆಳೆಗಳನ್ನು ಬೆಳೆಯುವರೈತರಿಗೆ ತರಬೇತಿ ನೀಡುವುದರ ಜೊತೆಗೆ ಈರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ರೈತರಲ್ಲಿಜಾಗೃತಿ ಮೂಡಿಸಬೇಕು. ರಾಜ್ಯದ ಬೇರೆ ಬೇರೆಭಾಗದ ರೈತರು ಬಂದು ನೋಡುವಂತೆ ರಾಗಿ,ಜೋಳ ಹಾಗೂ ಇನ್ನಿತರೆ ಸಿರಿಧಾನ್ಯ ಬೆಳೆಗಳನ್ನುಬೆಳೆಯಬೇಕು ಎಂದು ತಿಳಿಸಿದರು.ರಾಗಿ ಬೆಳೆಗಾರರ ಒಕ್ಕೊರಲಿನ ಅಪೇಕ್ಷೆಯಂತೆಬೆಂಬಲ ಬೆಲೆಯಡಿ ಪ್ರತಿ ರೈತರಿಗೆ 20 ಕ್ವಿಂಟಲ್‌ಬದಲಿಗೆ 50 ಕ್ವಿಂಟಲ್‌ ವರೆಗೆ ಖರೀದಿ ಕೇಂದ್ರಕ್ಕೆಬಿಡಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿಮಾಡಲಾಗುವುದು. ಮಿತಿ ಹೆಚ್ಚಿಸುವ ನಿಟ್ಟಿನಲ್ಲಿಪ್ರಮಾಣಿಕವಾಗಿ ಪ್ರಯತ್ನ ಮಾಡುವುದಾಗಿಭರವಸೆ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next