Advertisement

ಭತ್ತ ಬೆಳೆಗಾರರಿಗೆ ತರಬೇತಿ ಕಾರ್ಯಾಗಾರ

01:26 PM Jan 14, 2022 | Team Udayavani |

ದಾವಣಗೆರೆ: ಕೃಷಿ ಕಾಯಕಯೋಗಿ ರೈತ ಉತ್ಪಾದಕ ಸಂಸ್ಥೆ ಹಾಗೂ ಕೃಷಿ ಇಲಾಖೆಸಹಯೋಗದಲ್ಲಿ ಭತ್ತ ಬೆಳೆಯುವರೈತರಿಗೆ ತರಬೇತಿ ಕಾರ್ಯಾಗಾರಹಾಗೂ ಅರ್ಹ ಫಲಾನುಭವಿಗಳಿಗೆತುಂತುರು ನೀರಾವರಿ ಘಟಕಗಳವಿತರಣೆ ಕಾರ್ಯಕ್ರಮ ತಾಲೂಕಿನಕುರ್ಕಿ ಗ್ರಾಮದಲ್ಲಿ ನಡೆಯಿತು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಶಾಸಕಪ್ರೊ| ಲಿಂಗಣ್ಣ ಮಾತನಾಡಿ, ನಮ್ಮಸರ್ಕಾರ ಮಣ್ಣು ಮತ್ತು ನೀರಿನ ಮಹತ್ವದಬಗ್ಗೆ ಸಾಕಷ್ಟು ಒತ್ತು ನೀಡುತ್ತಿದೆ. ಅದಕ್ಕೆಪೂರಕವಾದ ಅನೇಕ ಕಾರ್ಯಕ್ರಮಗಳನ್ನುನೀಡಿದೆ. ಸರ್ಕಾರ ಎಲ್ಲ ವರ್ಗದ ರೈತರಿಗೆಶೇ. 90ರ ರಿಯಾಯಿತಿ ದರದಲ್ಲಿತುಂತುರು ನೀರಾವರಿ ಘಟಕಗಳನ್ನುವಿತರಿಸುತ್ತಿದ್ದು, ರೈತರು ಇದರ ಅನುಕೂಲಪಡೆದುಕೊಳ್ಳಬೇಕು ಎಂದರು.ತರಳಬಾಳು ಕೃಷಿ ವಿಜ್ಞಾನ ಕೇಂದ್ರದಬೇಸಾಯ ತಜ್ಞ ಡಾ| ಮಲ್ಲಿಕಾರ್ಜುನ್‌ಮಾತನಾಡಿ, ಭತ್ತ ಬೆಳೆಯುವ ರೈತರಿಗೆಡ್ರಮ್‌ಸೀಡರ್‌, ಕೂರಿಗೆ ಬಿತ್ತನೆ ಮತ್ತುಚೆಲ್ಲು ಭತ್ತ ಕೃಷಿಯ ತಾಂತ್ರಿಕತೆಗಳಕುರಿತು ಮಾಹಿತಿ ನೀಡಿದರು.

ಕುರ್ಕಿಗ್ರಾಮದ ಕೃಷಿ ಕಾಯಕಯೋಗಿ ರೈತಉತ್ಪಾದಕ ಸಂಸ್ಥೆ ಅಧ್ಯಕ್ಷ ಸಿ.ಎನ್‌.ಲೋಹಿತ್‌ ಮಾತನಾಡಿ, ನಮ್ಮ ಸಂಸ್ಥೆಯುಮಾರ್ಚ್‌ ತಿಂಗಳಲ್ಲಿ ಶುರುವಾಗಿದ್ದುಸದ್ಯ ಈಗ 750 ಸದಸ್ಯರಿದ್ದಾರೆ. ಇನ್ನೂ250 ರೈತರು ಸದಸ್ಯರಾಗಿ ಅನುಕೂಲಪಡೆಯಲು ಅವಕಾಶವಿದೆ. ನಾವುನಮ್ಮ ಸಂಸ್ಥೆ ವತಿಯಿಂದ ವಿವಿಧ ಕೃಷಿಪರಿಕರಗಳನ್ನು ಮಾರಾಟ ಮಾಡುತ್ತಿದ್ದುಈವರೆಗೆ 80 ಲಕ್ಷ ರೂ. ವಹಿವಾಟುಮಾಡಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಸಹಾಯಕಕೃಷಿ ನಿರ್ದೇಶಕ ರೇವಣಸಿದ್ದನಗೌಡಎಚ್‌.ಕೆ. ಪ್ರಾಸ್ತಾವಿಕ ಮಾತನಾಡಿದರು.

ಕುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷಬಿ.ಜಿ. ನಂದ್ಯಪ್ಪ , ಕತ್ತಲಗೆರೆ ಕೃಷಿ ಮತ್ತುತೋಟಾಗಾರಿಕಾ ಸಂಶೋಧನಾ ಕೇಂದ್ರದವಿಜಾ`ನಿ ಎ.ಎಂ. ಮಾರುತೇಶ್‌, ಕೃಷಿಇಲಾಖೆಯ ಸಿಬ್ಬಂದಿ ಮತ್ತು ಪ್ರಗತಿಪರರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next