ದಾವಣಗೆರೆ: ದಾವಣಗೆರೆ ನಗರಕ್ಕೆ ಕುಡಿಯುವನೀರು ಪೂರೈಸುವ ಜಲಸಿರಿ ಕಾಮಗಾರಿಯನ್ನುಜೂನ್ ತಿಂಗಳ ಪೂರ್ಣಗೊಳಿಸಿ ನಗರದಜನತೆಗೆ 24×7 ಕುಡಿಯುವ ನೀರನ್ನುಸರಬರಾಜು ಮಾಡಲೇಬೇಕು. ಇಲ್ಲದಿದ್ದಲ್ಲಿಗುತ್ತಿಗೆದಾರರು ಹಾಗೂ ಅಧಿಕಾರಿಗಳೇ ಇದರಹೊಣೆ ಹೊರಬೇಕಾಗುತ್ತದೆ ಎಂದು ಸಂಸದಡಾ| ಜಿ.ಎಂ. ಸಿದ್ದೇಶ್ವರ ಹೇಳಿದರು.
ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಗುರುವಾರನಡೆದ ಜಲಸಿರಿ, ಸ್ಮಾರ್ಟ್ ಸಿಟಿ, ಏರ್ ಪೋಟ್ìಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾಸಭೆಯಲ್ಲಿ ಮಾತನಾಡಿದ ಅವರು ಸ್ಮಾರ್ಟ್‌ಸಿಟಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರುಈ ಹಿಂದೆ ನಡೆದ ಸಭೆಯಲ್ಲಿ 2022ರ ಜನವರಿತಿಂಗಳಿಗೆ ಜಲಸಿರಿ ಕಾಮಗಾರಿ ಪೂರ್ಣಗೊಳಿಸಿನೀರು ಒದಗಿಸುವುದಾಗಿ ವಾಗ್ಧಾನ ಮಾಡಿದ್ದರು.ಆದರೆ, ಸಬೂಬುಗಳನ್ನು ಹೇಳಿ ಮತ್ತೇ ಆರುತಿಂಗಳು ಕಾಲಾವಕಾಶ ಕೇಳುತ್ತಿದ್ದು ಯಾವುದೇಕಾರಣಕ್ಕೂ ಜೂನ್ 2022ಕ್ಕೆ ನೀರು ಸರಬರಾಜುಆಗಲೇಬೇಕು.
ಇನ್ನು ಮುಂದೆ ನಾನೇ ಖುದ್ದಾಗಿಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿಪರಿಶೀಲಿಸುತ್ತೇನೆ ಎಂದರು.2017ರಲ್ಲಿ ಆರಂಭವಾದ ಯೋಜನೆ ನಾಲ್ಕುವರ್ಷವಾದರೂ ಮುಗಿದಿಲ್ಲವೆಂದರೆ ತಾವು ಏನುಕೆಲಸ ಮಾಡುತ್ತೀದ್ದೀರಿ ಕೊರೋನಾ ಕಾರಣದಿಂದ9 ತಿಂಗಳು ಕಾರ್ಯಸ್ಥಗಿತವಾಗಿದ್ದುದು ಬಿಟ್ಟರೆಅಭಿವೃದ್ದಿ ಕಾಮಗಾರಿಗಳಿಗೆ ಯಾವುದೇಅಡಚಣೆಯಾಗಿಲ್ಲ. ಹಾಗಾಗಿ ಮುಂದಿನದಿನಗಳಲ್ಲಿ ಹಗಲು ರಾತ್ರಿ ಪಾಳಿಗಳಲ್ಲಿಕಾರ್ಯನಿರ್ವಹಿಸಿ ಬೇಗನೆ ಸಾರ್ವಜನಿಕರಿಗೆನೀರು ಕೊಡುವ ಕೆಲಸ ಮಾಡಿ ಎಂದರು.