Advertisement

ವಿವಿಧ ದೇವಾಲಯಗಳಲ್ಲಿ ಪೂಜೆ

01:10 PM Jan 14, 2022 | Team Udayavani |

ಹೊನ್ನಾಳಿ: ವೈಕುಂಠ ಏಕಾದಶಿಪ್ರಯುಕ್ತ ಗುರುವಾರ ತಾಲೂಕಿನವಿವಿಧ ದೇವಸ್ಥಾನಗಳಲ್ಲಿ ವಿಶೇಷಪೂಜೆ ಸಲ್ಲಿಸಲಾಯಿತು. ವೈಕುಂಠಏಕಾದಶಿಯ ದಿನದಂದು ಸ್ವರ್ಗದಬಾಗಿಲು ತೆರೆದಿರುತ್ತದೆ ಎಂಬ ಪೌರಾಣಿಕಕಥೆಯ ಹಿನ್ನೆಲೆಯಲ್ಲಿ ಭಕ್ತರು ದೇವರನಾಮಸ್ಮರಣೆ ಮಾಡಿದರು.

Advertisement

ತಾಲೂಕಿನ ಸುಂಕದಕಟ್ಟೆ ಗ್ರಾಮದ ಶ್ರೀ ಮಂಜುನಾಥಸ್ವಾಮಿ-ಶ್ರೀ ನರಸಿಂಹಸ್ವಾಮಿದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿನೈವೇದ್ಯ ಸಮರ್ಪಿಸಲಾಯಿತು ಎಂದುಪ್ರಧಾನ ಅರ್ಚಕ ಎಸ್‌. ರಾಜುಸ್ವಾಮಿತಿಳಿಸಿದರು. ಕುಂದೂರು ಗ್ರಾಮದ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿವಿಶೇಷ ಪೂಜೆ ಸಲ್ಲಿಸಲಾಯಿತುಎಂದು ಪ್ರಧಾನ ಅರ್ಚಕ ಕೆ.ಎಸ್‌.ಶ್ರೀನಿವಾಸ್‌ ಮಾಹಿತಿ ನೀಡಿದರು.

ಹಳೇದೇವರಹೊನ್ನಾಳಿ ಗ್ರಾಮದಶ್ರೀ ರಾಮಾನುಜಾಚಾರ್ಯರಮಠದಲ್ಲಿಯೂ ವೈಕುಂಠ ಏಕಾದಶಿಆಚರಣೆ ನಡೆಯಿತು ಎಂದು ಮಠದಗುರುಗಳಾದ ಎಸ್‌.ಕೆ. ಗೋಪಾಲಯ್ಯತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next