ದಾವಣಗೆರೆ: ಖಾಸಗಿ ಆಸ್ಪತ್ರೆಗಳು ಕೂಡ ಜ್ವರ, ನೆಗಡಿ, ಕೆಮ್ಮು ಮುಂತಾದ ರೋಗಲಕ್ಷಣ ಹೊಂದಿರುವವರಿಗೆ ಕಡ್ಡಾಯವಾಗಿ ಆರ್‌ಟಿಪಿಸಿಆರ್ ಪರೀಕ್ಷೆಗೆ ಶಿಫಾರಸುಮಾಡಬೇಕು ಹಾಗೂ ಆರೋಗ್ಯ ಇಲಾಖೆಗೆ ದಿನನಿತ್ಯ ವರದಿ ಸಲ್ಲಿಸಬೇಕು ಎಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು.ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕುರಿತಂತೆ ನಡೆದ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು.
ಕೊರೊನಾ ದೃಢಪಟ್ಟ ನಂತರ ಯಾವುದೇ ರೋಗ ಲಕ್ಷಣಗಳುಇಲ್ಲದಿರುವಂತಹ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳು ದಾಖಲಿಸಿಕೊಂಡು ಚಿಕಿತ್ಸೆನೀಡುವ ಅಗತ್ಯವಿಲ್ಲ. ಕಳೆದ ಬಾರಿಯಂತೆ ಖಾಸಗಿ ಆಸ್ಪತ್ರೆಯವರು ಹಣ ವಸೂಲಿಮಾಡುವುದಕ್ಕೆ ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.ಸೋಂಕಿನ ರೋಗ ಲಕ್ಷಣಗಳು ಇಲ್ಲದವರು ಹೋಂ ಐಸೋಲೇಷನ್‌ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ವೈದ್ಯರ ಸೂಚನೆಯಂತೆಔಷಧೋಪಚಾರ ಪಡೆಯಬೇಕು. ಅಧಿಕಾರಿಗಳು ಹೋಂ ಐಸೋಲೇಷನ್‌ನಲ್ಲಿಇರುವ ಎಲ್ಲರ ಬಗ್ಗೆ ನಿಗಾ ವಹಿಸಬೇಕು ಎಂದರು.ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಗಳ ಸಂಪರ್ಕಿತರ ಪತ್ತೆ ಕಾರ್ಯ ಸಮರ್ಪಕವಾಗಿನಡೆಯುತ್ತಿಲ್ಲ ಎಂಬ ಮಾಹಿತಿ ಇದೆ. ನಿರ್ಲಕ್ಷé ತೋರುವವರ ವಿರುದ್ಧ ಶಿಸ್ತುಕ್ರಮಜರುಗಿಸಲಾಗುವುದು. ಸೋಂಕಿತರು ಎಲ್ಲೆಂದರಲ್ಲಿ ಅಡ್ಡಾಡಿ ಸೋಂಕು ಕಾಡ್ಗಿಚ್ಚಿನಂತೆಹರಡುವ ಎಲ್ಲ ಸಾಧ್ಯತೆಗಳಿವೆ. ಹಾಗಾಗಿ ಅಧಿ ಕಾರಿಗಳು ಗಂಭೀರವಾಗಿಪರಿಗಣಿಸಬೇಕು. ತಾಲೂಕು ನೋಡಲ್ ಅಧಿ ಕಾರಿಗಳು ನಿತ್ಯ ವರದಿ ಸಲ್ಲಿಸಬೇಕು.ವೈದ್ಯಕೀಯ ವ್ಯವಸ್ಥೆಯ ಸಿದ್ಧತೆ ಕುರಿತಂತೆಯೂ ವರದಿ ನೀಡುವಂತೆ ತಾಕಿತುಮಾಡಿದರು.
ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಪ್ರಕರಣಗಳು ಕಂಡುಬಂದಲ್ಲಿಜಿಲ್ಲಾ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿಸಲಾಗುವುದು.ಕೋವಿಡ್ ಹೊರತುಪಡಿಸಿ ಇತರೆ ಕಾಯಿಲೆಗಳಿಗಾಗಿ ಬರುವ ರೋಗಿಗಳನ್ನುಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುವುದು. ಅಂತಹ ರೋಗಿಗಳಿಗೆ ಸೂಕ್ತಚಿಕಿತ್ಸೆ ನೀಡುವ ಮೂಲಕ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳುಸಹಕರಿಸಬೇಕು. ಸರ್ಕಾರದ ಆದೇಶದಂತೆ ಖಾಸಗಿ ಆಸ್ಪತ್ರೆಗಳು ಶೇ. 50ರಷ್ಟುಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳು ಶೇ. 75ರಷ್ಟು ಬೆಡ್‌ಗಳನ್ನು ಸರ್ಕಾರಕ್ಕೆಬಿಟ್ಟುಕೊಡುವಲ್ಲಿ ಯಾವುದೇ ರಾಜಿ ಇಲ್ಲ.
ಸರ್ಕಾರಿ ವೈದ್ಯರಿಂದ ಶಿಫಾರಸು ತರುವರೋಗಿಗಳಿಗೆ ಎಬಿಎಆರ್‌ಕೆ ಯೋಜನೆಯಡಿ ದಾಖಲಿಸಿ ಉಚಿತವಾಗಿ ಚಿಕಿತ್ಸೆಕೊಡಬೇಕು. ಸರ್ಕಾರದ ಸೂಚನೆಯಂತೆ ಎಬಿಎಆರ್‌ಕೆ ಕಾರ್ಡ್ ಹೊರತುಪಡಿಸಿರೋಗಿಗಳಿಂದ ಯಾವುದೇ ದಾಖಲೆ ಕೇಳಬಾರದು.ಯಾವುದೇ ಬಗೆಯ ಮುಂಗಡಹಣ ಪಾವತಿಸಿಕೊಳ್ಳುವಂತಿಲ್ಲ ಎಂದು ಎಚ್ಚರಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿ ಕಾರಿ ಪೂಜಾರ್ ವೀರಮಲ್ಲಪ್ಪ, ಜಿಪಂ ಉಪಕಾರ್ಯದರ್ಶಿಆನಂದ್, ಡಾ| ನಾಗರಾಜ್, ಡಾ| ಮೀನಾಕ್ಷಿ, ಮಹಾನಗರ ಪಾಲಿಕೆ ಆಯುಕ್ತವಿಶ್ವನಾಥ್ ಪಿ. ಮುದಜ್ಜಿ ಇತರರು ಭಾಗವಹಿಸಿದ್ದರು.