ದಾವಣಗೆರೆ: ವಯೋವೃದ್ಧರೊಬ್ಬರನ್ನು ಅಪಹರಿಸಿ 20 ಲಕ್ಷ ರೂಪಾಯಿಗೆ ಬೇಡಿಕೆ ಯಿಟ್ಟಿದ್ದ ಐವರು ಆರೋಪಿಗಳನ್ನು ಕೆಟಿಜೆ ನಗರ ಪೊಲೀಸರು 24 ಗಂಟೆಯಲ್ಲಿ ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆಯ ನಿಟುವಳ್ಳಿಯ ಸಾಗರ್, ನಂದಿಹಳ್ಳಿ ಯುವರಾಜ, ಸುಂದರ್ ನಾಯ್ಕ, ಚೇತನ್ ಕುಮಾರ,ಓರ್ವ ಕಾನೂನು ಸಂಘರ್ಷಕ್ಕೆ ಒಳಗಾದ ವ್ಯಕ್ತಿಯನ್ನು ಸೇರಿದಂತೆ ಐದು ಜನರನ್ನು ಚನ್ನಗಿರಿ ತಾಲೂಕಿನ ಅಂತಪುರ ಗ್ರಾಮದ ಬಳಿ ಬಂಧಿಸಿ, ವಿಚಾರಣೆಗೆ ಒಳಪಡಿಸ ಲಾಗಿದೆ.
ಗುರುವಾರ ಮಧ್ಯಾಹ್ನದ ಸಮಯದಲ್ಲಿ ಅಂಬಿಕಾ ನಗರದಲ್ಲಿ ಲೊಕೇಶ್ ಎಂಬ 60 ವರ್ಷದ ವೃದ್ಧನನ್ನು ದುಷ್ಕರ್ಮಿಗಳು ಅಪಹರಣಮಾಡಿದ್ದು ಹಾಗೂ 20 ಲಕ್ಷ ರೂಪಾಯಿ ಗಳಿಗೆ ಬೇಡಿಕೆ ಇಟ್ಟಿದ್ದರು.ಲೋಕೇಶ್ ಅವರ ಮಗ ನಾಗರಾಜ್ ಕೆಟಿಜೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ದಾವಣಗೆರೆ ಗ್ರಾಮಾಂತರ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರಿವಾಲ್, ನಗರ ಪೊಲೀಸ್ ಉಪಾಧಿಕ್ಷರರಾದ ಶ್ರೀ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ನಿರೀಕ್ಷಕ ಯು.ಜೆ.ಶಶಿಧರ್, ಸಂಚಾರ ವೃತ್ತ ನಿರೀಕ್ಷಕ ಅನಿಲ್, ಬಸವನಗರ ಪೊಲೀಸ್ ನಿರೀಕ್ಷಕ ಅರ್.ಆರ್.ಪಾಟೀಲ್, ಚನ್ನಗಿರಿ ಪೊಲೀಸ್ ನಿರೀಕ್ಷಕ ಮಧು, ಸಂತೇಬೆನ್ನುರು ಪೊಲೀಸ್ ನಿರೀಕ್ಷಕ ಮಹೇಶ್ ರವರುಗಳ ನೇತೃತ್ವದಲ್ಲಿ ಶ್ರೀ ಎಸ್.ಆರ್.ಕಾಟೇ, ಪಿಎಸ್‌ಐ ಕೆಟಿಜೆ ನಗರ ರವರು ಹಾಗೂ ಸಿಬ್ಬಂದಿಗಳ ತಂಡ ಐವರು ಆರೋಪಿಗಳನ್ನು ಬಂಧಿಸಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರ ಡಾ. ಕೆ. ಅರುಣ್ ಕಾರ್ಯಾಚರಣೆ ನಡೆಸಿದ ತಂಡವನ್ನು ಶ್ಲಾಘಿಸಿದ್ದಾರೆ.