ಹುಬ್ಬಳ್ಳಿ- ದಾವಣಗೆರೆ- ಬೆಂಗಳೂರು ಮಧ್ಯ ನೂತನ ಬಸ್‌ಗಳಿಗೆ ಚಾಲನೆ
Team Udayavani, Apr 18, 2017, 1:06 PM IST
ಹುಬ್ಬಳ್ಳಿ: ಪ್ರಯಾಣಿಕರ ಅನುಕೂಲಕ್ಕಾಗಿ ಹುಬ್ಬಳ್ಳಿಯಿಂದ ದಾವಣಗೆರೆ ಮಾರ್ಗದ ಮೂಲಕ ಬೆಂಗಳೂರಿಗೆ ನೂತನ ವೇಗದೂತ ಸಾರಿಗೆ ಬಸ್‌ಗಳಿಗೆ ನಗರದ ಹಳೆ ಬಸ್ ನಿಲ್ದಾಣದಲ್ಲಿ ಸೋಮವಾರ ಚಾಲನೆ ನೀಡಲಾಯಿತು.
ಪ್ರಯಾಣಿಕರಿಗೆ ತ್ವರಿತವಾಗಿ ತಲುಪಲು ಹುಬ್ಬಳ್ಳಿಯಿಂದ ದಾವಣಗೆರೆ ಮಾರ್ಗದಲ್ಲಿ ಎರಡು ನಿಯಮಿತ ನಿಲುಗಡೆ ಹಾಗೂ ಹುಬ್ಬಳ್ಳಿಯಿಂದ ಬೆಂಗಳೂರು ಮಾರ್ಗದಲ್ಲಿ ಒಂದು ನಿಲುಗಡೆ ಕಲ್ಪಿಸುವ ನೂತನ ಸಾರಿಗೆ ಬಸ್‌ಗಳಿಗೆ ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು,
ಶಾಸಕ ಪ್ರಸಾದ ಅಬ್ಬಯ್ಯ, ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ಪೂಜೆ ಸಲ್ಲಿಸುವುದರ ಮೂಲಕ ಚಾಲನೆ ನೀಡಿದರು. ಸಾರ್ವಜನಿಕ ಪ್ರಯಾಣಿಕರು ಸದರಿ ನೂತನ ವೇಗದೂತ ಸಾರಿಗೆ ಬಸ್‌ಗಳ ಸದುಪಯೋಗ ಪಡೆಯುವಂತೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಆರ್.ವಿನೋತ್ ಪ್ರಿಯಾ, ಮುಖ್ಯ ಸಂಚಾರ ವ್ಯವಸ್ಥಾಪಕ ಎಸ್.ಎಸ್. ಸಾವಳಗಿ, ಮುಖ್ಯ ಕಾನೂನು ಅಧಿಧಿಕಾರಿ ವೆಂಕಟೇಶ, ಕೆ.ಎಲ್. ಗುಡೇನ್ನವರ, ವಿವೇಕಾನಂದ ವಿಶ್ವಜ್ಞ, ಶಶಿಧರ ಚನ್ನಪ್ಪಗೌಡರ ಇದ್ದರು.