Advertisement

Gayatri Siddeshwar: ಸ್ಪರ್ಧಿಸುವ ಇಚ್ಛೆ ಇರಲಿಲ್ಲ, ಪತಿ ಅನಾರೋಗ್ಯದಿಂದ ಕಣಕ್ಕೆ: ಗಾಯತ್ರಿ

10:22 AM Apr 04, 2024 | Team Udayavani |

ಉದಯವಾಣಿ ಸಮಾಚಾರ
ರಾಜಕೀಯ ಹಿನ್ನೆಲೆಯುಳ್ಳ ಪ್ರತಿಷ್ಠಿತ ಕುಟುಂಬದ ಸದಸ್ಯೆ, ಮಾಜಿ ಸಂಸದ ದಿ. ಜಿ.ಮಲ್ಲಿಕಾರ್ಜುನಪ್ಪ ಸೊಸೆ ಹಾಗೂ ಹಾಲಿ ಸಂಸದ ಡಾ. ಜಿ. ಎಂ.ಸಿದ್ದೇಶ್ವರ ಪತ್ನಿ ಗಾಯತ್ರಿ(Gayatri Siddeshwar) ಅವರ ತವರೂರು ಶಿವಮೊಗ್ಗ. 69 ವರ್ಷದ ಗಾಯತ್ರಿ ಓದಿದ್ದು ಪಿಯುಸಿ. ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಅವರು ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಸಚಿವ ಮಲ್ಲಿಕಾರ್ಜುನ್‌ ಪತ್ನಿ ಡಾ. ಪ್ರಭಾ ಅವರನ್ನು ಎದುರಿಸುತ್ತಿದ್ದಾರೆ.

Advertisement

*ನಿಮ್ಮ ಜೀವನದಲ್ಲೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದೀರಿ. ಏನನ್ನಿಸುತ್ತಿದೆ?
ಚುನಾವಣೆ ನನಗೆ ಹೊಸದೇನಲ್ಲ. ಆದರೆ ಸ್ಪರ್ಧೆ ಮಾಡುತ್ತಿರುವುದು ಹೊಸದು. ಕಳೆದ 28 ವರ್ಷಗಳಿಂದ ಅತಿ ಹತ್ತಿರದಿಂದ ಚುನಾವಣೆಗಳನ್ನು ನಾನು ನೋಡಿದ್ದೇನೆ. ಪಕ್ಷದ ಕೆಲಸ ಮಾಡಿದ್ದೇನೆ. .

*ಚುನಾವಣೆಗೆ ಸ್ಪರ್ಧಿಸಬೇಕು ಎಂದು ನಿಮಗೆ ಅನ್ನಿಸಿದ್ದು ಯಾವಾಗ, ಯಾಕೆ, ಏನು ಪ್ರೇರಣೆ?
ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ಖಂಡಿತ ನನಗಿರಲಿಲ್ಲ. ಪ್ರೇರಣೆಯ ಮಾತೆಲ್ಲಿಂದ ಬರುತ್ತೆ.

*ಮೊದಲ ಪ್ರಯತ್ನದಲ್ಲೇ ನೀವು ಲೋಕಸಭೆಗೆ ಸ್ಪರ್ಧಿಸುತ್ತಿದ್ದೀರಿ, ಕಾರಣವೇನು?
ಪಕ್ಷದಿಂದ ಪ್ರತಿ ಬಾರಿ ನಡೆಸುವಂತೆ ಈ ಬಾರಿಯೂ ಸರ್ವೇ ನಡೆಸಿದ್ದಾರೆ, ಸರ್ವೇಯಲ್ಲಿ ನಮ್ಮ ಕುಟುಂಬದ ಪರವಾಗಿ ಕ್ಷೇತ್ರದ ಜನತೆ ಒಲವು ತೋರಿದ್ದಾರೆ. ನನ್ನ ಪತಿ ಅನಾರೋಗ್ಯದ ಕಾರಣ ಸ್ಪರ್ಧೆ ಮಾಡಲು ಒಲವು ವ್ಯಕ್ತಪಡಿಸದೇ ಇದ್ದುದ ರಿಂದ ನನ್ನ ಸ್ಪರ್ಧೆ ಅನಿವಾರ್ಯವಾಯಿತು.

Advertisement

*ನಿಮ್ಮ ಕ್ಷೇತ್ರದ ಜನ ನಿಮಗೆ ಯಾವ ಕಾರಣಕ್ಕಾಗಿ ಮತ ಹಾಕಬೇಕು?
ನಮ್ಮ ಕುಟುಂಬ ಕ್ಷೇತ್ರದ ಜನರೊಂದಿಗೆ ಹೊಂದಿರುವ ನಿರಂತರ ಸಂಪರ್ಕ, ಕಳೆದ 28 ವರ್ಷಗಳಲ್ಲಿ ಜನರೊಂದಿಗೆ ನಾವು ಸ್ಪಂ ದಿಸಿರುವ ರೀತಿ, ಕೇಂದ್ರದಲ್ಲಿ ಕಳೆದ 10 ವರ್ಷಗಳಲ್ಲಿ ಮೋದಿಯವರ ಕಾರಣದಿಂದ ದೇಶದಲ್ಲಿ ಆಗಿರುವ ಸುಧಾರಣೆ ಜನರ ಮುಂದಿದೆ.

*ರಾಜಕೀಯದಲ್ಲಿ ನಿಮ್ಮ ಗಾಡ್‌ಫಾದರ್‌ ಯಾರು ಮತ್ತು ಏಕೆ?
ಒಬ್ಬ ಸಂಸದ ಹೇಗಿರಬೇಕೆಂಬುದನ್ನು ತೋರಿಸಿ ಕೊಟ್ಟ ನಮ್ಮ ಮಾವ, “ಅಜಾತಶತ್ರು’ ಎಂದೇ ಜನಮಾನಸದಲ್ಲಿ ನೆಲೆ ನಿಂತಿರುವ ಜಿ.ಮಲ್ಲಿಕಾ  ರ್ಜುನಪ್ಪ ಅವರು ನನ್ನ ಗಾಡ್‌ಫಾದರ್‌.

*ಈ ಚುನಾವಣೆಯನ್ನು ನೀವು ಹೇಗೆ ಗೆಲ್ಲುತ್ತೀರಿ? 5 ಕಾರಣ ಹೇಳಿ
ನಮ್ಮ ಕುಟುಂಬ ಇಡೀ ಲೋಕಸಭಾ ಕ್ಷೇತ್ರದ ಜನರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿದೆ. ನನ್ನ ಪತಿ ಜಿ.ಎಂ.ಸಿದ್ದೇಶ್ವರ ಕಳೆದ 20 ವರ್ಷಗಳಲ್ಲಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿದ್ದಾರೆ. ಸಿದ್ದೇಶ್ವರ ಕ್ಷೇತ್ರದ 1260 ಹಳ್ಳಿಗಳಿಗೆ ಕನಿಷ್ಟ ಐದಾರು ಬಾರಿ ಭೇಟಿ ನೀಡಿದ್ದಾರೆ. ಪ್ರತಿ ಹಳ್ಳಿಗಳಲ್ಲಿ 20-25 ಕಾರ್ಯಕರ್ತರನ್ನು ಹೆಸರಿಸಿ ಮಾತನಾಡುವಷ್ಟು ಕ್ಷೇತ್ರದಲ್ಲಿ ಬೇರು ಬಿಟ್ಟಿದ್ದಾರೆ.

*ನಿಮ್ಮ ಕನಸೇನು? ಗೆದ್ದು ದಿಲ್ಲಿಗೆ ಹೋಗಿ ಏನು ಮಾಡಬೇಕು ಅಂತ ಇದ್ದೀರಿ?
ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸಿದೆ. ಗೆದ್ದ ಮೇಲೆ ಖಂಡಿತ ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಯೋಜನೆಗಳನ್ನು ಕ್ಷೇತ್ರಕ್ಕೆ ತರಬೇಕೆನ್ನುವ ತುಡಿತ ನನ್ನಲ್ಲಿದೆ. ಕೃಷಿಕರ ಮತ್ತು ನಿರೋದ್ಯೋಗ ಸಮಸ್ಯೆ ಪರಿಹಾರಕ್ಕೆ ನನ್ನ ಮೊದಲ ಆದ್ಯತೆ.

*ಗೆದ್ದರೆ ನಿಮ್ಮ ಲೋಕಸಭಾ ಕ್ಷೇತ್ರಕ್ಕೆ ಮಾಡುವ ಮೊದಲ ಕೆಲಸ ಏನು?
ಕ್ಷೇತ್ರದಲ್ಲಿ ಒಂದು ಇಂಡಸ್ಟ್ರಿಯಲ್‌ ಕಾರಿಡಾರ್‌ ನಿರ್ಮಾಣ ಮಾಡಬೇಕೆನ್ನುವುದು ನನ್ನ ಪತಿಯ ಕನಸು. ಇದನ್ನು ಯಶಸ್ವಿಯಾಗಿ ಅನುಷ್ಠಾನ ಮಾಡಲು ಪ್ರಯತ್ನ ಪಡುತ್ತೇನೆ.

*ನಿಮ್ಮ ಕ್ಷೇತ್ರದ ಭವಿಷ್ಯಕ್ಕೆ ಇರುವ 5 ಕನಸುಗಳೇನು? ಅವುಗಳನ್ನು ಹೇಗೆ ಈಡೇರಿಸುತ್ತೀರಿ?
ದಾವಣಗೆರೆಯಲ್ಲಿ ವಿಮಾನನಿಲ್ದಾಣ ನಿರ್ಮಾಣ, ಈಗಾಗಲೇ ಇರುವ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್‌ನ್ನು ವಿಸ್ತರಣೆ ಮಾಡುವುದು, ಇಂಡಸ್ಟ್ರಿಯಲ್‌ ಕಾರಿಡಾರ್‌ ನಿರ್ಮಾಣ ಮಾಡುವುದು, ಮಹಿಳೆಯರಿಗೆ ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಸ್ವಂತ ಉದ್ಯೋಗಕ್ಕಾಗಿ ಸಣ್ಣ ಕೈಗಾರಿಕೆಗಳ ಕ್ಲಸ್ಟರ್‌ ಅನುಷ್ಠಾನ, ಅಂತರ್ಜಲ ವೃದ್ಧಿಗಾಗಿ ಜಲಮರುಪೂರಣದಂತಹ
ಯೋಜನೆಗಳಿಗೆ ಒತ್ತು ನೀಡುತ್ತೇನೆ.

*ಚುನಾವಣೆ ವೇಳೆ ಅನೇಕ ಹಿರಿಯ ನಾಯಕರನ್ನು ನೀವು ಸಂಭಾಳಿಸಬೇಕಾಗುತ್ತದೆ. ಹೇಗೆ ನಿಭಾಯಿಸುತ್ತೀರಿ?
ಹಿರಿಯ ನಾಯಕರನ್ನು ನಾನು ಹೊಸದಾಗಿ ನೋಡುತ್ತಿಲ್ಲ. ನಮ್ಮ ಮನೆಯಲ್ಲಿಯೇ ಆತಿಥ್ಯ ನೀಡಿದ್ದೇವೆ. ಹೀಗಾಗಿ ನನಗೆ ಹಿರಿಯ ನಾಯಕರನ್ನು ಸಂಭಾಳಿಸುವುದು ಸವಾಲೆನ್ನಿಸುತ್ತಿಲ್ಲ.

*ಎಚ್‌.ಕೆ.ನಟರಾಜ್‌

Advertisement

Udayavani is now on Telegram. Click here to join our channel and stay updated with the latest news.

Next