ದಾವಣಗೆರೆ: ಎಸ್.ಎಸ್. ಬಡಾವಣೆ ಎ ಬ್ಲಾಕ್‌ನ ರಿಂಗ್ ರಸ್ತೆಯ ಖಾಲಿ ಜಾಗವೊಂದರಲ್ಲಿ ವ್ಯಕ್ತಿಯೊಬ್ಬನ ಕತ್ತು ಕೊಯ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಪೊಲೀಸರು ಕೊಲೆಯಾದವನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ದಾವಣಗೆರೆಯ ಬುದ್ಧ ಬಸವ ನಗರದ ನಿವಾಸಿ ಶ್ವೇತಾ (28), ಆಕೆಯ ಪ್ರಿಯಕರ ಚಂದ್ರಶೇಖರ್ ಅಲಿಯಾಸ್ ಚಂದ್ರು (29) ಬಂಧಿತರು.
ಮಾ. 23 ರಂದು ರಿಂಗ್ ರಸ್ತೆ ಗುಡ್ ಹೋಮ್ಸ್ ಫರ್ನಿಚರ್ ಅಂಗಡಿ ಪಕ್ಕದ ಖಾಲಿ ನಿವೇಶನದಲ್ಲಿ 35 ವರ್ಷದ ಮಹಾಂತೇಶ್ ಪುಟ್ಟಪ್ಪ ಚೌರದ (36)ಎಂಬಾತನ ಮೇಲೆ ಕಲ್ಲು ಎತ್ತಿ ಹಾಕಿ ಹಲ್ಲೆ ಮಾಡಲಾಗಿತ್ತು. ತೀವ್ರವಾಗಿ ಗಾಯ ಗೊಂಡಿದ್ದ ಅವನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದನು. ಬೆರಳಚ್ಚಿನ ಸಹಾಯದಿಂದ ಕೊಲೆಗೀಡಾದವನು ಹಾನಗಲ್ ತಾಲೂಕಿನ ಬೇಚುವಳ್ಳಿಯ ಮಹಾಂತೇಶ್ ಪುಟ್ಟಪ್ಪ ಚೌರದ ಎಂದು ಗುರುತು ಪತ್ತೆ ಹಚ್ಚಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ವಿದ್ಯಾನಗರ ಪೊಲೀಸರು ಮೃತನ ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕುತ್ಯಾರು: ತಿಂಗಳ ಹಿಂದೆ ಖರೀದಿಸಿದ ರಿಕ್ಷಾದಲ್ಲಿ ಬಾಡಿಗೆ ಹೋದ ವ್ಯಕ್ತಿ ನಾಪತ್ತೆ