ದಾವಣಗೆರೆ: ನಡು ಕರ್ನಾಟಕದ ಕೇಂದ್ರಬಿಂದು ದಾವಣಗೆರೆಯಲ್ಲಿ ಭಾನುವಾರ ಮತ್ತೆ ನಾಲ್ವರಲ್ಲಿ ಮಹಾಮಾರಿ ಕೋವಿಡ್ ವೈರಸ್ ವಕ್ಕರಿಸಿದರೆ, ಕೋವಿಡ್-19ಗೆ ತುತ್ತಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಜನರು ಡಿಸ್ಚಾರ್ಜ್ ಆಗಿದ್ದಾರೆ. 60 ವರ್ಷದ ಮಹಿಳೆಯೊಬ್ಬರಲ್ಲಿ (ರೋಗಿ ನಂಬರ್ 1962) ಕಂಟೇನ್ಮೆಂಟ್ ಝೋನ್ ಸಂಪರ್ಕದಿಂದ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.
70 ವರ್ಷದ ವಯೋವೃದ್ಧೆಗೂ (ರೋಗಿ ನಂಬರ್ 1992) ಕಂಟೇನ್ಮೆಂಟ್ ಝೋನ್ ಸಂಪರ್ಕದಿಂದಲೇ ಸೋಂಕು ಇರುವುದು ದೃಢಪಟ್ಟಿದೆ. ವಯೋವೃದ್ಧೆಯರು ಕಂಟೇನ್ಮೆಂಟ್ ಝೋನ್ ಸಂಪರ್ಕದಿಂದ ಸೋಂಕಿಗೆ ಒಳಗಾಗಿರುವುದು ಜನರಲ್ಲಿ ಗಾಬರಿ ಹುಟ್ಟಿಸಿದೆ. 33 ವರ್ಷದ ಮಹಿಳೆ (ರೋಗಿ ನಂಬರ್ 1963) ಹಾಗೂ ಮತ್ತೂರ್ವ ಮಹಿಳೆ (ರೋಗಿ ನಂಬರ್ 1964) ಇಬ್ಬರಿಗೂ ರೋಗಿ ನಂಬರ್ 1251ರ ಸಂಪರ್ಕದಿಂದ ಸೋಂಕು ತಗುಲಿದೆ. ಭಾನುವಾರ ನಾಲ್ವರು ಮಹಿಳೆಯರಲ್ಲೇ ಸೋಂಕು ಕಾಣಿಸಿಕೊಂಡಿದೆ. ಈ ನಾಲ್ವರು ಈಗಾಗಲೇ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಇದ್ದಾರೆ.
ನಾಲ್ವರಿಗೆ ಸೋಂಕು ದೃಢಪಟ್ಟಿರುವ ಆತಂಕದ ನಡುವೆಯೂ ಒಂದೇ ದಿನ 18 ಜನರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದು ಜನರಲ್ಲಿ ಆತ್ಮವಿಶ್ವಾಸ ಮೂಡಿಸಿದೆ. ರೋಗಿ ನಂಬರ್ 621, 624, 627, 632, 663, 667, 669, 670, 671, 695, 724, 725, 726, 728, 730, 731, 847 ಹಾಗೂ 850 ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆದವರಲ್ಲಿ ಮಕ್ಕಳು ಕೂಡ ಇರುವುದು ವಿಶೇಷ. ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ, ಶುಶ್ರೂಷಕಿಯರು, ಭದ್ರತಾ ಸಿಬ್ಬಂದಿ ಚಪ್ಪಾಳೆ ತಟ್ಟಿ ಶುಭ ಕೋರುವ ಮೂಲಕ ಬೀಳ್ಕೊಟ್ಟರು. ನಿನ್ನೆ 10 ಜನರು ಒಳಗೊಂಡಂತೆ ಒಟ್ಟಾರೆ 806 ಜನರು ಅವಲೋಕನದಲ್ಲಿದ್ದಾರೆ. 29 ಜನರು ಮನೆಯಲ್ಲಿ, 29 ಜನರು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದಾರೆ. ಒಟ್ಟಾರೆಯಾಗಿ 515 ಜನರು ಐಸೋಲೇಷ್‌ನಲ್ಲಿ ಇದ್ದಾರೆ. 361 ಜನರು ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು. 6,404 ಮಾದರಿಯಲ್ಲಿ 4,627 ಮಾದರಿ ವರದಿ ನೆಗೆಟಿವ್ ಆಗಿದೆ. 1,412 ಮಾದರಿಗಳ ವರದಿ ಬರಬೇಕಾಗಿದೆ. ಒಟ್ಟಾರೆ 125 ಸೋಂಕಿನ ಪ್ರಕರಣಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 46 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲೀಗ ಒಟ್ಟು 75 ಸಕ್ರಿಯ ಪ್ರಕರಣಗಳಿವೆ.