Advertisement

Davanagere: ಅಡುಗೆ ಅನಿಲ ಸಿಲಿಂಡರ್ ಸ್ಫೋಟ ಪ್ರಕರಣ; ದಂಪತಿ ಸಾವು

12:30 PM Jul 10, 2024 | Team Udayavani |

ದಾವಣಗೆರೆ: ಅಡುಗೆ ಅನಿಲ ಸಿಲಿಂಡರ್ ಸ್ಫೋಟದಿಂದ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಮತ್ತೆ ಇಬ್ಬರು ಸಾವನ್ನಪ್ಪಿದ್ದಾರೆ. ಸಿಲಿಂಡರ್ ಸ್ಪೋಟ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.

Advertisement

ಮಲ್ಲೇಶಪ್ಪ (64) ಹಾಗೂ ಲಲಿತಮ್ಮ (58) ದಂಪತಿ ಮೃತಪಟ್ಟವರು.

ಕೆಲ ದಿನಗಳ ಹಿಂದೆ ಎಸ್.ಒ.ಜಿ. ಕಾಲೋನಿಯ ಮಲ್ಲೇಶಪ್ಪ ಎಂಬವರ ಮನೆಯಲ್ಲಿ ಸಿಲಿಂಡರ್ ಸ್ಫೋಟವಾಗಿತ್ತು. ಕಳೆದ ವಾರ ಪಾರ್ವತಮ್ಮ ಎಂಬುವರು ಮೃತಪಟ್ಟಿದ್ದರು.

ಸಿಲಿಂಡರ್ ಸ್ಪೋಟದ ಅವಘಡದಲ್ಲಿ ಮನೆಯ ಯಜಮಾನ ಮಲ್ಲೇಶಪ್ಪ ಹಾಗೂ ಪತ್ನಿ ಲಲಿತಮ್ಮ, ಪಕ್ಕದ ಮನೆಯ ಪಾರ್ವತಮ್ಮ, ಇವರ ಪುತ್ರ ಪ್ರವೀಣ್‌ ಹಾಗೂ ಸೊಸೆ ಸೌಭಾಗ್ಯ ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಜುಲೈ 3ರಂದು ಪಾರ್ವತಮ್ಮ ಮೃತಪಟ್ಟಿದ್ದರು.

ಸೌಭಾಗ್ಯಮ್ಮ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮನೆಯ ಯಜಮಾನಿ ಲಲಿತಮ್ಮ ಅವರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಇವರ ಪತಿ ಮಲ್ಲೇಶಪ್ಪ ಮಂಗಳವಾರ ಮಧ್ಯಾಹ್ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ ಎಂದು ವಿದ್ಯಾನಗರ ಠಾಣೆಯ ಪಿಎಸ್ಐ ಪ್ರಭಾವತಿ ಸಿ ಶೇತ ಸನದಿ ಮಾಹಿತಿ ನೀಡಿದ್ದಾರೆ.

Advertisement

ಅಡುಗೆ ಅನಿಲ ಸೋರಿಕೆ ಆಗ್ತಿದೆ ಎಂದು ನೋಡಲು ಬಂದಿದ್ದ ಪಕ್ಕದ ಮನೆಯ ಪ್ರವೀಣ್ ಹಾಗೂ ಸೌಭಾಗ್ಯ ಚಿಕಿತ್ಸೆ ಮುಂದುವರೆದಿದೆ. ಇವರು ಸಿಲಿಂಡರ್ ಸ್ಪೋಟ ಆಗಿ ಗಾಯಳಾಗಿದ್ದರು. ಇನ್ನು ಪಾರ್ವತಮ್ಮ ಜು.3 ರಂದು ಕೊನೆಯುಸಿರೆಳೆದಿದ್ದರು. ಐವರಲ್ಲಿ ಒಟ್ಟು ಮೂರು ಜನ ಸಾವನಪ್ಪಿದ್ದು, ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಲಿಂಡರ್ ಸ್ಪೋಟ ಹಿನ್ನಲೆ ಸೌಭಾಗ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಐಸಿಯು ನಲ್ಲಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಸ್ಪೋಟದ ರಭಸಕ್ಕೆ ಮನೆಯ ಮೇಲ್ಚಾವಣಿ ಹಾರಿ ಹೋಗಿತ್ತು.

ದುರ್ಘಟನೆಯಲ್ಲಿ ಲಲಿತಮ್ಮ(50), ಸೌಭಾಗ್ಯ(36), ಪಾರ್ವತಮ್ಮ (45) ಮಲ್ಲೇಶಪ್ಪ(60), ಪ್ರವೀಣ್(35)ಗೆ ಗಂಭೀರವಾಗಿ ಗಾಯಗೊಂಡಿದ್ದರು. ಮೃತ ಲಲಿತಮ್ಮ, ಮಲ್ಲೇಶಪ್ಪ ದಂಪತಿ ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗಿದ್ದ ಹಿನ್ನಲೆ ಸರಿಪಡಿಸಲು ಪಕ್ಕದ ಮನೆಯ ಪ್ರವೀಣ್ ಅವರನ್ನು ಲಲಿತಮ್ಮ ಕರೆತಂದಿದ್ದರು. ಅಡುಗೆ ಅನಿಲ ಸೋರಿಕೆಯಾಗುತ್ತಿದ್ದ ಕೋಣೆಗೆ ಆಗಮಿಸಿದ ಪ್ರವೀಣ್, ಲೈಟ್ ಸ್ವಿಚ್ ಹಾಕಿದ ಪರಿಣಾಮ ಸಿಲಿಂಡರ್ ಸ್ಪೋಟವಾಗಿರುವ ಸಾಧ್ಯತೆ ಇದೆ. ಪ್ರವೀಣ್ ನೊಂದಿಗೆ ಸೌಭಾಗ್ಯ, ಮೃತ ಪಾರ್ವತಮ್ಮ ಕೂಡ ಅನಿಲ ಸೋರಿಕೆ ಆಗಿರುವುದನ್ನು ನೋಡಲು ಲಲಿತಮ್ಮ ಅವರ ಮನೆಗೆ ಆಗಮಿಸಿದ್ದರು.‌ ಆಗ ಸಿಲಿಂಡರ್ ಸ್ಪೋಟ ಆಗಿದೆ. ಇನ್ನು ನಾಲ್ವರಿಗೆ ಶೇ. 50 ರಿಂದ 60 ರಷ್ಟು ಸುಟ್ಟ ಗಾಯಗಳಾಗಿದ್ದವು. ಸೌಭಾಗ್ಯ ಹಾಗೂ ಪ್ರವೀಣ್ ಗೆ ಖಾಸಗಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಮುಂದುವರೆಸಿಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next