Advertisement
ಗುರುವಾರ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕೆ.ಟಿ.ಜೆ. ನಗರ- ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಯಶೋಧಾ ಯೋಗೇಶ್ ಪರ ಪ್ರಚಾರ ನಡೆಸಿದರು. ಮನೆ ಮನೆಗೆ ತೆರಳಿ, ಕೇಂದ್ರ, ರಾಜ್ಯ ಸರ್ಕಾರದ ಸರ್ಕಾರದ ಸಾಧನೆ ತಿಳಿಸಿ, ದಾವಣಗೆರೆ ಅಭಿವೃದ್ಧಿಗೆ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
Related Articles
Advertisement
ಮಾಜಿ ಮೇಯರ್ ಅನಿತಾ ಮಾಲತೇಶ್ ತಮ್ಮ ಪತಿ, 10ನೇ ವಾರ್ಡ್‌ನ ಕಾಂಗ್ರೆಸ್ ಸದಸ್ಯ ಮಾಲತೇಶ್ ಜಾಧವ್ ಪರ ಪ್ರಚಾರ ನಡೆಸಿದರು. ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ. ಗಣೇಶ್ ದಾಸಕರಿಯಪ್ಪ 14ನೇ ವಾರ್ಡ್‌ನ ಸಾದತ್ ಮುಬಾರಕ್ ಪರ ವಿವಿಧೆಡೆ ಬಿರುಸಿನ ಪ್ರಚಾರ ನಡೆಸಿದರು.
17ನೇ ವಾರ್ಡ್‌ನ ಸಿಪಿಐ ಅಭ್ಯರ್ಥಿ ಎಂ.ಜಿ. ಶ್ರೀಕಾಂತ್, 16ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಎಚ್. ದಿವಾಕರ್ ಇತರರು ಪ್ರಚಾರ ನಡೆಸಿದರು. ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಬೂಬಜಾರ್ ಮತ್ತು ಶೇಖರಪ್ಪ ನಗರದಲ್ಲಿ 19ನೇ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಕೆ.ಎಂ. ಬಸವರಾಜ್ ಪರ ಚುನಾವಣಾ ಪ್ರಚಾರ ನಡೆಸಿದರು. ಬಂಬೂಬಜಾರ್ ಮತ್ತು ಶೇಖರಪ್ಪ ನಗರದ ಮನೆ ಮನೆಗೆ ತೆರಳಿ ಚುನಾವಣಾ ಪ್ರಚಾರ ನಡೆಸಿದರು. ದಾವಣಗೆರೆ ನಗರದ ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಸದಸ್ಯ ಪಿ. ವಾಗೀಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಎಸ್.ಸುಶೀಲಮ್ಮ, ವೈ. ಮಲ್ಲೇಶ್, ಕುಮಾರ್‌ಸ್ವಾಮಿ, ಗೌತಮ್ ಜೈನ್, ಟಿ.ವಿ. ರಾಜು, ಮರುಳಪ್ಪ, ಸಿದ್ದೇಶ್, ಗಂಗಾಧರನಾಯ್ಕ, 14ನೇ ವಾರ್ಡ್ ಅಭ್ಯರ್ಥಿ ವೇಣು, ಎನ್.ಎಚ್. ಹಾಲೇಶ್, ಯಲ್ಲೇಶ್, ಶಾಂತಕುಮಾರ, ಕಂಚಿಕೆರೆ ರುದ್ರೇಶ್, ಶಿವರಾಜ್, ಚಂದ್ರು, ನಾಗರಾಜ್ ಇದ್ದರು.