Advertisement
ನಗರದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ವಿಶ್ವ ವಿದ್ಯಾಲಯಗಳ ಪದವಿ ಮತ್ತು ಬಿ.ಇಡಿ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಕಾಲ ಆಯೋಜಿಸಿದ್ದ ಕನ್ನಡ ವಿಜ್ಞಾನ ಉಪನ್ಯಾಸ ಸ್ಪರ್ಧೆಯ ಸಮಾರೋಪದಲ್ಲಿ ಮಾತನಾಡಿದ ಅವರು, ಮಕ್ಕಳು ಯಾವುದೇ ವಿಷಯವನ್ನು ಪರೀಕ್ಷೆಗಾಗಿ ಅಧ್ಯಯನ ಮಾಡುವುದು ಒಳ್ಳೆಯದಲ್ಲ. ಅಧ್ಯಯನ ಆಳಕ್ಕಿಳಿಯಬೇಕು. ಒಮ್ಮೆ ಓದಿದ ವಿಷಯ ಶಾಶ್ವತವಾಗಿ ನಮ್ಮಲ್ಲಿ ಉಳಿಯಬೇಕು. ಆ ರೀತಿ ನಮ್ಮ ಅಧ್ಯಯನಇರಬೇಕು ಎಂದು ತಿಳಿಸಿದರು.
Related Articles
Advertisement
ಇದನ್ನೂಓದಿ:·ಮನುಷ್ಯನ ಬಾಲಿಶ ಮನಸ್ಸು
ಅಧ್ಯಕ್ಷತೆ ವಹಿಸಿದ್ದ ಕರಾವಿಪ ಸದಸ್ಯ ಹುಲಿಕಲ್ ನಟರಾಜ್ ಮಾತನಾಡಿ, ಜೀವನದಲ್ಲಿ ಎಂದೂ ಅಧೀರರಾಗಬೇಡಿ, ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಿ, ಮೂಢನಂಬಿಕೆಗಳ ದಾಸರಾಗಬೇಡಿ ಎಂದು ಕಿವಿಮಾತು ಹೇಳಿದರು.
ರಾಜ್ಯ ಸಂಚಾಲಕ ಎಚ್.ಎಸ್.ಟಿ ಸ್ವಾಮಿ, ಗೌರವ ಕಾರ್ಯದರ್ಶಿ ಪ್ರೊ.ಸಿ.ಕೃಷ್ಣೇಗೌಡ, ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯರಾದ ಫ್ರಾನ್ಸಿಸ್ ಬೆಂಜಮಿನ್, ಮಂಜುನಾಥ್, ಲತೀಫ್, ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
ರಾಜ್ಯಮಟ್ಟದ ವಿಜ್ಞಾನ ವಿಷಯದ ಉಪನ್ಯಾಸ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ಭೌತ ವಿಜ್ಞಾನ: ಶುಭಶ್ರೀ ಎಸ್.ಶೆಣೈ (ಉಡುಪಿಯ ಪೂರ್ಣಪ್ರಜ್ಞ ಕಾಲೇಜು)- ಪ್ರಥಮ, ವಿ.ವಿಜಯಲಕ್ಷ್ಮೀ (ಹುಬ್ಬಳ್ಳಿಯ ಕೆಎಲ್‌ಇ ಶಿಕ್ಷಣ ಮಹಾವಿದ್ಯಾಲಯ)- ದ್ವಿತೀಯ ಸ್ಥಾನ ಗಳಿಸಿದರು. ರಸಾಯನ ವಿಜ್ಞಾನ: ಸೌಜನ್ಯ (ಉಡುಪಿಯ ಪೂರ್ಣಪ್ರಜ್ಞ ಕಾಲೇಜು)- ಪ್ರಥಮ, ಎಚ್.ಸಿ.ತೇಜಸ್ವಿನಿ (ತುಮಕೂರಿನ ಯುನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್)- ದ್ವಿತೀಯ ಸ್ಥಾನ ಪಡೆದರು. ಜೀವ ವಿಜ್ಞಾನ: ವೈ.ಪಿ.ಸೌಮ್ಯಾ (ದಾವಣಗೆರೆಯ ಎಂ.ಎಂ.ಶಿಕ್ಷಣ ಮಹಾವಿದ್ಯಾಲಯ)- ಪ್ರಥಮ, ಕೀರ್ತಿ ಗೋಖಲೆ (ಕಾರ್ಕಳದ ಭುವನೇಂದ್ರ ಕಾಲೇಜು)- ದ್ವಿತೀಯ ಸ್ಥಾನ ಗಳಿಸಿದರು. ಗಣಿತ: ಡಿ.ಎಲ್.ಕಾವ್ಯಾ (ಶಿವಮೊಗ್ಗದ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜು)- ಪ್ರಥಮ,ತೇಜಸ್ವಿನಿ ಹೆಗಡೆ (ಕುಮಟಾದ ಕಮಲಾ ಬಾಳಿಗಾ ಮಹಾವಿದ್ಯಾಲಯ)- ದ್ವಿತೀಯ ಸ್ಥಾನ ಪಡೆದರು.
ಇದನ್ನೂಓದಿ:ಸರಕಾರದ ಕೆಲಸಗಳನ್ನು ಜನರಿಗೆ ಮುಟ್ಟಿಸುವುದು ‘ಡೊಡ್ಡ ಟಾಸ್ಕ್’: ಡಿಸಿಎಂ ಅಶ್ವತ್ಥನಾರಾಯಣ