ದಾವಣಗೆರೆ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯೇ ಮುಂದೆಯೇ ಇಬ್ಬರು ಯುವತಿಯರ ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದವರನ್ನು ಬಂಧಿಸಲಾಗಿದೆ.
ಮುಂಬಯಿ ಮೂಲದ ಇಬ್ಬರು ಯುವತಿಯರು ಇವೆಂಟ್ ಮ್ಯಾನೇಜ್ಮೆಂಟ್ ಗಾಗಿ ಶಿಕಾರಿಪುರ ಮೂಲದ ವಕೀಲರಾದ ಮಂಜುನಾಥ, ಹರ್ಷ ಎಂಬುವರು ದಾವಣಗೆರೆಗೆ ಕರೆಸಿದ್ದರು.
ಯುವತಿಯರಿಗೆ ಹಣ ಕೊಡದ ಹಿನ್ನೆಲೆಯಲ್ಲಿ ಕುಡಿದ ಮತ್ತಿನಲ್ಲಿದ್ದ ಯುವತಿಯರು ಠಾಣೆ ಬಳಿ ಮಂಜುನಾಥ, ಹರ್ಷ ಜತೆ ತಡರಾತ್ರಿ ಜಗಳವಾಡಿದ್ದಾರೆ. ಈ ವೇಳೆ ಜಗಳ ನಿಲ್ಲಿಸಲು ಹೋದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದರಿಂದ ಪೊಲೀಸ್ ಪೇದೆಗೆ ಗಾಯಗಳಾಗಿವೆ. ಪ್ರಕರಣ ಸಂಬಂಧ ಇಬ್ಬರು ಯುವತಿಯರು ಹಾಗೂ ಮಂಜುನಾಥ ಮತ್ತು ಹರ್ಷ ಎಂಬುವರನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.