Advertisement

Davanagere; ಅಲ್ಯೂಮಿನಿಯಂ ವೈರ್ ಕಳ್ಳ 23 ವರ್ಷಗಳ ನಂತರ ಮತ್ತೆ ಬಂಧನ

11:18 PM Jun 24, 2024 | Team Udayavani |

ದಾವಣಗೆರೆ: ವಿದ್ಯುತ್ ಕಂಬದಲ್ಲಿನ 45 ಸಾವಿರ ರೂಪಾಯಿ ಮೌಲ್ಯದ ಅಲ್ಯೂಮಿನಿಯಂ ವೈರ್ ಕದ್ದಿದ್ದವನನ್ನು 23 ವರ್ಷಗಳ ನಂತರ ಮತ್ತೆ ಬಂಧಿಸುವಲ್ಲಿ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

2001 ರ ಆ. 14 ರಂದು ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ 23 ವರ್ಷಗಳ ನಂತದ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಾಂತಿನಗರ ನಿವಾಸಿ ಎಸ್.ಬಿ. ಪ್ರದೀಪ್ ಎಂಬುವನನ್ನು ಬಂಧಿಸಲಾಗಿದೆ.

ಹರಿಹರ ತಾಲೂಕಿನ ಮಾಜೇನಹಳ್ಳಿ ಬಳಿ ಜಮೀನಿನಲ್ಲಿ ಹಾದು ಹೋಗಿರುವ ವಿದ್ಯುತ್ ಕಂಬದಲ್ಲಿದ್ದ 45 ಸಾವಿರ ರೂಪಾಯಿ ಬೆಲೆಯ 60 ಕೆಜಿ ಅಲ್ಯೂಮಿನಿಯಂ ವೈರ್ ಕಳ್ಳತನದ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಂತಿನಗರ ನಿವಾಸಿ ಎಸ್.ಬಿ. ಪ್ರದೀಪ್‌ನನ್ನು ಬಂಧಿಸಲಾಗಿತ್ತು. ಜಾಮೀನು ಮೇಲೆ ಹೊರ ಬಂದ ನಂತರ ಪ್ರದೀಪ್ ನ್ಯಾಯಾಲಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು. ಜಿಲ್ಲಾ ರಕ್ಷಣಾಽಕಾರಿ ಉಮಾ ಪ್ರಶಾಂತ್ ಸೂಚನೆ ಆರೋಪಿ ಪತ್ತೆಗಾಗಿ ರಚಿಸಲಾಗಿದ್ದ ದಾವಣಗೆರೆ ಗ್ರಾಮಾಂತ ಡಿವೈಎಸ್ಪಿ ಬಿ.ಎಸ್. ಬಸವರಾಜ್, ಹರಿಹರ ವೃತ್ತ ನಿರೀಕ್ಷಕ ಸುರೇಶ್ ಸಗರಿ, ಪಿಎಸ್‌ಐ ಮಂಜುನಾಥ ಕುಪ್ಪೇಲೂರು ನೇತೃತ್ವದಲ್ಲಿನ ತಂಡ 23 ವರ್ಷಗಳ ವರೆಗೆ ತಲೆಮರೆಸಿಕೊಂಡಿದ್ದವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

250 ರೂ ರೇಡಿಯೋ ಕಳವು ಮಾಡಿದ್ದ ಆರೋಪಿ ಸಾವು; ಪ್ರಕರಣ ಮುಕ್ತಾಯ

Advertisement

ದಾವಣಗೆರೆ: ಮನೆಯಲ್ಲಿದ್ದ ಟ್ರಾನ್ಸಿಸ್ಟರ್ ರೇಡಿಯೋ ಕಳವು ಮಾಡಿದ್ದ ಆರೋಪಿಯ ನಿಧನದ ಹಿನ್ನೆಲೆಯಲ್ಲಿ 38 ವರ್ಷಗಳ ನಂತರ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಮುಕ್ತಾಯಗೊಳಿಸ ಲಾಗಿದೆ.

ಹರಿಹರ ತಾಲೂಕಿನ ಶಂಷೀಪುರ ಗ್ರಾಮದ ಗುರುಸಿದಪ್ಪ ಎನ್ನುವವರ ಮನೆಯಲ್ಲಿ1986 ರ ಆ.13 ರಂದು ಮನೆ ಯ ಹಿಂದಿನ ಬಾಗಿಲು ಒಡೆದು ಒಳಗೆ ಬಂದು ರೇಡಿಯೋ ಸ್ಟಾಂಡಿನಲ್ಲಿಟ್ಟಿದ್ದ ವಿನೋ ಕಾರ್ಟಿಕ್ ಹೆಸರಿನ 250 ರೂಪಾಯಿ ಬೆಲೆಯ ಟ್ರಾನ್ಸಿಸ್ಟರ್ ರೇಡಿಯೋ ಕಳ್ಳತನ ಮಾಡಲಾಗಿತ್ತು. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹರಪನಹಳ್ಳಿ ತಾಲೂಕಿನ ಮಾಚೇನ ಹಳ್ಳಿ ಗ್ರಾಮದ ಹುಲುಗ ಅಲಿಯಾಸ್ ಬಾಬಯ್ಯ ಎಂಬುವನನ್ನು ಬಂಽಸಿದ್ದರು. ಆದರೆ, ಪ್ರಮುಖ ಆರೋಪಿ ಲಕ್ಕ ಅಲಿ ಯಾಸ್ ಮ್ಯಾಂಡ್ರಿಗುತ್ತಿ ಲಕ್ಕಪ್ಪ ತಲೆಮರೆಸಿಕೊಂಡಿದ್ದನು.

ಪ್ರಮುಖ ಆರೋಪಿ ಲಕ್ಕ ಅಲಿ ಯಾಸ್ ಮ್ಯಾಂಡ್ರಿಗುತ್ತಿ ಲಕ್ಕಪ್ಪನ ಪತ್ತೆಗಾಗಿ ರಚಿಸಿದ್ದ ಅಧಿಕಾರಿಗಳ ತಂಡ ಮನೆಗೆ ತೆರಳಿದ್ದಾಗ ಆತ 2008ರಲ್ಲೇ ಮೃತಪಟ್ಟಿದ್ದು ಗೊತ್ತಾಗಿದೆ. ಹರಪನಹಳ್ಳಿ ತಾಲೂಕು ಕಚೇರಿಯಲ್ಲಿ ಆತನ ಮರಣ ಪ್ರಮಾಣ ಪತ್ರವನ್ನು ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿ,38 ವರ್ಷಗಳ ಹಿಂದಿನ ಪ್ರಕರಣವನ್ನು ಮುಕ್ತಾಯ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next