Advertisement

ಫಲಾನುಭವಿಗಳಿಗೆ ಸವಲತ್ತು ವಿತರಣೆ

03:31 PM Feb 07, 2021 | Team Udayavani |

ದಾವಣಗೆರೆ: ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಡಿಯಲ್ಲಿ ರಾಜ್ಯ ಸರ್ಕಾರದಿಂದ ನೀಡಿರುವ ಸಹಾಯ ಧನವನ್ನು ಸದ್ಭಳಕೆ ಮಾಡಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂದ ಬರಬೇಕು ಎಂದು ರಾಯಭಾಗ ಶಾಸಕ ಹಾಗೂ ನಿಗಮದ ಅಧ್ಯಕ್ಷ ದುರ್ಯೋಧನ ಎಂ. ಐಹೊಳೆ ಕರೆ ನೀಡಿದರು.
ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗೆ ಶನಿವಾರ ಭೇಟಿ ನೀಡಿದ್ದ ಅವರು, ನಿಗಮದ ವಿವಿಧ ಯೋಜನೆಗಳಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದರು.

Advertisement

ಮಾಯಕೊಂಡ ಕ್ಷೇತ್ರದ ಶಾಸಕ ಹಾಗೂ ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರೊ| ಲಿಂಗಣ್ಣ ಮಾತನಾಡಿ,
ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಎರಡೂ ಒಂದೇ. ಇಬ್ಬರೂ ಅಣ್ಣ-ತಮ್ಮಂದಿರಿದ್ದಂತೆ. ಜೊತೆಯಾಗಿ ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ಸರ್ಕಾರ ನಮ್ಮ ನಿಗಮಕ್ಕೆ ಸಾಕಷ್ಟು ಸೌಲಭ್ಯ ಕೊಟ್ಟಿದೆ. ಎರಡು ಸಮಾಜಕ್ಕೆ ಬರುವಂತಹ
ಸವಲತ್ತುಗಳನ್ನು ನಿಷ್ಪಕ್ಷಪಾತವಾಗಿ ಜನರಿಗೆ ಒದಗಿಸಲಾಗುತ್ತಿದೆ ಎಂದರು.

ಡಾ| ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪಿ. ರಮೇಶ್‌ ಮಾತನಾಡಿ, ಸರ್ಕಾರದ ವತಿಯಿಂದ ನಿಗಮಕ್ಕೆ ಒಟ್ಟು 1.5 ಕೋಟಿ ರೂ. ಅನುದಾನ ಬಂದಿದ್ದು, ಶೇ.80 ರಷ್ಟು ಅನುದಾನವನ್ನು ಈಗಾಗಲೇ ವಿನಿಯೋಗಿಸಿದ್ದೇವೆ. ಸಮೃದ್ಧಿ ಯೋಜನೆಯಡಿ 12 ಫಲಾನುಭವಿಗಳಿಗೆ 1.2 ಕೋಟಿ ರೂ. ಹಾಗೂ ಐಎಸ್‌ಬಿ ಯೋಜನೆಗೆ 82 ಲಕ್ಷ ರೂ.ಅನುದಾನ ಬಂದಿದೆ. 2018-19 ರಲ್ಲಿ ಗಂಗಾ
ಕಲ್ಯಾಣದಡಿ ಕೊಳವೆಬಾವಿ ಕೊರೆಯಲು 105 ಜನರನ್ನು ಕೇಂದ್ರೀಕರಿಸಿ ಒಬ್ಬ ರೈತನಿಗೆ 3.5 ಲಕ್ಷ ರೂ. ಅನುದಾನ ನೀಡಲಾಗಿತ್ತು. ಅದರಲ್ಲಿ 96 ಜನರಿಗೆ ಕೊಳವೆಬಾವಿ ಕೊರೆಸುವ ಮೂಲಕ ಸೌಲಭ್ಯ ಒದಗಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಿಗಮದ ಡಿಜಿಎಂ ಮಂಜುನಾಥ್‌, ಸಫಾಯಿ ಕರ್ಮಚಾರಿ ಅಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಹುಲಿಗೇಶ್‌, ಇತರೆ ಪದಾಧಿಕಾರಿಗಳು, ನಿಗಮದ ಸದಸ್ಯರು ಇದ್ದರು.

ಓದಿ : ಹೆದ್ದಾರಿ ಬಂದ್‌ ಒಂದೆರಡು ಗಂಟೆಗೆ ಸೀಮಿತ

Advertisement
Advertisement

Udayavani is now on Telegram. Click here to join our channel and stay updated with the latest news.

Next