Advertisement

ಪ್ರಾಧ್ಯಾಪಕರ ವರ್ಗಾವಣೆ ಖಂಡಿಸಿ ಪ್ರತಿಭಟನೆ

03:41 PM Feb 06, 2021 | Team Udayavani |

ಚನ್ನಗಿರಿ: ಸಹಾಯಕ ಪ್ರಾಧ್ಯಾಪಕ·ರೊಬ್ಬರನ್ನು ಉದ್ದೇಶ ಪೂರ್ವಕವಾಗಿದಿಢೀರ್‌ ಬೇರೆಡೆ ನಿಯೋಜನೆಗೊಳಿಸಿವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆಅಡ್ಡಿಪಡಿಸಲಾಗುತ್ತಿದೆ ಎಂದುಆರೋಪಿಸಿ ತಾಲೂಕು ಎನ್‌ಎಸ್‌ಯುಐ ಕಾರ್ಯಕರ್ತರು ಹಾಗೂವಿದ್ಯಾರ್ಥಿಗಳು ಶುಕ್ರವಾರಪ್ರತಿಭಟನೆನಡೆಸಿದರು.ಶಿವಲಿಂಗೇಶ್ವರ ಪ್ರಥಮ ದರ್ಜೆಕಾಲೇಜಿನ ಅರ್ಥಶಾಸ್ತ್ರ ವಿಭಾಗದಸಹಾಯಕ ಪ್ರಾಧ್ಯಾಪಕ ಬಿ.ಎನ್‌.ಹರೀಶ್‌, ಅವರು ಕಾಲೇಜಿನಲ್ಲಿಒಬ್ಬ ಉನ್ನತ ಪ್ರಾಧ್ಯಾಪಕರಾಗಿದ್ದಾರೆ.ಸದಾ ವಿದ್ಯಾರ್ಥಿಗಳೊಂದಿಗೆಸ್ನೇಹದಿಂದ ಇರುವಂತಹವರು. ಸದ್ಯಅವರನ್ನು ಉದ್ದೇಶ ಪೂರ್ವಕವಾಗಿಬೇರೆಡೆ ನಿಯೋಜನೆಗೊಳಿಸುವಮೂಲಕ ಅಧಿ ಕಾರವನ್ನು ದುರ್ಬಳಕೆಮಾಡಿಕೊಳ್ಳುತ್ತಿದ್ದಾರೆ. ಪ್ರಾಧ್ಯಾಪಕಹರೀಶ್‌ರವರು ಶೈಕ್ಷಣಿವಾಗಿಕಾಲೇಜು ಅಭಿವೃದ್ಧಿಯಲ್ಲಿ ಸಾಕಷ್ಟುಶ್ರಮಿಸಿದ್ದಾರೆ. ಅವರ ವ್ಯಕ್ತಿತ್ವ ಸಹಿಸದೇನಿಯೋಜನೆಗೊಳಿಸಿರುವುದು ಎಷ್ಟರಮಟ್ಟಿಗೆ ಸರಿಯಿದೆ. ಶಿಕ್ಷಣ ಗುಣಮಟ್ಟವನ್ನು ಕಾಯ್ದಿರಿಸಲು ಅವರನಿಯೋಜನೆ ತಕ್ಷಣ ಕೈ ಬಿಡಬೇಕುಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

Advertisement

ತಾಲೂಕು ಎನ್‌ಎಸ್‌ಯುಐವಿದ್ಯಾರ್ಥಿ ಘಟಕದ ಅಧ್ಯಕ್ಷ ರುದ್ರೇಶ್‌ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿರಾಜಕಾರಣ ಪ್ರವೇಶ ಆಗಬಾರದು.ಅದರೆ ಚನ್ನಗಿರಿ ಶಿವಲಿಂಗೇಶ್ವರ್‌ ಪ್ರಥಮದರ್ಜೆ ಕಾಲೇಜಿನಲ್ಲಿ ರಾಜಕೀಯವಿಪರೀತವಾಗಿ ನಡೆಯುತ್ತಿದೆ.ಉಪನ್ಯಾಸಕರು ಮತ್ತು ಪ್ರಾಂಶುಪಾಲರ
ಅಂತರಿಕ ಜಗಳಕ್ಕೆ ಈಗಾಗಲೇರಾಜಕೀಯ ಒತ್ತಡವನ್ನು ತಂದುಹಿರಿಯ ಪ್ರಾಧ್ಯಾಪಕರಾದ ಆನಂದ್‌ಅವರನ್ನು ಉದ್ದೇಶ ಪೂರ್ವಕವಾಗಿವರ್ಗಾವಣೆ ಮಾಡಿದ್ದಾರೆ. ಈಗಇನ್ನೊಬ್ಬ ಪ್ರಾಧ್ಯಾಪಕ ಬಿ.ಎನ್‌.ಹರೀಶ್‌ ಅವರನ್ನು ವರ್ಗಾವಣೆಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಭವಿಷ್ಯ ಹಾಳಾಗುತ್ತದೆ. ಆದ್ದರಿಂದಸಂಬಂಧಪಟ್ಟ ಪ್ರಾಧ್ಯಾಪಕರನ್ನುನಿಯೋಜನೆ ವರ್ಗಾವಣೆ ತಡೆದು ನಮ್ಮಕಾಲೇಜಿನಲ್ಲಿಯೇ ಉಳಿಯುವಂತೆಮಾಡಬೇಕು ಎಂದು ಆಗ್ರಹಿಸಿದರು.ಶಿವಲಿಂಗೇಶ್ವರ ಪ್ರಥಮ ದರ್ಜೆಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆನಡೆಸಿ ನಂತರ ತಹಶೀಲ್ದಾರ್‌ಗೆ ಮನವಿಸಲ್ಲಿಸಿದರು.

ಪ್ರಜ್ವಲ್‌ ಜೆ.ಸಿ, ಶ್ವೇತಾ,ಎಚ್‌. ಬಸವರಾಜು, ಸಿ. ಚೇತನ್‌ಹಾಗೂ ಹಲವಾರು ವಿದ್ಯಾರ್ಥಿಗಳುಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಓದಿ :  ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸದಿದ್ದರೆ ಬಿಲ್ಲವರಾದ ನಾವು ‘ತಾಂಟಲು’ ಸಿದ್ದ: ಪ್ರತಿಭಾ ಕುಳಾಯಿ

Advertisement

Udayavani is now on Telegram. Click here to join our channel and stay updated with the latest news.

Next