ಚಿತ್ರದುರ್ಗ: ಮುರುಘಾಮಠದ ಅನುಭವ·ಮಂಟಪದಲ್ಲಿ ಬಸವೇಶ್ವರ ವೈದ್ಯಕೀ·ಮಹಾವಿದ್ಯಾಲಯದ 2015-16ನೇಬ್ಯಾಚ್ ಘಟಿಕೋತ್ಸವ ನಡೆಯಿತು. ಈವೇಳೆ 97 ಸ್ನಾತಕ ವಿದ್ಯಾರ್ಥಿಗಳಿಗೆ ಮತ್ತು6 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ
ಪ್ರದಾನ ಮಾಡಲಾಯಿತು.
ಈ ವೇಳೆ ಬೆಂಗಳೂರು ವೈದ್ಯಕೀಯಮಹಾವಿದ್ಯಾಲಯದ ಡೀನ್ ಡಾ| ಸಿ.ಆರ್.ಜಯಂತಿ ಮಾತನಾಡಿ, ಭಾರತ ಇಂದುಅತ್ಯಂತ ಅಪಾಯದ ಸ್ಥಿತಿಯಲ್ಲಿದೆ. ಕೊರೊನಾಕೂಡ ಆರ್ಥಿಕತೆಯ ಮೇಲೆ ಹೆಚ್ಚಿನಪರಿಣಾಮ ಬೀರಿದೆ. ವೈದ್ಯರಾದ ನಾವುಗಳುಸಂಕಷ್ಟದಲ್ಲಿರುವವರಿಗೆ ಹೆಗಲುಕೊಡಬೇಕುಎಂದರು.
ದೇಶ ಅನೇಕ ಸಾಂಕ್ರಾಮಿಕ ರೋಗಗಳಿಂದನಲುಗುತ್ತಿದ್ದರೂ ಅದನ್ನು ಎದುರಿಸಲು ಭಾರತಸನ್ನದ್ಧವಾಗಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡಇಂದು ಸಾಮಾನ್ಯ ಕಾಯಿಲೆಗಳಾಗಿವೆ.ಕ್ಯಾನ್ಸರ್ ಕೂಡ ದೊಡ್ಡ ವ್ಯಾ ದಿಯಾಗಿಪರಿಣಮಿಸುತ್ತಿದೆ. ಈಗ ತಾನೇ ವೈದ್ಯ ಪದವಿಮುಗಿಸಿ ಹೊರ ಬಂದಿರುವ ನೀವುಗಳುಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದನಿಭಾಯಿಸಬೇಕು. ನಿರಂತರವಾಗಿಕಲಿಯುತ್ತಾ,ವೈದ್ಯ ವೃತ್ತಿಗೆ ಎಂದೂ ಧಕ್ಕೆಬಾರದಂತೆ ನಡೆದುಕೊಳ್ಳಬೇಕು ಎಂದುಸಲಹೆ ನೀಡಿದರು.
ಇಂದು ಅನೇಕ ವೈದ್ಯರು ರೋಗಿಗಳನ್ನುಸರಿಯಾಗಿ ನೋಡುತ್ತಿಲ್ಲ. ಅವರಸಮಸ್ಯೆಗಳನ್ನು ಸಮಾಧಾನವಾಗಿಕೇಳುತ್ತಿಲ್ಲ. ಅವರ ರೋಗವನ್ನು ಸಹಪತ್ತೆ ಹಚ್ಚಲು ಸೋಲುತ್ತಿದ್ದೇವೆ. ನಮಗೆಏಕಾಗ್ರತೆಯ ಕೊರತೆ ಕಾಡುತ್ತಿದೆ.ಇದರಿಂದ ವೈದ್ಯರಾದ ನಾವುಗಳು ಹೊರಬರಬೇಕು. ಕೆಲವು ಆಸ್ಪತ್ರೆಗಳು ಸುಮ್ಮನೆಅನೇಕ ಪರೀಕ್ಷೆಗಳನ್ನು ಮಾಡುತ್ತಾರೆ. ಇದುಹಣದ ದುರಾಸೆಯನ್ನು ತೋರಿಸುತ್ತದೆಎಂದು ಹೇಳಿದರು.
ನಿಮ್ಹಾನ್ಸ್‌ನ ನೋಡೆಲ್ ಅ ಧಿಕಾರಿ ಡಾ| ವಿ.ರವಿ ಮಾತನಾಡಿ, ವೈದ್ಯರಿಗೆ ರೋಗಿಗಳನ್ನುಪ್ರೀತಿಯಿಂದ ಕೇಳುವ ಗುಣ ಇರಬೇಕು.ನೀವು ರೋಗಿಗಳನ್ನು ಮಾತನಾಡಿಸುವರೀತಿಯಲ್ಲಿ ರೋಗಿಗೆ ನಿಮ್ಮ ಮೇಲೆ ಭರವಸೆಮೂಡಬೇಕು. ನಾವು ಇತರರಿಗೆ ಗೌರವಕೊಡುವುದನ್ನು ಕಲಿಯಬೇಕು. ದೇವರುರೋಗ ಕೊಡುವುದಿಲ್ಲ. ಅದು ಮಾನವನಿರ್ಮಿತವಾದುದು. ವೈದ್ಯರಿಗೆ ಸಿಕ್ಕಿರುವಅವಕಾಶವನ್ನು ಕಳೆದುಕೊಳ್ಳಬಾರದು. ನಾವುರೋಗಿಗಳು ಇರುವುದರಿಂದ ಇ¨ªೇವೆ.ಹಾಗಾಗಿ ರೋಗಿಯನ್ನು ಮರೆಯಬಾರದುಎಂದು ಹೇಳಿದರು.
ಡಾ. ಶಿವಮೂರ್ತಿ ಮುರುಘಾಶರಣರು ಸಾನ್ನಿಧ್ಯ ವಹಿಸಿದ್ದರು. ಎಸ್‌ಜೆಎಂವಿದ್ಯಾಪೀಠದ ಆಡಳಿತ ಮಂಡಳಿಯ ಪಟೇಲ್‌ಶಿವಕುಮಾರ್, ನಾನಾಗೌಡ ಪಾಟೀಲ್,ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದಡೀನ್ ಡಾ|ಜಿ.ಪ್ರಶಾಂತ್, ಮೆಡಿಕಲ್‌ಸೂಪರಿಂಟೆಂಡೆಂಟ್ ಡಾ|ಎಲ್.ಪಾಲಾಕ್ಷಯ್ಯ, ಡಾ| ಎಂ.ಎಸ್. ರಾಜೇಶ್, ಡಾ|ಸಿ. ನಾರಾಯಣಮೂರ್ತಿ ಉಪಸ್ಥಿತರಿದ್ದರು.
ಓದಿ :
ವಿಮಾನ ನಿಲ್ದಾಣ ನಿರ್ಮಾಣ; ದಶಕದ ವಿಘ್ನ ನಿವಾರಣೆ