ಜಗಳೂರು: ತಾಲೂಕಿನ ಚಿಕ್ಕಮಲ್ಲನ ಹೊಳೆ ಗೊಲ್ಲರಹಟ್ಟಿ, ಮರೇನಹಳ್ಳಿ, ಅಣಬೂರು, ದಾವಣಗೆರೆ ರಸ್ತೆಯ ಕೋರ್ಟ್ ಹಿಂಭಾಗ ಸೇರಿದಂತೆ ತಾಲೂಕಿನ ಹಲವೆಡೆ ಚಿರತೆ ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿ ಕಾರಿಗಳು ಚಿರತೆ ಸೆರೆ ಹಿಡಿಯಲು ಬೋನ್ ಇಟ್ಟಿದ್ದಾರೆ.
ಈ ವೇಳೆ ಪ್ರಾದೇಶಿಕ ವಲಯ ಅರಣ್ಯಾ ಧಿಕಾರಿ ಪ್ರಕಾಶ್ ಮಾತನಾಡಿ, ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳ ಜತೆಗೆ ಕಾರ್ಯಾಚರಣೆ
ಆರಂಭವಾಗಿದೆ.
ಮೂರು ದಿನಗಳಿಂದ ಬೋನ್‌ನ್ನು ಚಿಕ್ಕಮಲ್ಲನ ಹೊಳೆ ಗ್ರಾಮದ ಸಮೀಪ ಇಡಲಾಗಿದ್ದು, ನಾಯಿಯನ್ನು ಬೋನ್ ಒಳಗಡೆ ಬಿಡಲಾಗಿದೆ. ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಅಧಿ ಕಾರಿಗಳಾದ ಶ್ವೇತಾ, ಕಿರಣ್ ನಿಸಾರ್ ಅಹಮ್ಮದ್, ಚೇತನ್, ಅಂಜಿನಪ್ಪ, ನಾಗರಾಜ್ ಮುರುಡಿಸ್ವಾಮಿ, ರಾಜಣ್ಣ, ಪ್ರದೀಪ್ ಸೇರಿದಂತೆ ಇದ್ದರು.
ಓದಿ :
ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸದಿದ್ದರೆ ಬಿಲ್ಲವರಾದ ನಾವು ‘ತಾಂಟಲು’ ಸಿದ್ದ: ಪ್ರತಿಭಾ ಕುಳಾಯಿ