Advertisement

ತಾಪಂ ಸದಸ್ಯರ ಸಾಮೂಹಿಕ ಗೈರು: ಸಭೆ ಮುಂದೂಡಿದ ಅಧ್ಯಕ್ಷೆ

02:45 PM Feb 06, 2021 | Team Udayavani |

ಜಗಳೂರು: ತಾಲೂಕು ಮಟ್ಟದ·ಅಧಿಕಾರಿಗಳು ಸಭೆಗೆ ಸಮರ್ಪಕ ಮಾಹಿತಿಒದಗಿಸುತ್ತಿಲ್ಲ. ಅನುಪಾಲನ ವರದಿಮಂಡಿಸುತ್ತಿಲ್ಲ ಎಂದು ಅಸಮಾಧಾನಗೊಂಡ ತಾಪಂ ಸದಸ್ಯರು ಸಾಮೂಹಿಕವಾಗಿಗೈರು ಹಾಜರಾಗುವುದರ ಮೂಲಕ ಸಭೆಬಹಿಷ್ಕರಿಸಿದ ಘಟನೆ ತಾಪಂ ಸಭಾಂಗಣದಲ್ಲಿಜರುಗಿತು.

Advertisement

ಪಟ್ಟಣದ ತಾಪಂ ಸಭಾಂಗಣದಲ್ಲಿತಾಲೂಕು ಪಂಚಾಯಿತಿ ಅಧ್ಯಕ್ಷೆ ಮಂಜುಳಾಅಧ್ಯಕ್ಷತೆಯಲ್ಲಿ ಸಭೆ ಪ್ರಾರಂಭವಾದಾಗಸಭೆಗೆ ಬೆರಳಣಿಕೆಯಷ್ಟು ತಾಲೂಕು ಮಟ್ಟದಅ ಧಿಕಾರಿಗಳು ಮಾತ್ರ ಹಾಜರಿದ್ದರು. ಇಒಮತ್ತು ಅಧ್ಯಕ್ಷರು, ಸದಸ್ಯರಿಗಾಗಿ ಸುಮಾರುಒಂದೂವರೆ ತಾಸು ಕಾಯ್ದರು ಸಹ ಒಬ್ಬಸದಸ್ಯರು ಸಭೆಯ ಹತ್ತಿರ ಸುಳಿಯಲಿಲ್ಲ.ಆದರೆ ಅಧ್ಯಕ್ಷೆ ಮಂಜುಳಾ ಅವರಸಂಧಾನದ ನಂತರ ಸಭಗೆ ಸದಸ್ಯರು ಸಭೆಗೆಆಗಮಿಸಿದರು.
ಸದಸ್ಯ ಮಾರೇನಹಳ್ಳಿ ಬಸವರಾಜ್‌ಮಾತನಾಡಿ, ಹಿಂದಿನ ಸಭೆಯಲ್ಲಿಚರ್ಚಿತ ಸಮಸ್ಯೆಗಳನ್ನು ಅ ಧಿಕಾರಿಗಳುಬಗೆಹರಿಸದೇ ಸಭೆಗೆ ಹಾಜರಾಗುತ್ತಾರೆ.ಕಳೆದ 5 ವರ್ಷಗಳಿಂದ ಇದೇ ಸಮಸ್ಯೆಇದೆ. ಗ್ರಾಮೀಣ ಪ್ರದೇಶಗಳಲ್ಲಿ ಹಲವಾರುಸಮಸ್ಯೆಗಳಿದ್ದು, ಮತ ನೀಡಿದಂತಹ ಜನರುಸಮಸ್ಯೆಗಳ ಬಗ್ಗೆ ನಮ್ಮನ್ನು ಕೇಳುತ್ತಾರೆ.ಆದರೆ ಅ ಧಿಕಾರಿಗಳು ಕೆಲಸ ಮಾಡುವುದಿಲ್ಲಎಂದು ದೂರಿದರು.

ಸದಸ್ಯ ಶಂಕರ್‌ ನಾಯ್ಕ ಮಾತನಾಡಿ,ಪಿಡಿಒಗಳೂ 15 ನೇ ಹಣಕಾಸು ಯೋಜನೆದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಆದರೆಗ್ರಾಮೀಣ ಪ್ರದೇಶಗಳಲ್ಲಿ ಚರಂಡಿಗಳುಗಬ್ಬು ನಾರುತ್ತಿವೆ ಎಂದರು.ಅಧ್ಯಕ್ಷೆ ಮಂಜುಳಾ ಮಾತನಾಡಿ,ಕಳೆದ 5 ವರ್ಷಗಳಿಂದ ಅಧಿ ಕಾರಿಗಳೂಅನುಪಾಲನ ವರದಿ ನೀಡುತ್ತಿಲ್ಲ. ಸದಸ್ಯರಸಮಸ್ಯೆ ಆಲಿಸುತ್ತಿಲ್ಲ. ಹಾಗಾಗಿ ಸಭೆಯನ್ನುಮುಂದೂಡಲಾಗುವುದು ಎಂದು ಸಭೆಮುಂದೂಡಿದರು.

ಇಒ ಮಲ್ಲಾ ನಾಯ್ಕ ಮಾತನಾಡಿ,ಮುಂದಿನ ಸಭೆಗೆ ತಪ್ಪದೇ ಅಧಿ ಕಾರಿಗಳುಅನುಪಾಲನಾ ವರದಿ ತರಬೇಕು ಎಂದು
ಸೂಚಿಸಿದರು. ತಾಪಂ ಸ್ಥಾಯಿ ಸಮಿತಿಸಿದ್ದೇಶ್‌ ಸೇರಿದಂತೆ ತಾಲೂಕು ಮಟ್ಟದಅಧಿಕಾರಿಗಳು ಹಾಜರಿದ್ದರು.

ಓದಿ : ಕೃಷಿ ಸುಧಾರಣೆಯು ದೇಶಿಯ ನೀತಿಯಾಗಿದೆ : ಬ್ರಿಟಿಷ್ ಸರ್ಕಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next