Advertisement

ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಮೀಸಲು ರದ್ದುಪಡಿಸಿ

12:39 PM Feb 05, 2021 | Team Udayavani |

ದಾವಣಗೆರೆ: ದಾವಣಗೆರೆ ತಾಲೂಕಿನ ಗ್ರಾಮ ಪಂಚಾಯತ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗಿರುವ ಮೀಸಲಾತಿ ರದ್ದುಗೊಳಿಸಿ ಚುನಾವಣಾ ಆಯೋಗದ ಸೂಚನೆಯಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರ ನಾಯ್ಕ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Advertisement

ಜ. 28 ರಂದು ದಾವಣಗೆರೆ ತಾಲೂಕಿನ ಗ್ರಾಮ ಪಂಚಾಯತ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪಡಿಸಿರುವುದು ಸರಿ ಇಲ್ಲ. ಸಾಫ್ಟ್‌ವೇರ್‌ ಮೂಲಕವೇ ಮೀಸಲಾತಿ ನಿಗದಿಪಡಿಸಲಾಗಿದೆ. ನಮ್ಮ ಪ್ರಕಾರ ಸಾಫ್ಟ್‌ವೇರ್ ಎಲ್ಲಿಯೋ ನಿಯಂತ್ರಣ ಕಳೆದುಕೊಂಡಿರಬಹುದು.
ಕಾಣದ ಕೈಗಳು ಕೆಲಸ ಮಾಡಿರಬಹುದಾದ ಹಿನ್ನೆಲೆಯಲ್ಲಿ ನಿಗದಿತ ಮೀಸಲಾತಿ ರದ್ದುಗೊಳಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ಅಧಿನಿಯಮ 1993ರ ಪ್ರಕರಣ 44(2) ಆನುಸಾರ ಮತ್ತು ಚುನಾವಣಾ ಆಯೋಗದ ನಿಯಮದಂತೆ ಹಿಂದೆ ಇದ್ದಂತಹ ಮೀಸಲಾತಿ ಮತ್ತೆ ಬರುವಂತಿಲ್ಲ. ಆದರೆ, ಕೆಲವಾರು ಗ್ರಾಮ ಪಂಚಾಯತ್‌ಗಳಲ್ಲಿ ಹಿಂದೆ ಇದ್ದಂತಹ
ಮೀಸಲಾತಿಯೇ ಈಗಲೂ ನಿಗದಿಯಾಗಿದೆ. ಹಾಗಾಗಿ ನಿಗದಿಪಡಿಸಿರುವ ಮೀಸಲಾತಿ ರದ್ದುಪಡಿಸಬೇಕು ಎಂದು ಕೋರಿ ರಾಜ್ಯ ಚುನಾವಣಾ ಆಯೋಗಕ್ಕೆ ಫೆ. 1 ರಂದು ಮನವಿ ಸಲ್ಲಿಸಲಾಗಿತ್ತು. 2 ರಂದು ಚುನಾವಣಾ ಆಯೋಗ ಮೀಸಲಾತಿ ನಿಗದಿಪಡಿಸಲು ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾಡಳಿತದಿಂದ ವಿವರ ಕೇಳಿದೆ. ಜಿಲ್ಲಾಡಳಿತ ಈವರೆಗೆ ಆಯೋಗಕ್ಕೆ ವರದಿ ಸಲ್ಲಿಸಿಲ್ಲ ಎಂದರು.

1993ರಿಂದ ನೇರ್ಲಿಗೆ, ಬಸವನಾಳ, ಕಂದನಕೋವಿ, ಮುದಹದಡಿ, ಶಿರಮಗೊಂಡನಹಳ್ಳಿ ಗ್ರಾಮ ಪಂಚಾಯತ್‌ ನಲ್ಲಿ ಎಸ್ಟಿ ಮೀಸಲಾತಿ ಬಂದೇ ಇಲ್ಲ. ಕೊಡಗನೂರು, ಲೋಕಿಕೆರೆ, ಹೊನ್ನೂರು, ಹದಡಿ ಗ್ರಾಮ ಪಂಚಾಯತ್‌ ನಲ್ಲಿ ಎರಡೆರೆಡು ಬಾರಿ ಎಸ್‌ಟಿ ಮೀಸಲಾತಿ ಪುನರಾವರ್ತನೆ ಆಗಿವೆ. ನೇರ್ಲಿಗೆ ಒಳಗೊಂಡಂತೆ ಕೆಲವಾರು ಗ್ರಾಮ ಪಂಚಾಯತ್‌ನಲ್ಲಿ ಈ ಬಾರಿಯೂ ಸಾಮಾನ್ಯ ವರ್ಗದ
ಮೀಸಲಾತಿ ಮುಂದುವರೆದಿದೆ ಆಕ್ಷೇಪಿಸಿದರು. ದಾವಣಗೆರೆ ತಾಲೂಕಿನ ಗ್ರಾಮ ಪಂಚಾಯತ್‌ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ
ಪಡಿಸಿರುವುದರಲ್ಲಿ ಪಾರದರ್ಶಿಕತೆ ಇಲ್ಲ. ಸಾಮಾಜಿಕ ನ್ಯಾಯ ಒದಗಿಸಲಾಗಿಲ್ಲ. ಹಾಗಾಗಿ ಈಗ ನಿಗದಿ ಪಡಿಸಿರುವ                     ಮೀಸಲಾತಿ ರದ್ದುಪಡಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಡಳಿತ, ಚುನಾವಣಾ ಆಯೋಗದ ವಿರುದ್ಧ ನ್ಯಾಯಾಲಯದ ಮೊರೆ
ಹೋಗಲಾಗುವುದು ಎಂದು ಎಚ್ಚರಿಸಿದರು.

ಓದಿ : ಲಸಿಕಾ ಅಭಿಯಾನ ಯಶಸ್ವಿ ಗೊಳಿಸಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next