ಧರ್ಮದ ಅತ್ಯುತ್ತಮ ಗ್ರಂಥಗಳನ್ನು ಆಕರ ಗ್ರಂಥಗಳನ್ನಾಗಿ ಬಳಸಿಕೊಂಡು ಉತ್ತಮ ಪಾಂಡಿತ್ಯ, ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಡಾ| ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
Advertisement
ಇಲ್ಲಿನ ಹಿರೇಕಲ್ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಪ್ರಥಮ ಅ ಧಿವೇಶನ ಹಾಗೂ ವೀರಶೈವ ಶೋಡಷ ಸಂಸ್ಕಾರಗಳ ಬಗೆಗಿನ ವಿಚಾರಸಂಕಿರಣದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಧರ್ಮದ ಪಂಚಪೀಠಗಳು ಇರುವ ಹಾಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾ ಐದು ಶಾಖೆಗಳನ್ನು ತೆರೆಯಬೇಕು. ಬಳಿಕ ಜಿಲ್ಲಾ ಹಾಗೂ ತಾಲೂಕು ಘಟಕಗಳನ್ನು ರಚಿಸುವ ಮೂಲಕ ಸಂಘಟನೆಯನ್ನು ಶಕ್ತಿಶಾಲಿಯಾಗಿಸುವ
ಮಹತ್ವದ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲರೂ ಸಂಘಟಿತ ಹೋರಾಟ ನಡೆಸಬೇಕು ಎಂದರು. ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ನಮಗೆ ಮಾರ್ಗದರ್ಶನ ನೀಡುವ ಧರ್ಮಗುರುಗಳನ್ನು ನಾವು ಯಾವ ಭಾವನೆಯಿಂದ ನೋಡುತ್ತೇವೋ ಅದೇ ಭಾವನೆಯಿಂದ ಪುರೋಹಿತರು-ಅರ್ಚಕರನ್ನೂ ನೋಡುತ್ತೇವೆ. ನಮ್ಮ ಸಮಾಜದಲ್ಲಿನ ಎಲ್ಲಾ ಕಾರ್ಯಗಳಿಗೂ ಪುರೋಹಿತರು ಬೇಕು. ಇದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
Related Articles
Advertisement
ಹೊಟ್ಯಾಪುರ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಂಪುರ ಬೃಹನ್ಮಠದ ಶಿವಕುಮಾರ ಹಾಲಸ್ವಾಮೀಜಿ, ಜೆಡಿಎಸ್ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಗೀತಾ ರವೀಂದ್ರ, ಬಿಜೆಪಿ ಮುಖಂಡ ಎಂ.ಪಿ. ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಹನುಮಂತರಾಯ, ಮಹಾಸಭಾದ ರಾಜ್ಯ ಖಜಾಂಚಿ ಕೆ.ಆರ್. ನಗರದ ಕೆ.ಜಿ. ಮಹದೇವಸ್ವಾಮಿ ಮಾತನಾಡಿದರು. ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯಾಧ್ಯಕ್ಷ ಚನ್ನೇಶ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಪ್ರಶಾಂತ್ ಎಸ್.ಮುನ್ನೋಳಿ ಮತ್ತಿತರರು ಉಪಸ್ಥಿತರಿದ್ದರು.ಅಖೀಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯ ನಿರ್ದೇಶಕ ಎಚ್.ಜಿ. ನಾಗರಾಜ ಶಾಸ್ತ್ರಿ ಸ್ವಾಗತಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಎಂ.ಪಿ.ಎಂ ವಿಜಯಾನಂದಸ್ವಾಮಿ ನಿರೂಪಿಸಿದರು. ಎಂ.ಎಸ್. ಶಾಸ್ತ್ರಿ ಹೊಳೆಮಠ ವಂದಿಸಿದರು. ಓದಿ : ಖಲಿಸ್ತಾನದ ಪರ ಬಿಜೆಪಿ ಕಾರ್ಯಕರ್ತರೇ ಕರಪತ್ರ ಹಂಚಿದ್ದರು: ರಾಮಲಿಂಗಾರೆಡ್ಡಿ