Advertisement

ಸಂಚಾರಿ ಅರಿವು ಕಾರ್ಯಕ್ರಮ

01:27 PM Feb 02, 2021 | Team Udayavani |

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸಂಚಾರಿ ಅರಿವು
ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಉತ್ತರ ಸಂಚಾರಿ ಠಾಣೆ ಪೊಲೀಸ್‌
ಉಪನಿರೀಕ್ಷಕ ಶ್ರೀಧರ್‌, ಚಾಲನಾ ಪರವಾನಗಿ ಇಲ್ಲದೇ ವಾಹನ ಓಡಿಸಬಾರದು. ಅನಾಹುತ ಸಂಭವಿಸಿದರೆ ಜೀವನದ

Advertisement

ಭವಿಷ್ಯ ಹಾಳಾಗುತ್ತದೆ. ಹಾಗಾಗಿ ಕಾನೂನು ಪಾಲಿಸಬೇಕು ಎಂದರು.
ಜಿಲ್ಲೆಯಲ್ಲಿ ಪ್ರತಿ ವರ್ಷ ಅಪಘಾತದಲ್ಲಿ 500 ಜನರು ಪ್ರಾಣ ಕಳೆದುಕೊಳ್ಳುತ್ತಾರೆ. ಜಿಲ್ಲೆಯಲ್ಲಿ ಅಂದಾಜು ಆರು ಲಕ್ಷ ಜನಸಂಖ್ಯೆ ಇದ್ದರೆ ವಾಹನಗಳ ಸಂಖ್ಯೆ ನಾಲ್ಕು ಲಕ್ಷಕ್ಕೂ ಹೆಚ್ಚಾಗಿದೆ. ಆದ್ದರಿಂದ ಸ್ವಂತ ವಾಹನದ ಬಳಕೆ ಕಡಿಮೆ ಮಾಡಿದರೆ ಎಲ್ಲರಿಗೂ ಒಳ್ಳೆಯದು
ಎಂದರು.

ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಪ್ರೊ| ವೀರೇಶ್‌, ಪ್ರೊ| ಭೀಮಣ್ಣ ಸುಣಗಾರ್‌, ಡಾ| ಸೋಮಶೇಖರ್‌, ಪೊಲೀಸ್‌ ಪೇದೆಗಳಾದ ಚಂದ್ರಶೇಖರ್‌, ಹನುಮಂತರಾಯ್‌, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ಓದಿ : ಕಾಪು: ರೈತ ವಿರೋಧಿ, ಬೀಡಿ ಕಾರ್ಮಿಕ ವಿರೋಧಿ ಧೋರಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Advertisement

Udayavani is now on Telegram. Click here to join our channel and stay updated with the latest news.

Next