Advertisement
ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಎಸ್. ಮಂಜುನಾಥ ಕುರ್ಕಿ ಮಾತನಾಡಿ, ಅಜ್ಞಾನ ಮತ್ತು ಮೌಡ್ಯದ ಹೊದಿಕೆಯನ್ನು ಪಕ್ಕಕ್ಕೆ ಸರಿಸಿ ಜನರನ್ನು ಸುಜ್ಞಾನದತ್ತ ತೆಗೆದುಕೊಂಡು ಹೋಗಿದ್ದು ವಚನ ಸಾಹಿತ್ಯ. 12ನೇ ಶತಮಾನಕ್ಕಿಂತ ಮೊದಲು ಅರಮನೆಯಲ್ಲಿ ರಾಜಾಶ್ರಯದಲ್ಲಿದ್ದ ಸಾಹಿತ್ಯವನ್ನು ಬಸವಣ್ಣನವರ ಕಾಲದಲ್ಲಿ ವಚನಗಳ ಮುಖಾಂತರ ಪಂಡಿತರ ಕಪಿಮುಷ್ಟಿಯಿಂದ ಹೊರ ಬಂದಿತು ಎಂದು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಶಿವಮೊಗ್ಗ ಬಸವ ಕೇಂದ್ರದ ಬಸವ ಮರಳಸಿದ್ದ ಸ್ವಾಮೀಜಿ ಮಾತನಾಡಿ, ದೂರದರ್ಶನಗಳು ಪ್ರಸಾರ ಮಾಡುವ ಧಾರವಾಹಿಗಳಿಂದ ಪ್ರೀತಿ, ವಿಶ್ವಾಸ, ನಂಬಿಕೆಗಳು ಮಾಯವಾಗಿ ಭಯ, ಸಂಶಯ ತಲ್ಲಣಗಳು ವೀಕ್ಷಕರಲ್ಲಿ ಉಂಟು ಮಾಡಿವೆ ಎಂದು ಹೇಳಿದರು.