Advertisement

ಮಡಿವಾಳ ಮಾಚಿದೇವರು ಮೇರು ವ್ಯಕ್ತಿ

01:19 PM Feb 02, 2021 | Team Udayavani |

ಹೊನ್ನಾಳಿ: ವಚನಗಳ ಮೂಲಕ ಪ್ರಭಾವ·ಬೀರಿದ ಮಡಿವಾಳ ಮಾಚಿದೇವ ಮೇರುವ್ಯಕ್ತಿಯಾಗಿದ್ದರು ಎಂದು ತಹಶೀಲ್ದಾರ್‌
ಬಸನಗೌಡ ಕೋಟೂರು ಹೇಳಿದರು.

Advertisement

ಸೋಮವಾರ ತಾಲೂಕು ಕಚೇರಿಸಭಾಂಗಣದಲ್ಲಿ ಹಮ್ಮಿಕೊಂಡಿದ್ದಮಡಿವಾಳ ಮಾಚಿದೇವ ಜಯಂತಿಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಡಿವಾಳ ಮಾಚಿದೇವ ವೀರಭದ್ರಅವತಾರ ಎನ್ನುವ ಉಲ್ಲೇಖದಲ್ಲಿ ಅವತರಿಸಿಬರುತ್ತಾರೆ ಎನ್ನುವ ಐತಿಹ್ಯವಿದೆ. ಅವರವಿಚಾರಧಾರೆಗಳನ್ನು ಪರಿಪಾಲಿಸುವುದುನಮ್ಮ ಕರ್ತವ್ಯವಾಗಬೇಕು ಎಂದುಹೇಳಿದರು.

ಮಡಿವಾಳ ಮಾಚಿದೇವಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷಕೆ.ಎಂ. ನಾಗರಾಜಪ್ಪ ಮಾತನಾಡಿ, 12ನೇಶತಮಾನದಲ್ಲಿ ಬಸವಣ್ಣನವರ ಸಮಾನತೆಚಳವಳಿಯ ಅಗ್ರಗಣ್ಯ ನಾಯಕರಾಗಿಮಡಿವಾಳ ಮಾಚಿದೇವರುಹೊರಹೊಮ್ಮಿದರು ಎಂದು ಹೇಳಿದರು.
ತಾಲೂಕು ಅಧ್ಯಕ್ಷ ನಾಗರಾಜಪ್ಪಮಡಿವಾಳ ಸಮುದಾಯವನ್ನು ಪರಿಶಿಷ್ಟಜಾತಿಗೆ ಸೇರಿಸಲು ರಾಜ್ಯ ಸರ್ಕಾರ ಕೇಂದ್ರಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿಕೊಡಬೇಕುಎನ್ನುವ ಮನವಿಯನ್ನು ತಹಶೀಲ್ದಾರ್‌ಗೆಅರ್ಪಿಸಿದರು.

ಪಪಂ ಅಧ್ಯಕ್ಷ ಕೆ.ಎಲ್‌. ಶ್ರೀಧರ್‌,ಗ್ರೇಡ್‌-2 ತಹಶೀಲ್ದಾರ್‌ ಸುರೇಶ್‌,ಸಹಾಯಕ ಕೃಷಿ ನಿರ್ದೇಶಕ ಸಿ.ಟಿ.ಸುರೇಶ್‌, ಪ.ಪಂ ಮುಖ್ಯಾ ಧಿಕಾರಿಎಸ್‌.ಆರ್‌. ವೀರಭದ್ರಯ್ಯ, ಮಡಿವಾಳಮಾಚಿದೇವ ಸಮಾಜದ ತಾಲೂಕುಸಂಘದ ಕಾರ್ಯದರ್ಶಿ ರಾಮಚಂದ್ರಪ್ಪಹಾಗೂ ತಾಲೂಕು ಮಟ್ಟದ ಅ ಕಾರಿಗಳುಉಪಸ್ಥಿತರಿದ್ದರು.

ಓದಿ :·ಮಡಿವಾಳ ಸಮುದಾಯದ ಕೊಡುಗೆ ಅಪಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next