Advertisement

ನಿಜಲಿಂಗಪ್ಪ ಬಡಾವಣೆಯಲ್ಲಿ ಸೈನಿಕರ ಉದ್ಯಾನ

05:25 PM Feb 01, 2021 | Team Udayavani |

ದಾವಣಗೆರೆ: ನಿಜಲಿಂಗಪ್ಪ ಬಡಾವಣೆಯಲ್ಲಿ·ಸೈನಿಕರ ಉದ್ಯಾನ ನಿರ್ಮಿಸಲಾಗುವುದು ಎಂದುದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌ ತಿಳಿಸಿದ್ದಾರೆ.ಭಾನುವಾರ ಸರ್ಕಾರಿ ನೌಕರರ ಸಮುದಾಯಭವನದಲ್ಲಿ ನಡೆದ ದಾವಣಗೆರೆ ಮಾಜಿ ಸೈನಿಕರಸಂಘದ ವಾರ್ಷಿಕ ಸಭೆ ಹಾಗೂ ಗಣ್ಯರಿಗೆ ಸನ್ಮಾನಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿನೌಕರರ ಸಮುದಾಯ ಭವನದ ಎದುರಿನನಿವೇಶನದಲ್ಲಿ ದೂಡಾದಿಂದ 75 ಲಕ್ಷ ವೆಚ್ಚದಲ್ಲಿಸೈನಿಕರ ಉದ್ಯಾನವನ ನಿರ್ಮಾಣ ಮಾಡಲಾಗುವುದುಎಂದು ತಿಳಿಸಿದರು.
ಸೈನಿಕರ ಉದ್ಯಾನವನ ನಿರ್ಮಾಣದ ಟೆಂಡರ್‌ಪ್ರಕ್ರಿಯೆ ನಡೆಯಬೇಕಿದೆ. ಅಮರ್‌ ಜವಾನ್‌…ಸ್ಮಾರಕ ನಿರ್ಮಾಣ ಮಾಡಲಾಗುವುದು. ಸುತ್ತಲೂಕಾಂಪೌಂಡ್‌ ನಿರ್ಮಿಸಿ, ಉದ್ಯಾನದಲ್ಲಿ ಒಂದು ಶೆಡ್‌ನಿರ್ಮಿಸಿ ಸಭೆ, ಸಮಾರಂಭ ನಡೆಸಲು ಅನುಕೂಲಮಾಡಿಕೊಡಲಾಗುವುದು ಎಂದು ತಿಳಿಸಿದರು.

Advertisement

ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರುಹಾಗೂ ಶಾಸಕರ ಜೊತೆಗೂಡಿ ಶೀಘ್ರದಲ್ಲೇಸೈನಿಕರ ಉದ್ಯಾನವನ ನಿರ್ಮಾಣಕ್ಕೆ ಚಾಲನೆ
ನೀಡಲಾಗುವುದು ಎಂದು ತಿಳಿಸಿದರು.
ಇಲ್ಲಿಯವರೆಗೆ ಲಕ್ಷಾಂತರ ಜನರು ದೇಶ ರಕ್ಷಣೆಗೆಪ್ರಾಣ ತ್ಯಾಗ ಮಾಡಿದ್ದಾರೆ. ಮೊದಲು ಸರ್ಜಿಕಲ್‌ದಾಳಿ ನಡೆಸಿದ ಕೀರ್ತಿಗೆ ಪಾತ್ರವಾಗಿರುವ ಶಿವಾಜಿಕಾಲದಲ್ಲಿ ಜಗತ್ತಿಗೆ ಮಾದರಿಯಾಗಿತ್ತು. ಅಂದುದೇಶದ ಬಗ್ಗೆ ಅಪಾರ ಗೌರವವಿತ್ತು. ಆದರೆ,
ಬ್ರಿಟಿಷರ ಶಿಕ್ಷಣ ಪದ್ದತಿಯಿಂದಾಗಿ ದೇಶ ಭಕ್ತಿಯಪಾಠ ದಾಖಲಾಗಿಲ್ಲ. ದೇಶ ಉತ್ತಮವಾಗಬೇಕಾದರೆಒಳ್ಳೆಯ ವಿಷಯವನ್ನು ಮಕ್ಕಳಿಗೆ ಕಲಿಸಬೇಕುಎಂದರು.

ನಗಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್‌.ಟಿ.ವೀರೇಶ್‌ ಮಾತನಾಡಿ, ಬೆಂಗಳೂರುಮಾದರಿಯಲ್ಲೇ ದಾವಣಗೆರೆ ಮಹಾನಗರ
ಪಾಲಿಕೆಯಿಂದ ಮಾಜಿ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ನೇಮಕ ಮಾಡುವ ಸಂಬಂಧ ಚರ್ಚೆನಡೆಯುತ್ತಿದೆ. ನಗರಪಾಲಿಕೆಯಲ್ಲಿ ಯಾವುದಾದರೂಕೆಲಸಗಳಿದ್ದರೆ ಮಾಜಿ ಸೈನಿಕರಿಗೆ ಆದ್ಯತೆ ನೀಡಲುಸಂಬಂಧಿತರ ಗಮನಕ್ಕೆ ತರಲಾಗಿದೆ ಎಂದುತಿಳಿಸಿದರು.
ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷಮನೋಹರ್‌ ಮಹೇಂದ್ರಕರ್‌ ಮಾತನಾಡಿ,ದಾವಣಗೆರೆ ಜಿಲ್ಲೆಯಲ್ಲಿ ಇರುವಂತಹ 2- 3 ಸಾವಿರಮಾಜಿಸೈನಿಕರು, ಕುಟುಂಬದವರ ಅನುಕೂಲಕ್ಕಾಗಿಅಗತ್ಯವಾಗಿರುವ ಕ್ಯಾಂಟೀನ್‌ ಪ್ರಾರಂಭಿಸುವಂತೆಸಂಸದರು ಹಾಗೂ ಸಂಬಂಧಪಟ್ಟ ಅಧಿ ಕಾರಿಗಳಿಗೆಮನವಿ ನೀಡಿದರೂಪ್ರಯೋಜನವಾಗಿಲ್ಲ ಎಂದುಬೇಸರ ವ್ಯಕ್ತಪಡಿಸಿದರು.
ಮಾಜಿ ಸೈನಿಕ ಬೇತೂರು ಬಸವರಾಜಪ್ಪಮಾತನಾಡಿ, ಸೈನ್ಯ ಸೇರ ಬಯಸುವಂತಹರಿಗೆಅಗತ್ಯ ತರಬೇತಿ ನೀಡಲು ಅಕಾಡೆಮಿ ಸ್ಥಾಪನೆಗೆ
ಸಂಬಂಧಿತರು ಅವಕಾಶ ಮಾಡಿಕೊಡಬೇಕುಎಂದರು.

ಸಂಘದ ಜಿಲ್ಲಾ ಅಧ್ಯಕ್ಷ ಸತ್ಯಪ್ರಕಾಶ್‌,ಪ್ರಧಾನ ಕಾರ್ಯದರ್ಶಿ ಶಶಿಕಾಂತ್‌, ಮಾಜಿ ಅಧ್ಯಕ್ಷರಾಮಚಂದ್ರ, ಖಜಾಂಚಿ ದಾಸಪ್ಪ, ಪ್ರಮೋದ್‌ಕುಮಾರ್‌ ಇತರರು ಇದ್ದರು.

 

Advertisement

ಓದಿ···ಕೆರೆಬಿಳಚಿ ಗ್ರಾಪಂ ಕಾಂಗ್ರೆಸ್‌ ವಶಕ್ಕೆ

Advertisement

Udayavani is now on Telegram. Click here to join our channel and stay updated with the latest news.

Next