Advertisement

ಶ್ರೀಗಳಿಗೆ ಕೊಟ್ಟ ಮಾತು ಮುಖ್ಯಮಂತ್ರಿಗಳು ಈಡೇರಿಸಲಿ

05:13 PM Feb 01, 2021 | Team Udayavani |

ಮಾಯಕೊಂಡ: ಪಂಚಮಸಾಲಿ·ಸಮುದಾಯಕ್ಕೆ 2ಎ ಮೀಸಲಾತಿನೀಡುವುದಾಗಿ ಗುರುಗಳಿಗೆ ನೀಡಿದ್ದಮಾತು ಈಡೇರಿಸದೇ ಮುಖ್ಯಮಂತ್ರಿವಚನ ಭ್ರಷ್ಟರಾಗಿದ್ದಾರೆ ಎಂದುಪಂಚಮಸಾಲಿ ಸಮಾಜದ ರಾಷ್ಟ್ರೀಯಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ
ಕಿಡಿಕಾರಿದರು.

Advertisement

ಸಮೀಪದ ಆನಗೋಡಿನಲ್ಲಿಮೀಸಲಾತಿ ಹೋರಾಟದ ಜಾಗೃತಿಸಭೆಯಲ್ಲಿ ಅವರು ಮಾತನಾಡಿದರು.ಅವಕಾಶ ವಂಚಿತಪಂಚಮಸಾಲಿ ಸಮಾಜದ ಬಡಮಕ್ಕಳ ಅಭ್ಯುದಯಕ್ಕಾಗಿಯೇಮೀಸಲಾತಿ ಹೋರಾಟವೇಹೊರತು ರಾಜಕೀಯ ಲಾಭದಉದ್ದೇಶಕ್ಕಾಗಿ ಅಲ್ಲ. ಹೋರಾಟಕ್ಕೆಎಲ್ಲಾ ಸಮಾಜದ ಅಭೂತಪೂರ್ವಬೆಂಬಲ ದೊರೆತಿದೆ. ನೌಕರಿ, ಶಿಕ್ಷಣವಂಚಿತ ಪಂಚಮಸಾಲಿಗಳು ತಮ್ಮಹಕ್ಕೋತ್ತಾಯ ಮಾಡಿ ಗುರುಗಳನೇತೃತ್ವದಲ್ಲಿ ಪಾದಯಾತ್ರೆ ನಡೆಸಿದರೂಸರ್ಕಾರ ನಮ್ಮ ಬೇಡಿಕೆ ಮನ್ನಿಸಿಆಯೋಗದ ವರದಿ ತರಿಸಿ ಆದೇಶಮಾಡುವ ಕೆಲಸ ಮಾಡಿಲ್ಲ ಎಂದರು.

ಸಚಿವ ಮುರುಗೈಶ್‌ ನಿರಾಣಿಪಾದಯಾತ್ರೆ ನಿಲ್ಲಿಸಬೇಕು ಎಂದುಹೇಳಿಕೆ ನೀಡಿ, ದಿಕ್ಕು ತಪ್ಪಿಸುವ ಕೆಲಸಮಾಡುವುದನ್ನು ನಿಲ್ಲಿಸಬೇಕು.
ಇದು ಸಮುದಾಯದ ಅಸ್ತಿತ್ವದಪ್ರಶ್ನೆ ಎಂಬುದು ಮರೆಯಬಾರದುಎಂದರು.

ಬಸವಜಯ ಮೃತ್ಯುಂಜಯಸ್ವಾಮೀಜಿ ಮಾತನಾಡಿ, ಲಿಂಗಾಯತರಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವಪಂಚಮಸಾಲಿಗಳ ಮೀಸಲಾತಿಬೇಡಿಕೆ ನ್ಯಾಯಯುತವಾದದ್ದು.ಹೋರಾಟದಿಂದ ಹಿಂದೆ ಸರಿಯುವಪ್ರಶ್ನೆಯೇಯಿಲ್ಲ. ಕಟ್ಟಕಡೆಯಪಂಚಮಸಾಲಿಯ ಉದ್ದಾರವೇ ನಮ್ಮ
ಹೋರಾಟದ ಗುರಿ. ಹಾಲುಮತ,ವಾಲ್ಮೀಕಿ, ತರಳಬಾಳು ಶ್ರೀ ಸೇರಿಸರ್ವ ಸಮಾಜದ ಗುರುಗಳು ಬೆಂಬಲನೀಡಿದ್ದಾರೆ ಎಂದು ಸ್ಮರಿಸಿದರು.ಪಾದಯಾತ್ರೆ ಸಮಿತಿ ಜಿಲ್ಲಾಧ್ಯಕ್ಷಎಚ್‌.ಎಸ್‌. ನಾಗರಾಜ್‌, ಬೆಂಗಳೂರಿನಬಸವಾನಂದ ಶ್ರೀಗಳು, ಎಪಿಎಂಸಿಅಧ್ಯಕ್ಷ ಅಣಜಿ ಚಂದ್ರಶೇರ್ಖ,ಜಿಪಂ ಸದಸ್ಯ ಕೆ.ಎಸ್‌. ಬಸವಂತಪ್ಪ,ಮಹಾನಗರ ಪಾಲಿಕೆ ಸದಸ್ಯ ಸೋಗಿಚಂದ್ರಶೇಖರ್‌ ಮಾಯಕೊಂಡ,ಕೆರೆಯಾಗಳಹಳ್ಳಿ ಅಣಜಿ, ಗುಡಾಳು,ನರಗನಹಳ್ಳಿ, ಬಾಡ ಶಂಕರನಹಳ್ಳಿ,ಕಿತ್ತೂರು, ಹುಲಿಕಟ್ಟೆ ಗ್ರಾಮಗಳಪಂಚಮಸಾಲಿ ಬಂಧುಗಳುಉಪಸ್ಥಿತರಿದ್ದರು

ಓದಿ :·ಮಂಗಳೂರಿನ ಹೋಟೆಲ್ ನಲ್ಲಿ ಯುವತಿಯ ಮೇಲೆ ದಾಳಿ ಪ್ರಕರಣ: ಪ್ರೇಮ ವೈಫಲ್ಯವೇ ಕಾರಣ, ಮೂವರ ಬಂಧನ

Advertisement
Advertisement

Udayavani is now on Telegram. Click here to join our channel and stay updated with the latest news.

Next