ಕನ್ನಡಭಿಮಾನಿ ಬಳಗದಿಂದ ಆಯೋಜಿಸಲಾಗಿದ್ದ, ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲಿ 120ಕ್ಕೂ ಹೆಚ್ಚು ಅಂಕಗಳಿಸಿದ ಮಕ್ಕಳಿಗೆ ಕನ್ನಡ ಕಸ್ತೂರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆಯೆಂದರೆ ಅಸಡ್ಯ ಮಾಡುವಂತಹ ದಿನಮಾನದಲ್ಲಿ ಭಾಷಾಭಿಮಾನ ಇಟ್ಟುಕೊಂಡು ಹೆಚ್ಚು ಅಂಕಗಳಿಸಿ ಕನ್ನಡಭಾಷೆ ಮೇಲಿಟ್ಟಿರುವ
ಅಭಿಮಾನ ಶ್ಲಾಘನೀಯ. ತಂತ್ರಜ್ಞಾನ, ವಿಜ್ಞಾನ ಬೆಳೆದಂತೆ ನಾವು ನಮ್ಮ ಭಾಷೆಯಿಂದ ದೂರವಾಗುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನು ಓದುವಂತಾಗಿದೆ. ಭಾಷೆ ಬೆಳೆವಣಿಗೆಗೆ ನಿರಂತರ ಓದು ಬರಹ ಮುಖ್ಯ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಎಂ.ಯು ಚನ್ನಬಸಪ್ಪ ಮಾತನಾಡಿ, ಸರಕಾರಿ ಶಾಲೆಗಳಲ್ಲಿ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ. ಖಾಸಗಿ ಶಾಲೆಗಳು ಹಣ ಮಾಡುವ ಸಂಸ್ಥೆಗಳಾಗಿ ಬೆಳೆಯುತ್ತಿವೆ. ಜೊತೆಗೆ ಮಾತೃಭಾಷೆಗೆ ಆದ್ಯತೆ ನೀಡದೆ ಮಕ್ಕಳನ್ನು ಇಂಗ್ಲಿಷ್ ಗುಲಾಮರನ್ನಾಗಿ
ಮಾಡುತ್ತಿವೆ ಎಂದು ವಿಷಾಧಿಸಿದರು.
Advertisement
ತಹಶೀಲ್ದಾರ್ ಪಟ್ಟರಾಜಗೌಡ ಮಾತನಾಡಿದರು. ಕನ್ನಡ ಭಾಷೆಯಲ್ಲಿ 120ಕ್ಕೂ ಹೆಚ್ಚು ಅಂಕಗಳಿಸಿದ 125 ಮಕ್ಕಳಿಗೆ ಕನ್ನಡ ಕಸ್ತೂರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ, ಹರಿಹರದ ರಾಮಕೃಷ್ಣ ಆಶ್ರಮದ ಶಾರದ ದೇಶಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರವೇ ಮಹಿಳಾ ಘಟಕದ ಅಧ್ಯಕ್ಷ ಜ್ಯೋತಿ ಕೋರಿ, ಕನ್ನಡಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಎಸ್. ಶಂಕರಪ್ಪ, ಮಂಜುನಾಥ್, ಯುಗಧರ್ಮ ರಾಮಣ್ಣ ಇತರರಿದ್ದರು