ಚನ್ನಗಿರಿ: ಸಿದ್ಧರಾಮರು ಕರ್ಮಯೋಗಿ ಸಿದ್ಧರಾಮೇಶ್ವರರು ಎಂದೇ ಪ್ರಸಿದ್ಧಿ ಪಡೆದಿದ್ದಾರೆ.ವರ್ಗ, ವರ್ಣ,ಲಿಂಗ, ಜಾತಿ ಭೇದವಿಲ್ಲದ ಶ್ರಮ ಸಂಸ್ಕೃತಿ ಪ್ರತಿಪಾದಿಸಿದ್ದಾರೆ ಎಂದುತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಯು. ಚನ್ನಬಸಪ್ಪ ಹೇಳಿದರು.
ನಿವೃತ್ತ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್‌ವತಿಯಿಂದ ಹಮ್ಮಿಕೊಂಡಿದ್ದ ಮಠದ ಪಾರ್ವತಮ್ಮ, ಎಂ.ಎಸ್. ಬಸವರಾಜಯ್ಯ,ಬಸಮ್ಮ, ಮಠದ ಮಲ್ಲಯ್ಯ ತಿಪ್ಪಗೊಂಡನಹಳ್ಳಿ, ಸುಣಿಗೆರೆ ಶಿವಲಿಂಗಮ್ಮ ಗೌಡ್ರಮಹಾದೇವಪ್ಪ ಮಲ್ಲಿಗೆರೆ ಮಹಾದೇವಪ್ಪ, ಗೌರಮ್ಮ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.
ಬಸವಣ್ಣ ಭಕ್ತಿಯ ಸಂಕೇತವಾದರೆ, ಅಲ್ಲಮ ವೈರಾಗ್ಯದ ಸಂಕೇತ. ಚನ್ನಬಸವಣ್ಣಜ್ಞಾನದ ಸಂಕೇತವಾದರೆ, ಸಿದ್ಧರಾಮರು ಕ್ರಿಯೆಯ ಕರ್ಮಯೋಗದಿಂದ ಶಿವಯೋಗದಕಡೆಗೆ, ಕ್ರಿಯೆಯಿಂದ ಜ್ಞಾನದ ಕಡೆಗೆ ನಡೆದು ಹೋಗಿರುವ ಮಹಾನ್ ಸಾಧಕರಾಗಿದ್ದಾರೆಎಂದರು.
ನಿವೃತ್ತ ಉಪನ್ಯಾಸಕ ಸಾಸ್ವೆಹಳ್ಳಿ ಕೆ.ಪಿ. ದೇವೇಂದ್ರಯ್ಯ ಒಕ್ಕಲಿಗ ಮುದ್ದಣ್ಣಶರಣರ ಕುರಿತು ಮಾತನಾಡಿದರು. ಜಿಲ್ಲಾ ಶಸಾಪ ಅಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಅಧ್ಯಕ್ಷತೆವಹಿಸಿದ್ದರು. ಚನ್ನಗಿರಿ ತಾಲೂಕು ಶಸಾಪ ಅಧ್ಯಕ್ಷ ಆರ್. ಶಿವಮೂರ್ತಿ, ದತ್ತಿ ದಾಸೋಹಿಮಠದ ಶಂಕ್ರಯ್ಯ, ಎಚ್.ಎಂ. ಮಲ್ಲಿಕಾರ್ಜುನಪ್ಪ ವೇದಿಕೆಯಲ್ಲಿದ್ದರು. ಚಿನ್ನಸ್ವಾಮಿಸ್ವಾಗತಿಸಿ ದರು. ಸೋಮಶೇಖರ್ ಶರಣು ಸಮರ್ಪಿಸಿದರು.
ಓದಿ :
ವದಂತಿ ನಂಬಿ ಶೆಡ್ ನಿರ್ಮಾಣಕ್ಕೆ ಯತ್ನ