ಎಚ್ಚರಿಕೆ ನೀಡಿದರು.
ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿಯ ವರೊಂದಿಗೆ ಶನಿವಾರ ನಗರದ ರಾಣಿ ಚೆನ್ನಮ್ಮ ವೃತ್ತದಲ್ಲಿ ಬಾರುಕೋಲು ಬೀಸುವ ಮೂಲಕ ಪಾದಯಾತ್ರೆ ಮುಂದು ವರಿಸಿ ಶ್ರೀಗಳು ಮಾತನಾಡಿದರು. ಮುಖ್ಯಮಂತ್ರಿ ಯಡಿಯೂ ರಪ್ಪ ಅವರು ಲಿಂಗಾಯತ ಸಮಾಜದ ಒಳಪಂಗಡವೊಂದರ ನಾಯಕರು. ಅವರು ತಮ್ಮ ಪಂಗಡಕ್ಕೆ 2ಎ ಮೀಸಲಾತಿ ಪಡೆದಾಗ ನಾವೆಲ್ಲ ಬೆಂಬಲಿಸಿದ್ದೇವೆ. ಅವರಿಗೆ ಯಾರಾದರೂ ತಪ್ಪು ತಿಳಿವಳಿಕೆ ನೀಡಿದ್ದರೆ ಮುಖ್ಯ ಮಂತ್ರಿಯವರು ಕೂಡಲೇ ಅದನ್ನು ತೆಗೆದುಹಾಕಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
Advertisement
ಅಧಿವೇಶನದಲ್ಲಿ ಚರ್ಚಿಸಿ: ರಾಜ್ಯದಲ್ಲಿ 17 ಜನ ಪಂಚಮ ಸಾಲಿ ಶಾಸಕರಿದ್ದು ಎಲ್ಲರೂ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಬೇಕು. ಶಾಸಕರು ಎಲ್ಲ ಸಮುದಾಯದಿಂದ ಆಗಿರಬಹುದು. ಆದರೆ ಟಿಕೆಟ್ ಕೊಡುವಾಗ ಪಂಚಮಸಾಲಿ ಎಂಬ ಜಾತಿ ನೋಡಿಯೇ ಕೊಡಲಾಗಿದೆ ಎಂಬುದನ್ನು ಶಾಸಕರು ಅರಿಯಬೇಕು. ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಮುಖ್ಯಮಂತ್ರಿಯವರ ಮೇಲೆ ಒತ್ತಡ ಹಾಕಬೇಕು. ಉಳಿದವರಿಗೆ ನ್ಯಾಯ ಕೊಡುತ್ತೀರಿ, ಪಂಚಮಸಾಲಿಗಳಿಗೆ ನ್ಯಾಯ ಏಕೆ ಒದಗಿಸುತ್ತಿಲ್ಲ ಎಂದು ಕೇಳಬೇಕು.ಮೀಸಲಾತಿ ಕೊಡದಿದ್ದರೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಯಡಿಯೂರಪ್ಪ ಅವರ ಮೇಲೆ ಒತ್ತಡ ಹಾಕಬೇಕು. ಈ ವಿಚಾರದಲ್ಲಿ ಪಂಚಮಸಾಲಿ ಸಮಾಜದ ಎಲ್ಲ ಶಾಸಕರು ಸಹ ಒಗ್ಗಟ್ಟು ಪ್ರದರ್ಶಿಸಬೇಕು ಎಂದರು.
ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿ, 2ಎ ಮೀಸಲಾತಿ ಪಂಚಮಸಾಲಿಗಳಿಗೆ ನೀಡುವ ಭಿಕ್ಷೆಯಲ್ಲ, ಅದು ಹಕ್ಕು. ಲಿಂಗಾಯತದ ಅನೇಕ ಒಳಪಂಗಡಗಳು 2ಎ ಮೀಸಲಾತಿಯನ್ನು ಈಗಾಗಲೇ ಪಡೆದಿವೆ. ಅದು ಪಂಚಮಸಾಲಿಗಳಿಗೂ ಸಿಗಬೇಕು. ಉಭಯ ಶ್ರೀಗಳು ಸಮಾಜದ ಉದ್ಧಾರದ ಹೆದ್ದಾರಿಯಲ್ಲಿ ನಡೆಯುತ್ತಿದ್ದೇವೆ. ಎಲ್ಲರೂ ಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕು
ಎಂದರು.
ಅವರೇ ಹೊಣೆ ಎಂದು ಎಚ್ಚರಿಕೆ ನೀಡಿದರು.
Related Articles
Advertisement