Advertisement

ಪಾದಯಾತ್ರೆಗೆ ಅದ್ದೂರಿ·ಸ್ವಾಗತ

03:16 PM Jan 29, 2021 | Team Udayavani |

ಹರಿಹರ: ಪಂಚಮಸಾಲಿಗಳಿಗೆ 2ಎಮೀಸಲಾತಿ ನೀಡಲು ಆಗ್ರಹಿಸಿಕೂಡಲಸಂಗಮದಿಂದ ಬೆಂಗಳೂರಿಗೆಬಸವ ಜಯ ಮೃತ್ಯುಂಜಯ ಶ್ರೀಗಳು
ಕೈಗೊಂಡಿರುವ ಪಂಚಲಕ್ಷ ಪಾದಯಾತ್ರೆಗುರುವಾರ ಸಂಜೆ ತಾಲ್ಲೂಕಿನ ಗಡಿ
ಪ್ರವೇಶಿಸಿತು.

Advertisement

ಗುತ್ತೂರಿನ ಸತ್ಯ ಗಣಪತಿದೇವಸ್ಥಾನದ ಬಳಿ ಶ್ರೀಗಳಿಗೆ ಹೂಮಾಲೆಹಾಕುವ ಮೂಲಕ 17ನೇ ದಿನದಪಾದಯಾತ್ರೆಯನ್ನು ಮಾಜಿ ಶಾಸಕ ಹೆಚ್‌.ಎಸ್‌.ಶಿವಶಂಕರ್‌, ಸ್ವಾಗತ ಸಮಿತಿಯದೀಟೂರು ಶೇಖಪ್ಪ ಸ್ವಾಗತಿಸಿದರು.ಶ್ರೀಗಳು ಗಣೇಶನ ದೇವಸ್ಥಾನದಲ್ಲಿಪೂಜೆ ಸಲ್ಲಿಸಿದ ನಂತರ ನೂರಾರೂಮಹಿಳೆಯರ ಪೂರ್ಣ ಕುಂಭಮೇಳ, ಆನೆ, ಸಮಾಳ, ನಂದಿಕೋಲುಸೇರಿದಂತೆ ವಿವಿಧ ಕಲಾತಂಡಗಳೊಂದಿಗೆಶಿವಮೊಗ್ಗ-ಹೊಸಪೇಟೆ ರಸ್ತೆಯಲ್ಲಿಮೆರವಣಿಗೆ ಮೂಲಕ ಪಾದಯತ್ರೆಜಾಗೃತಿ ಸಮಾವೇಶ ನಡೆಯುವ ನಗರದ
ಗಾಂಧಿ  ಮೈದಾನ ತಲುಪಿತು.

ಜೈ ಪಂಚಮಸಾಲಿ ಬರಹ ಮುದ್ರಿತಗಾಂ ಧಿ ಟೋಪಿ, ಶಾಲ್‌ಗ‌ಳನ್ನು ಧರಿಸಿದ್ದಸಾವಿರಾರು ಜನರು ಮೆರವಣಿಗೆಗೆಮೆರುಗು ತಂದರು. ದಾರಿಯುದ್ದಕ್ಕೂಮಜ್ಜಿಗೆ ಮತ್ತಿತರೆ ಪಾನೀಯ ವಿತರಣೆಮಾಡುತ್ತಿದ್ದ ದೃಶ್ಯ ಕಂಡು ಬಂತು.ಮಾರ್ಗ ಮಧ್ಯೆ ಗುತ್ತೂರು, ಹಳೆಹರಾಪುರ
ಗ್ರಾಮಸ್ಥರು, ಎ.ಕೆ.ಕಾಲೋನಿ, ಹೊಸಹರಾಪುರದ ನಿವಾಸಿಗಳು ಶ್ರೀಗಳಿಗೆ ಆರತಿ
ಬೆಳಗಿ ಬರಮಾಡಿಕೊಂಡರು.

ಮಾಜಿ ಸಚಿವ ಬಸನಗೌಡ ಪಾಟೀಲ್‌ಯತ್ನಾಳ, ಪಾದಯಾತ್ರೆ ಹೋರಾಟಸಮಿತಿ ಅಧ್ಯಕ್ಷ ವಿಜಯಾನಂದಕಾಶಪ್ಪನವರ, ಮಾಜಿ ಸಂಸದ
ಮಂಜುನಾಥ್‌ ಕುನ್ನೂರು, ದಾವಣಗೆರೆಮೇಯರ್‌ ಅಜಯ್‌ಕುಮಾರ್‌,ಸಮಾಜದ ಮುಖಂಡರಾದ ಎಚ್‌.ಎಸ್‌.ಅರವಿಂದ್‌, ಎಂ.ಜಿ. ಪರಮೇಶ್ವರ ಗೌಡ,ಮಂಜುನಾಥ್‌ ದೇಸಾಯಿ, ಹೊಸಳ್ಳಿನಾಗಪ್ಪ, ಗೌಡ್ರ ಪುಟ್ಟಪ್ಪ, ನೆಲ್ಲಿ ಬಸವರಾಜ್‌,ಕತ್ತಲಗೆರೆ ರಾಜು, ಜಿ.ನಂಜಪ್ಪ,
ಕಲ್ಲಯ್ಯ, ಕಮಲಾಪುರದ ಶಿವನಗೌಡ,ಬಸವರಾಜ್‌ ಪೂಜಾರ್‌, ಕುಮಾರ್‌ಹೊಳೆಸಿರಿಗೆರೆ, ನಗರಸಭೆ ಸದಸ್ಯ ಪಿ.ಎನ್‌.ವಿರುಪಾಕ್ಷ, ಫೈನಾನ್ಸ್‌ ಮಂಜುನಾಥ್‌,ಚೂರಿ ಜಗದಿಶ್‌, ಅಲ್ತಾಫ್‌, ಸುರೇಶ್‌ಹಾದಿಮನಿ, ಪ್ರೇಮ್‌ ಕುಮಾರ್‌, ಲತಾಕೊಟ್ರೇಶ್‌, ರಾಗಿಣಿ ಪ್ರಕಾಶ್‌, ಜಯ್ಯಮ್ಮ,ಉಮಾ, ಗಾಯತ್ರಮ್ಮ, ರುದ್ರಮ್ಮ,ನೀಲಮ್ಮ ಮತ್ತಿತರರಿದ್ದರು.

 

Advertisement

ಓದಿ :·ನೀಲಗಿರಿ ತೋಪಿಗೆ ಬೆಂಕಿಯಿಟ್ಟ  ಕಿಡಿಗೇಡಿಗಳು

Advertisement

Udayavani is now on Telegram. Click here to join our channel and stay updated with the latest news.

Next