Advertisement

ಅನುದಾನ ಬೇಡ, ಬದುಕಲು ಅವಕಾಶ ಕೊಡಿ

03:10 PM Jan 29, 2021 | Team Udayavani |

ಹರಿಹರ: ನಮ್ಮ ಮಠಕ್ಕೆ ಅನುದಾನ ಬೇಕಿಲ್ಲ, ಮುಖಂಡರಿಗೆ ಮಂತ್ರಿಸ್ಥಾನ ನೀಡಬೇಕಿಲ್ಲ, ಆದರೆ ಬಡ ಪಂಚಮಸಾಲಿಗಳಿಗೆ ಸ್ವಾಭಿಮಾನದಿಂದ ಬದುಕಲು ಅವಕಾಶ ಕೊಡಿ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

Advertisement

2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪಾದಯಾತ್ರೆ ಗುರುವಾರ ನಗರಕ್ಕೆ ಆಗಮಿಸಿದ್ದ ನಿಮಿತ್ತ ನಗರದ ಗಾಂಧಿ  ಮೈದಾನದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಸಮಾಜದ ಮುಖಂಡರಿಗೆ ಮಂತ್ರಿ ಸ್ಥಾನ, ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಕೇಳುತ್ತಿಲ್ಲ. ನಮ್ಮ ಮಠ-ಪೀಠಕ್ಕೆ ಅನುದಾನ ಕೇಳುತ್ತಿಲ್ಲ. ಪಂಚಮಸಾಲಿ ಸಮಾಜದ ಬಡ ವಿದ್ಯಾರ್ಥಿಗಳು ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ಪಡೆದು ಅಭಿವೃದ್ದಿ ಹೊಂದಲು ಅವಕಾಶ ಮಾಡಿಕೊಡಿ ಎಂಬುದಷ್ಟೆ ನನ್ನ ಬೇಡಿಕೆಯಾಗಿದೆ ಎಂದರು.
ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪಗೆ ಸಮಾಜದ ಜನರ ಸ್ಥಿತಿಗತಿಯ ಬಗ್ಗೆ ತಿಳಿಸಿ, 2ಎ ಮೀಸಲಾತಿಗೆ ಕೋರಿದ್ದೆ,
ಅವರೂ ಒಪ್ಪಿದ್ದರು. ಆದರೆ ರಾಜ್ಯದ ಲಿಂಗಾಯ್ತರನ್ನು ಓಲೈಸಿ ಸಿಎಂ ಆಗಿರುವ ಬಿಎಸ್‌ವೈ ಸಮಾಜದ ಜನರನ್ನು ಮರೆತಿದ್ದರಿಂದ, ನಮ್ಮ ಬೇಡಿಕೆ ಕಡೆಗಣಿಸಿದ್ದರಿಂದ ಈ ಪಾದಯಾತ್ರೆ ಅನಿವಾರ್ಯವಾಯ್ತು ಎಂದರು.

ನನಗೆ ಬಂಗಾರದ ಮಠ ಬೇಡ, ಸಮಾಜದ ಮಠ ಬೇಕು. ನಮ್ಮ ಜನ ಬಡ ಕೃಷಿಕರು, ಕೂಲಿ ಕಾರ್ಮಿಕರು, ಶ್ರಮಿಕರು ಇವರಿಗೆ ಒಳಿತು ಮಾಡುವುದೆ ತಮ್ಮ ಧ್ಯೇಯ. ಹರಿಹರ ಪೀಠದ ಶ್ರೀಗಳೂ ಸಹ ಬಂದು ಜತೆಗೂಡಿದ್ದರೆ ಸಂತಸವಾಗುತ್ತಿತ್ತು, ಆದರೆ ಒಬ್ಬ ಸ್ವಾಮೀಜಿ ಅಥವಾ ವ್ಯಕ್ತಿಗಿಂತ ಸಮಾಜದ ಹಿತ ಮುಖ್ಯ. ವಿಧಾನಸೌದ ಮುತ್ತಿಗೆ ದಿನಾಂಕ ಘೋಷಣೆ ಮಾಡಲಾಗುವುದು. ಅಂದು ಎಲ್ಲರೂ ಭಾಗವಹಿಸಿ ಹೋರಾಟ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಬಾಲೆಹೂಸುರಿನ ದಿಂಗಾಲೇಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವ ಬಸನಗೌಡ ಪಾಟೀಲ್‌ ಯತ್ನಾಳ, ಪಿ.ಸಿ. ಸಿದ್ದನಗೌಡ, ವಿಜಯಾನಂದ ಕಾಶಪ್ಪನವರ, ಮಂಜುನಾಥ್‌ ಕುನ್ನೂರು, ಅಜಯ್‌ಕುಮಾರ್‌, ಎಂ.ಜಿ ಪರಮೇಶ್ವರ ಗೌಡ, ಮಂಜುನಾಥ್‌ ದೇಸಾಯಿ, ರಾಜಶೇಖರಪ್ಪ ಇದ್ದರು.

ಓದಿ : ಅಶ್ವಥ್ ನಾರಾಯಣ, ಮಾಧುಸ್ವಾಮಿ ಜವಾಬ್ದಾರಿ ಹುದ್ದೆ ನಿಭಾಯಿಸುವುದು ಸೂಕ್ತವಲ್ಲ: ಸದನ ಸಮಿತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next